ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಶಂಕೆ!

By Suvarna NewsFirst Published Jul 15, 2021, 1:21 PM IST
Highlights

* ವಿಂಬಲ್ಡನ್ ಗ್ರ್ಯಾನ್‌ಸ್ಲಾಂನಲ್ಲಿ ಮ್ಯಾಚ್‌ ಫಿಕ್ಸಿಂಗ್ ನಡೆದಿರುವ ಶಂಕೆ

* ಪುರುಷರ ಡಬಲ್ಸ್ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆದಿರುವ ಆರೋಪ

* ಮ್ಯಾಚ್‌ ಫಿಕ್ಸಿಂಗ್‌ ಕುರಿತಂತೆ ತನಿಖೆ ಆರಂಭ

ಲಂಡನ್(ಜು.15)‌: ಕಳೆದ ವಾರ ಮುಕ್ತಾಯಗೊಂಡ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯ 2 ಪಂದ್ಯಗಳಲ್ಲಿ ಫಿಕ್ಸಿಂಗ್‌ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆ ಪಂದ್ಯಗಳ ವೇಳೆ ಅಕ್ರಮ ಬೆಟ್ಟಿಂಗ್‌ ಮಾದರಿ ಪತ್ತೆಯಾಗಿದೆ. 

ಒಂದು ಸಿಂಗಲ್ಸ್ ಮತ್ತೊಂದು ಡಬಲ್ಸ್‌ ಪಂದ್ಯದಲ್ಲಿ ಮ್ಯಾಚ್‌ ಫಿಕ್ಸಿಂಗ್ ನಡೆದಿರುವ ಸಾಧ್ಯೆತೆಯಿದೆ ಎಂದು ವರದಿಯಾಗಿದೆ. ಆದರೆ ಪಂದ್ಯಗಳು ಯಾವುವು ಅನ್ನುವುದನ್ನು ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌(ಐಟಿಎಫ್‌) ಆಗಲಿ, ಆಯೋಜಕರಾಗಲಿ ಬಹಿರಂಗಗೊಳಿಸಿಲ್ಲ. ಈ ಪ್ರಕರಣವನ್ನು ಅಂತಾರಾಷ್ಟ್ರೀಯ ಟೆನಿಸ್‌ ಭದ್ರತಾ ಸಂಸ್ಥೆ (ಐಟಿಐಎ) ತನಿಖೆ ನಡೆಸಲಿದೆ.

ಮೊದಲ ಮ್ಯಾಚ್‌ ಫಿಕ್ಸಿಂಗ್ ಅನುಮಾನ ವ್ಯಕ್ತವಾಗಿರುವುದು, ಪುರುಷರ ಡಬಲ್ಸ್‌ ವಿಭಾಗದಲ್ಲಿನ ಮೊದಲ ಸುತ್ತಿನ ಪಂದ್ಯದಲ್ಲಿ ಸಾಕಷ್ಟು ಬೆಟ್ಟಿಂಗ್ ನಡೆದಿತ್ತು ಎನ್ನುವ ಅಂಶ ಕೇಳಿ ಬರಲಾರಂಭಿಸಿದೆ. ಇನ್ನು ಎರಡನೇ ಮ್ಯಾಚ್‌ ಫಿಕ್ಸಿಂಗ್‌ ಸಿಂಗಲ್ಸ್‌ ವಿಭಾಗದಲ್ಲಿ ನಡೆದಿದೆ ಎನ್ನಲಾಗಿದ್ದು, ಜರ್ಮನ್‌ ಆಟಗಾರ ನಾಡಿದ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್‌ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿ ಬರಲಾರಂಭಿಸಿದೆ. ಮೊದಲ ಸುತ್ತಿನ ವಿಂಬಲ್ಡನ್ ಸಿಂಗಲ್ಸ್‌ ಪಂದ್ಯದಲ್ಲಿ ಜರ್ಮನ್ ಆಟಗಾರನ ಎದುರಾಳಿ ಆಟಗಾರನ ಮೇಲೆ ಶಂಕೆ ವ್ಯಕ್ತವಾಗಿದೆ.

ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿ ಫೆಡರರ್, ನಡಾಲ್ ದಾಖಲೆ ಸರಿಗಟ್ಟಿದ ಜೊಕೊವಿಚ್!

2021ನೇ ಸಾಲಿನ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. 

click me!