* ವಿಶ್ವ ಬ್ಯಾಡ್ಮಿಂಟನ್ ಟೂರ್ನಿಗೆ ಆತಿಥ್ಯ ಪಡೆದ ಭಾರತ
* ಭಾರತದಲ್ಲಿ ನಡೆಯಲಿದೆ 2026ರ ವಿಶ್ವ ಬ್ಯಾಡ್ಮಿಂಟನ್ ಟೂರ್ನಿ
* ಈ ಮೊದಲು 2009ರಲ್ಲಿ ಹೈದರಾಬಾದ್‌ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಡೆದಿತ್ತು.
ನವದೆಹಲಿ(ಜು.14): 2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಭಾರತ ಆತಿಥ್ಯ ವಹಿಸಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯುಎಫ್) ತಿಳಿಸಿದೆ.
ಕೋವಿಡ್-19 ಕಾರಣ ಈ ವರ್ಷದ ಚೀನಾದಲ್ಲಿ ನಡೆಯಬೇಕಿದ್ದ ಚಾಂಪಿಯನ್‌ಶಿಪ್ ಅನ್ನು ಚೀನಾದಿಂದ ಫಿನ್‌ಲ್ಯಾಂಡ್‌ಗೆ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ 2023ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಸುದಿರ್‌ಮನ್ ಕಪ್ ಅನ್ನು ಚೀನಾಗೆ ಸ್ಥಳಾಂತರಿಸಲಾಗಿದ್ದು, ಭಾರತಕ್ಕೆ 2026ರ ವಿಶ್ವ ಚಾಂಪಿಯನ್‌ಶಿಪ್‌ನ ಆತಿಥ್ಯವನ್ನು ನೀಡಲಾಗಿದೆ ಎಂದು ಬಿಡಬ್ಲ್ಯುಎಫ್ ಮಂಗಳವಾರ ಪ್ರಕಟಿಸಿದೆ. ಈ ಮೊದಲು 2009ರಲ್ಲಿ ಹೈದರಾಬಾದ್‌ನಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಡೆದಿತ್ತು. ಇದೀಗ ಭಾರತಕ್ಕೆ 2ನೇ ಬಾರಿ ಆತಿಥ್ಯ ವಹಿಸುವ ಅವಕಾಶ ಲಭಿಸಿದೆ.
ಟೋಕಿಯೋ ಒಲಿಂಪಿಕ್ಸ್: ಪಿ.ವಿ ಸಿಂಧುವಿಗೆ ಒಟ್ಟಿಗೆ ಐಸ್‌ಕ್ರೀಮ್ ತಿನ್ನೋಣವೆಂದ ಮೋದಿ
𝗜𝗧'𝗦 𝗖𝗢𝗠𝗜𝗡𝗚 𝗛𝗢𝗠𝗘 🔥
A moment of pride for Indian badminton as India has been allotted the rights to host 2026 BWF World Championships after 17 years 🥳
Comment down your reaction with an emoji 😍 pic.twitter.com/utHc8n3yDO
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು 4 ಪದಕಗಳಿಗೆ ಕೊರಳೊಡ್ಡಿದ್ದಾರೆ. ಒಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಸಿಂಧು, ಇದಕ್ಕೂ ಮುನ್ನ 2 ಬೆಳ್ಳಿ ಹಾಗೂ ಒಮ್ಮೆ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದಷ್ಟೇ ಅಲ್ಲದೇ ಪುರುಷರ ಸಿಂಗಲ್ಸ್‌ನಲ್ಲಿ ಬಿ ಸಾಯಿ ಪ್ರಣೀತ್, ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲ ಗುಟ್ಟಾ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.