ಕಂಠೀ​ರವ ಸಿಬ್ಬಂದಿಗೆ ಶೀಘ್ರ ವೇತನ: ಸಚಿವ ಈಶ್ವ​ರ​ಪ್ಪ

By Web Desk  |  First Published Nov 20, 2019, 9:43 AM IST

ಕಂಠೀರವ ಕ್ರೀಡಾಂಗಣದಲ್ಲಿನ ಸಿಬ್ಬಂದಿಗಳು ಕಳೆದ 3 ತಿಂಗಳಿನಿಂದ ವೇತನವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ವೇತನ ಇಂದು, ನಾಳೆ ಎನ್ನುತ್ತಲೆ ಮೂರು ತಿಂಗಳು ಕೆಳೆದಿದೆ. ಸಿಬ್ಬಂದಿಗಳ ಬೇರೆ ದಾರಿ ಕಾಣದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೀಗ ಕ್ರೀಡಾ ಸಚಿವರು ಪ್ರತಿಭಟನಾ ನಿರತರಿಗೆ ಭರವಸೆ ನೀಡಿ


ಬೆಂಗಳೂರು(ನ.20) : ಕಳೆದ 3 ತಿಂಗಳಿಂದ ಮಾಸಿಕ ವೇತನ ನೀಡಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಕಂಠೀರವ ಕ್ರೀಡಾಂಗಣದ ನೌಕರರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಕ್ರೀಡಾ ಸಚಿವ ಕೆ.ಎಸ್‌. ಈಶ್ವರಪ್ಪ ಮಂಗ​ಳ​ವಾರ ಭರವಸೆ ನೀಡಿದರು. 

ಇದನ್ನೂ ಓದಿ: ಬೆಂಗಳೂರಿನ ಕಂಠೀರವದ ಸಿಂಥೆಟಿಕ್‌ ಟ್ರ್ಯಾಕ್‌ ಮತ್ತಷ್ಟುವಿಳಂಬ?

Tap to resize

Latest Videos

ಮಂಗ​ಳ​ವಾರ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ. ಪುರುಷೋತ್ತಮ ನೌಕರರ ಸಮಸ್ಯೆಯನ್ನು ಆಲಿ​ಸಿ​ದರು. ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಪುರುಷೋತ್ತಮ, ‘ಇನ್ನೊಂದು ದಿನದಲ್ಲಿ ನೌಕರರ ವೇತನ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಸಚಿವರು ಕೂಡ ಭರವಸೆ ನೀಡಿದ್ದಾರೆ’ ಎಂದರು. ಕಾರ್ಮಿಕ ಇಲಾಖೆಯ ಇನ್ಸ್‌ಪೆಕ್ಟರ್‌ ಅಲ್ತಾಫ್‌ ಸಹ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೌಕ​ರ​ರೊಂದಿಗೆ ಚರ್ಚಿ​ಸಿ​ದರು.

ಇದನ್ನೂ ಓದಿ: 200 ಮೀಟರ್ ರೇಸ್ ಗೆದ್ದ 81 ವರ್ಷದ ಬೆಂಗಳೂರಿನ ಅಜ್ಜಿ..!

ವೇತನ ಬಾಕಿ ಉಳಿಸಿಕೊಂಡಿರುವ ವಿರುದ್ದ  ಸಿಬ್ಬಂದಿಗಳು ಹಲವು ಬಾರಿ ಮನವಿ ಮಾಡಿದ್ದರು. ಕೊನೆಗೆ ಬೇರೆ ದಾರಿ ಕಾಣದೆ ಪ್ರತಿಭಟನೆ ನಡೆಸಿದ್ದಾರೆ. ಸಿಬ್ಬಂದಿ ಪ್ರತಿಭಟನೆಗೆ ಮೊದಲ  ಹಂತದ ಜಯ ಸಿಕ್ಕಿದೆ. ವೇತನ ಸಮಸ್ಯೆ ಶೀಘ್ರದಲ್ಲೇ ಬಗೆಹರಿಸವು ಭರವಸೆ ಸಚಿವರಿಂದ ಸಿಕ್ಕಿದೆ. ಆದರೆ  ವೇತನ ಮತ್ತೆ ವಿಳಂಬವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. 

click me!