ಕಜ​ಕ​ಸ್ತಾ​ನ​ದಲ್ಲಿ ಭಾರ​ತ-ಪಾಕ್‌ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ?

By Web Desk  |  First Published Nov 19, 2019, 12:15 PM IST

ಭಾರತ-ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಟೂರ್ನಿ ಬಹುತೇಕ ಕಜ​ಕ​ಸ್ತಾ​ನ​ದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ನವ​ದೆ​ಹ​ಲಿ(ನ.19): ಭಾರತ-ಪಾಕಿ​ಸ್ತಾನ ನಡು​ವಿನ ಏಷ್ಯಾ/ಓಷಿ​ಯಾ​ನಿಯಾ ಹಂತದ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ ಕಜ​ಕ​ಸ್ತಾ​ನದ ರಾಜ​ಧಾನಿ ನೂರ್‌-ಸುಲ್ತಾನ್‌ನಲ್ಲಿ ನಡೆ​ಯುವುದು ಬಹು​ತೇಕ ಖಚಿತವಾಗಿದೆ. 

ಡೇವಿಸ್ ಕಪ್: ಪಾಕ್‌ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ

Tap to resize

Latest Videos

undefined

ಅಂತಾ​ರಾ​ಷ್ಟ್ರೀಯ ಟೆನಿಸ್‌ ಫೆಡ​ರೇ​ಷನ್‌ (ಐ​ಟಿ​ಎಫ್‌) ಇನ್ನೂ ಅಧಿ​ಕೃತ ಪ್ರಕ​ಟಣೆ ನೀಡ​ದಿ​ದ್ದರೂ, ವೀಸಾ ಪ್ರಕ್ರಿಯೆ ಆರಂಭಿ​ಸು​ವಂತೆ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎ​ಐ​ಟಿಎ)ಗೆ ಸೂಚಿ​ಸಿದೆ. ನ.29, 30ರಂದು ಪಂದ್ಯ ನಡೆ​ಯ​ಲಿದೆ. ಈ ಮೊದಲು ಪಂದ್ಯ ಇಸ್ಲಾ​ಮಾ​ಬಾದ್‌ನಲ್ಲಿ ನಿಗ​ದಿ​ಯಾ​ಗಿತ್ತು. ಆದರೆ ಭದ್ರತೆ ಸಮಸ್ಯೆಯಿಂದಾಗಿ ಭಾರತ, ಪಾಕಿ​ಸ್ತಾನ ಪ್ರವಾಸಕ್ಕೆ ನಿರಾ​ಕ​ರಿ​ಸಿದ ಕಾರಣ ಪಂದ್ಯ​ವನ್ನು ತಟಸ್ಥ ಸ್ಥಳದಲ್ಲಿ ನಡೆ​ಸಲು ನಿರ್ಧ​ರಿ​ಸ​ಲಾ​ಯಿತು.

ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ

ಈಗಾಗಲೇ ಡೇವಿಸ್ ಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಆಟಗಾರರಾದ ಲಿಯಾಂಡರ್ ಪೇಸ್, ರೋಹನ್ ಬೋಪಣ್ಣಗೆ ಅವಕಾಶ ನೀಡಲಾಗಿದೆ. ಇನ್ನು ಮಹೇಶ್ ಭೂಪತಿಯನ್ನು ಹೊರಗಿಟ್ಟು, ರೋಹಿತ್ ರಾಜ್ ಪಾಲ್ ರನ್ನು ಆಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. 
 

click me!