ವಿಶ್ವ ನಂ.1 ಟೆನಿ​ಸಿಗನಾಗಿ 2019ಕ್ಕೆ ನಡಾಲ್‌ ಗುಡ್‌ಬೈ!

Published : Nov 19, 2019, 02:18 PM IST
ವಿಶ್ವ ನಂ.1 ಟೆನಿ​ಸಿಗನಾಗಿ 2019ಕ್ಕೆ ನಡಾಲ್‌ ಗುಡ್‌ಬೈ!

ಸಾರಾಂಶ

ಸ್ಪೇನ್ ಎಡಗೈ ಟೆನಿಸಿಗ ರಾಫೆಲ್‌ ನಡಾಲ್  5ನೇ ಬಾರಿಗೆ ಋುತು​ವನ್ನು ನಂ.1 ಟೆನಿಸಿಗನಾಗಿ ಅಭಿಯಾನ ಮುಗಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ

ಪ್ಯಾರಿಸ್‌[ನ]: ಸ್ಪೇನ್‌ನ ದಿಗ್ಗಜ ಟೆನಿ​ಸಿಗ ರಾಫೆಲ್‌ ನಡಾಲ್‌, ವಿಶ್ವ ನಂ.1 ಟೆನಿ​ಸಿಗನಾಗಿ 2019ರ ಋುತು​ವನ್ನು ಮುಕ್ತಾ​ಗೊ​ಳಿ​ಸಿ​ದ್ದಾರೆ. ಸೋಮ​ವಾರ ಟೆನಿಸ್‌ ಆಟ​ಗಾರರ ಸಂಸ್ಥೆ (ಎ​ಟಿಪಿ) ವರ್ಷಾಂತ್ಯದ ರ‍್ಯಾಂಕಿಂಗ್‌ ಪಟ್ಟಿ ಬಿಡು​ಗಡೆಗೊಳಿ​ಸಿತು.

ಬಹು​ಕಾ​ಲದ ಪ್ರೇಯಸಿಯೊಂದಿಗೆ ನಡಾಲ್‌ ವಿವಾ​ಹ

ತಮ್ಮ ವೃತ್ತಿ​ಬ​ದು​ಕಿ​ನಲ್ಲಿ ನಡಾಲ್‌ 5ನೇ ಬಾರಿಗೆ ವರ್ಷಾಂತ್ಯ​ದಲ್ಲಿ ಅಗ್ರಸ್ಥಾನ ಕಾಯ್ದು​ಕೊಂಡ ಸಾಧನೆ ಮಾಡಿ​ದರು. ನಡಾಲ್‌ 9985 ಅಂಕ​ಗ​ಳನ್ನು ಹೊಂದಿದ್ದು, 2ನೇ ಸ್ಥಾನ ಪಡೆದ ನೋವಾಕ್‌ ಜೋಕೋ​ವಿಚ್‌ಗಿಂತ 840 ಅಂಕ ಮುಂದಿ​ದ್ದಾರೆ. ರೋಜರ್‌ ಫೆಡ​ರರ್‌ ಸತತ 2ನೇ ವರ್ಷ 3ನೇ ಸ್ಥಾನ ಗಳಿ​ಸಿ​ದ್ದಾರೆ.

ಟೆನಿಸ್‌ ವಿಶ್ವ ರ‍್ಯಾಂಕಿಂಗ್‌: ಅಗ್ರಸ್ಥಾನಕ್ಕೇರಿದ ನಡಾಲ್‌

ನವೆಂಬರ್ ತಿಂಗಳಾರಂಭದಲ್ಲಿ ಸರ್ಬಿಯಾದ ಜೋಕೋವಿಚ್’ರನ್ನು ಹಿಂದಿಕ್ಕಿ ನಡಾಲ್ ಅಗ್ರಸ್ಥಾನಕ್ಕೇರಿದ್ದರು. ಕಳೆದ ತಿಂಗಳಷ್ಟೇ ನಡಾಲ್ ತಮ್ಮ ಬಹುಕಾಲದ ಗೆಳತಿ ಮರಿಯಾ ಫ್ರಾನ್ಸಿಸ್ಕಾ ಪೆರೆಲ್ಲೋ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದನ್ನು ಸ್ಮರಿಸಬಹುದಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು ಮೇಲೆ ಕಠಿಣ ಕ್ರಮ! ಅನಿರ್ದಿಷ್ಟಾವಧಿಗೆ ಬ್ಯಾನ್
ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ