ಜೊಕೋವಿಚ್ ಟೀಕಿಸಬೇಡಿ, ಇದು ನನ್ನ ತಪ್ಪು ಎಂದ ಸರ್ಬಿಯಾ ಪ್ರಧಾನ ಮಂತ್ರಿ!

By Suvarna NewsFirst Published 30, Jun 2020, 6:35 PM
Highlights

ಟೆನಿಸ್ ಪ್ರದರ್ಶನಾ ಟೂರ್ನಮೆಂಟ್ ಆಯೋಜಿಸಿ ಕೊರೋನಾ ವೈರಸ್‌ಗೆ ತಗುಲಿಸಿಕೊಂಡಿರುವ ವಿಶ್ವ ನಂ.1 ಟೆನಿಸ್ ಪ್ಲೇಯರ್ ನೋವಾಕ್ ಜೊಕೋವಿಚ್ ವಿರುದ್ದ ಟೀಕೆಗಳು ಕೇಳಿ ಬರುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ನಿಯಮ ಪಾಲಿಸಿಲ್ಲ ಸೇರಿದಂತೆ ಹಲವು ಆರೋಪಗಳು ಜೊಕೋವಿಚ್ ಮೇಲಿದೆ. ಇದೀಗ ಈ ಎಲ್ಲಾ ಆರೋಪಗಳಿಗೆ ನಾನು ಹೊಣೆ  ಎಂದಿರುವ ಸರ್ಬಿಯಾ ಪ್ರಧಾನಿ ಜೊಕೋವಿಚ್ ನಿಂದಿಸಬೇಡಿ ಎಂದಿದ್ದಾರೆ. 

ಸರ್ಬಿಯಾ(ಜೂ.30):  ವಿಶ್ವ ನಂ.1 ಟೆನಿಸ್ ಪ್ಲೇಯರ್ ಸರ್ಬಿಯಾದ ನೋವಾಕ್ ಜೊಕೋವಿಚ್ ಇದೀಗ ಕೊರೋನಾ ವೈರಸ್ ತಗುಲಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊಕೋವಿಚ್ ಕೊರೋನಾ ವಕ್ಕರಿಸಿಲು ನಿರ್ಲಕ್ಷ್ಯವೇ ಕಾರಣ ಎಂದು ಟೀಕೆಗಳು ಕೇಳಿಬರುತ್ತಿದೆ. ಇದೀಗ ಟೀಕೆಗಳಿಗೆ ಸರ್ಬಿಯಾ ಪ್ರಧಾನ ಮಂತ್ರಿ ಅನಾ ಬ್ರನಬಿಕ್ ಉತ್ತರಿಸಿದ್ದಾರೆ. ಇದರಲ್ಲಿ ಜೊಕೋವಿಚ್ ತಪ್ಪಿಲ್ಲ. ಇದಕ್ಕೆ ನಾನು ಹೊಣೆ ಎಂದಿದ್ದಾರೆ.

ವಿಶ್ವದ ನಂ.1 ಟೆನಿಸ್ ಪಟು ನೋವಾಕ್ ಜೊಕೊವಿಚ್‌ಗೆ ಕೊರೋನಾ ಪಾಸಿಟೀವ್!.

ನೋವಾಕ್ ಜೊಕೋವಿಚ್ ಇತ್ತೀಚೆಗಷ್ಟೇ ಪ್ರದರ್ಶನಾ ಟೆನಿಸ್ ಟೂರ್ನಿ ಆಯೋಜಿಸಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಕೊರೋನಾ ವೈರಸ್ ನಿಯಮ ಪಾಲಿಸಿಲ್ಲ. ಹೀಗಾಗಿ ಜೊಕೋವಿಚ್‌ ಸೇರಿದಂತೆ ನಾಲ್ವರು ಟೆನಿಸ್ ಪಟುಗಳಿಗೆ ಕೊರೋನಾ ವಕ್ಕರಿಸಿದೆ ಅನ್ನೋ ಆರೋಪ ಕೇಳಿ ಬಂದಿದೆ. ಜೋಕೋವಿಚ್‌ನಿಂದ ಪತ್ನಿಗೂ ಕೊರೋನಾ ತಗುಲಿದೆ.

ಧ್ಯಾನದಲ್ಲಿ ಧರ್ಮವಿಲ್ಲ ಆರೋಗ್ಯವಿದೆ ಎಂದ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್!

ಯುವ ಹಾಗೂ ಇನ್ನು ಬೆಳಕಿಗೆ ಬರದ ಪ್ರತಿಭೆಗಳಿಗಾಗಿ ಜೊಕೊವಿಚ್ ಟೆನಿಸ್ ಟೂರ್ನಮೆಂಟ್ ಆಯೋಜಿಸಿದ್ದಾರೆ. ಇಷ್ಟೇ ಅಲ್ಲ ಇದರಿಂದ ಬಂದ ಹಣವನ್ನು ಸದ್ಬಳಕೆಗೆ ಉಪಯೋಗಿಸಿದ್ದಾರೆ. ಹೀಗಾಗಿ ಜೊಕೋವಿಚ್ ಟೀಕಿಸಿವುದು ಸರಿಯಲ್ಲ. ನನ್ನಿಂದ ತಪ್ಪಾಗಿದೆ, ಆದರೆ ಜೊಕೋವಿಚ್‌ನಿಂದ ಆಗಿಲ್ಲ ಎಂದು ಸರ್ಬಿಯಾ ಪ್ರಧಾನಿ ಹೇಳಿದ್ದಾರೆ.

ಜೊಕೋವಿಚ್ ಸೇರಿದಂತೆ ಟೆನಿಸ್ ಪಟುಗಳಾದ ಗ್ರಿಗೋರ್ ಡಿಮಿಟ್ರೋವ್, ಬೊರ್ನಾ ಕೊರಿಕ್, ವಿಕ್ಟೋರ್ ಟ್ರೋಯ್ಕಿಗೂ ಕೊರೋನಾ ವೈರಸ್ ತಗುಲಿದೆ. ಇದೀಗ ಇವರು ಚಿಕಿತ್ಸೆ ಪಡೆಯುತ್ತಿದ್ದರೆ. ಇವರ ಕುಟುಂಬ ಕ್ವಾಂರೈಟನ್ ಆಗಿದೆ.

Read Exclusive COVID-19 Coronavirus News updates, from Karnataka, India and World at Asianet News Kannada.

Last Updated 30, Jun 2020, 6:35 PM