
ಸರ್ಬಿಯಾ(ಜೂ.23): ಕೊರೋನಾ ವೈರಸ್‌ನಿಂದ ಕ್ರೀಡಾಪಟುಗಳು ದೂರವಿದ್ದರು. ಆದರೆ ಲಾಕ್‌ಡೌನ್ ಸಡಿಲಿಕೆ, ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಇದೀಗ ಕ್ರೀಡಾಪಟುಗಳಿಗೂ ಕೊರೋನಾ ವಕ್ಕರಿಸುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶ ಕ್ರಿಕೆಟಿರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಇದೀಗ ಟೆನಿಸ್ ಪಟುಗಳಲ್ಲೂ ಕೊರೋನಾ ಕಾಣಿಸಿಕೊಂಡಿದೆ. ವಿಶ್ವದ ನಂ.1 ಟೆನಿಸ್ ಪಟು ನೋವಾಕ್ ಜೊಕೋವಿಚ್ಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಪಾಕಿಸ್ತಾನದ ಮೂವರು ಸ್ಟಾರ್ ಕ್ರಿಕೆಟಿಗರಿಗೆ ಕೊರೋನಾ ಅಟ್ಯಾಕ್..!..
ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಸರ್ಬಿಯಾ ಹಾಗೂ ಕ್ರೊವೇಶಿಯಾ ಪ್ರದರ್ಶನ ಪಂದ್ಯವನ್ನು ಎರ್ಪಡಿಸಲಾಗಿತ್ತು. ಪಂದ್ಯಕ್ಕಾಗಿ ಬೆಲ್‌ಗ್ರೇಡ್‌ಗೆ ತೆರಳಿದ್ದ ನೋವಾಕ್ ಜೊಕೋವಿಚ್ ಟೂರ್ನಿ ಮುಗಿಸಿ ವಾಪಸ್ ಆಗಿದ್ದರು. ತಾಯ್ನಾಡಿದ ಮರಳಿದ ಬೆನ್ನಲ್ಲೇ ನಿಯಮದ ಪ್ರಕಾರ ನೋವಾಕ್ ಜೊಕೋವಿಚ್ ತಪಾಸಣೆ ನಡೆಸಲಾಯಿತು. ಈ ವೇಳೆ ಜೊಕೋವಿಚ್‌ಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಬಾಂಗ್ಲಾ ಕ್ರಿಕೆಟಿಗ ಮಶ್ರಫೆ ಮೊರ್ತಜಾಗೆ ಕೊರೋನಾ ಸೋಂಕು
ಜೊಕೋವಿಚ್ ಜೊತೆಗೆ ಕುಟುಂಬ ಸದಸ್ಯರಿಗೂ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಆದರೆ ಅದೃಷ್ಟವಶಾತ್ ಜೊಕೋವಿಚ್ ಮಕ್ಕಳಿಗೆ ಕೊರೋನಾ ತಗುಲಿಲ್ಲ. ನೋವಾಕ್ ಜೊಕೋವಿಚ್ ಕೊರೋನಾ ವೈರಸ್ ತಗುಲಿಸಿಕೊಂಡ ನಾಲ್ಕನೇ ಟೆನಿಸ್ ಪಟುವಾಗಿದ್ದಾರೆ. ಇದಕ್ಕೂ ಮೊದಲು ಗ್ರಿಗೋರ್ ಡಿಮಿಟ್ರೋವ್, ಬೊರ್ನಾ ಕೊರಿಕ್ ಹಾಗೂ ವಿಕ್ಟೋರ್ ಟ್ರೊಯ್ಕಿಗೆ ಕೊರೋನಾ ವೈರಸ್ ತಗುಲಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.