ಅಂತಾರಾಷ್ಟ್ರೀಯ ಟೆನಿಸ್‌ ಫಿಕ್ಸಿಂಗ್‌ ಕಿಂಗ್‌ಪಿನ್‌ ಭಾರ​ತೀ​ಯ!

By Suvarna News  |  First Published Jun 30, 2020, 8:47 AM IST

ಟೆನಿಸ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ ರೂವಾರಿ ಭಾರತೀಯ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವ​ದೆ​ಹ​ಲಿ(ಜೂ.30): ಅಂತಾ​ರಾ​ಷ್ಟ್ರೀಯ ಟೆನಿಸ್‌ನಲ್ಲಿ ನಡೆ​ದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್‌ಗೆ ಭಾರ​ತೀಯ ಫಿಕ್ಸರ್‌ಗಳೇ ಕಾರಣ ಎನ್ನುವ ಆಘಾತಕಾರಿ ವಿಚಾರವನ್ನು ಆಸ್ಪ್ರೇಲಿ​ಯಾದ ವಿಕ್ಟೋರಿಯಾ ಪೊಲೀ​ಸರು ಬಹಿರಂಗಪಡಿ​ಸಿ​ದ್ದಾರೆ. 

2018ರಲ್ಲಿ ನಡೆ​ದಿದ್ದ ಬ್ರೆಜಿಲ್‌ ಹಾಗೂ ಈಜಿಪ್ಟ್‌ಗಳಲ್ಲಿ ನಡೆ​ದಿದ್ದ ಟೂರ್ನಿ​ಗ​ಳಲ್ಲಿ ಕೆಳ ಹಂತದ ಶ್ರೇಯಾಂಕ ಹೊಂದಿ​ರುವ ಆಟಗಾರರಿಗೆ ಬಲೆ ಬೀಸಿ, ಫಿಕ್ಸಿಂಗ್‌ನಲ್ಲಿ ಭಾಗಿ​ಯಾ​ಗು​ವಂತೆ ಮಾಡಿದ ಆರೋ​ಪದ ಮೇಲೆ ಅದೇ ವರ್ಷ ಮೇ ತಿಂಗ​ಳಲ್ಲಿ ರಾಜೇಶ್‌ ಕುಮಾರ್‌ ಹಾಗೂ ಹರ್ಸಿ​ಮ್ರತ್‌ ಸಿಂಗ್‌ ಎನ್ನುವ ಭಾರ​ತೀಯ ಮೂಲದ ವ್ಯಕ್ತಿ​ಗ​ಳನ್ನು ಮೆಲ್ಬರ್ನ್‌ನಲ್ಲಿ ಬಂಧಿ​ಸ​ಲಾ​ಗಿತ್ತು. ವಿಚಾರಣೆ ಮುಂದು​ವ​ರಿ​ದಂತೆ, ಈ ಫಿಕ್ಸಿಂಗ್‌ನ ಕಿಂಗ್‌ಪಿನ್‌ ಮೊಹಾಲಿಯ ನಿವಾಸಿ ರವೀಂದರ್‌ ದಂಡಿ​ವಾಲ್‌ ಎನ್ನು​ವುದು ತಿಳಿ​ದು​ಬಂದಿದೆ.

Tap to resize

Latest Videos

ಬಿಸಿ​ಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!

ದಂಡಿ​ವಾಲ್‌, ಕ್ರಿಕೆಟ್‌ ಕೌನ್ಸಿಲ್‌ ಆಫ್‌ ಇಂಡಿಯಾ ಎನ್ನುವ ಅನ​ಧಿ​ಕೃತ ಕ್ರಿಕೆಟ್‌ ಸಂಸ್ಥೆಯನ್ನೂ ನಡೆ​ಸು​ತ್ತಿದ್ದು ಭಾರತ, ನೇಪಾಳ ಸೇರಿ​ದಂತೆ ಹಲ​ವೆಡೆ ಟಿ20 ಲೀಗ್‌ಗಳನ್ನು ನಡೆ​ಸಿ​ದ್ದಾನೆ. ಈ ಲೀಗ್‌ಗಳಲ್ಲಿ ಅಕ್ರಮ ನಡೆ​ದಿ​ರುವ ವರದಿ ಆಗಿದೆ. ಈ ವ್ಯಕ್ತಿಯ ಮೇಲೆ ಬಿಸಿ​ಸಿಐ ಕಳೆದ 3-4 ವರ್ಷ​ಗ​ಳಿಂದ ಕಣ್ಣಿ​ಟ್ಟಿದ್ದು, ಆಟ​ಗಾ​ರ​ರಿಗೆ ಈತ​ನಿಂದ ದೂರ​ವಿ​ರಲು ಸೂಚಿ​ಸ​ಲಾ​ಗಿದೆ ಎಂದು ಬಿಸಿ​ಸಿಐ ಭ್ರಷ್ಟಾ​ಚಾರ ನಿಗ್ರ​ದ​ಳದ ಮುಖ್ಯಸ್ಥ ಅಜಿತ್‌ ಸಿಂಗ್‌ ಹೇಳಿ​ದ್ದಾರೆ.

click me!