ಈಗಾಗಲೇ ಪ್ರೊ ಕಬಡ್ಡಿ 9ನೇ ಸೀಸನ್ ನಡೆಯುತ್ತಿದ್ದು, ದೇಶಾದ್ಯಂತ ಕಬಡ್ಡಿ ಜ್ವರ ತೀವ್ರವಾಗಿದೆ. ಈ ಮಧ್ಯೆ ಮಹಿಳೆಯರು ಕಬಡ್ಡಿ ಆಟ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ ಪ್ರೊ ಕಬಡ್ಡಿ 9ನೇ ಸೀಸನ್ ನಡೆಯುತ್ತಿದ್ದು, ದೇಶಾದ್ಯಂತ ಕಬಡ್ಡಿ ಜ್ವರ ತೀವ್ರವಾಗಿದೆ. ಈ ಮಧ್ಯೆ ಮಹಿಳೆಯರು ಕಬಡ್ಡಿ ಆಟ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಕ್ರೀಡಾಳುಗಳು ಕಬಡ್ಡಿ ಆಡುವಾಗ ಮೊಣಕಾಲುವರೆಗಿನ ಅಥವಾ ಅದಕ್ಕಿಂತ ಸಣ್ಣ ಚಡ್ಡಿ ಧರಿಸಿ ಕಬಡ್ಡಿ ಆಡುವುದು ಸಾಮಾನ್ಯ. ಆದರೆ ಇಲ್ಲಿ ಸೀರೆಯುಟ್ಟ ಗ್ರಾಮೀಣ ಪ್ರದೇಶದ ಮಹಿಳೆಯರು ಕಬಡ್ಡಿ ಆಡುತ್ತಿದ್ದಾರೆ.
ಸಾಮಾನ್ಯವಾಗಿ ಹಳ್ಳಿಯ ಹೆಣ್ಣು ಮಕ್ಕಳು ಮನೆ ಕೆಲಸ ಹಾಗೂ ಕೃಷಿ ಕಾರ್ಯದಲ್ಲಿ ತಮ್ಮ ಇಡೀ ದಿನವನ್ನು ಕಳೆಯುತ್ತಾರೆ. ಆಟೋಟಗಳು ಅವರಿಗೆ ಬಲು ಅಪರೂಪ ಕೆಲಸದಿಂದಲೇ ಬಹುತೇಕ ದಣಿದಿರುವುದರ ಜೊತೆ ಸಮಯವೂ ಇಲ್ಲದಿರುವುದರಿಂದ ಆಟದ ಕಡೆ ಗಮನ ಬಹಳ ಕಡಿಮೆಯೇ. ಆದಾಗ್ಯೂ ಕೆಲವೆಡೆ ಕೆಲ ಸಂಘಟನೆಗಳು ಹಬ್ಬ ಹರಿದಿನಗಳ ಸಮಯದಲ್ಲಿ ಹೀಗೆ ಊರಿನ ಮಕ್ಕಳು ಮಹಿಳೆಯರು ಸಾರ್ವಜನಿಕರಿಗಾಗಿ ಹೀಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದನ್ನು ನೀವು ನೋಡಿರಬಹುದು. ಅಲ್ಲಿ ಬಹುಜನರು ಭಾಗವಹಿಸುವ ಕಬಡ್ಡಿ, ಲಗೋರಿ(Lagori), ಹಗ್ಗಜಗ್ಗಾಟ, ಓಟ ಮುಂತಾದ ಸ್ಪರ್ಧೆಗಳಿರುತ್ತವೆ. ಅದೇ ರೀತಿ ಆಯೋಜಿಸಲಾದ ಸ್ಪರ್ಧೆ ಇದಾಗಿದ್ದು, ಮಹಿಳೆಯರು ತಮ್ಮ ದೈನಂದಿನ ಉಡುಗೆ ಸೀರೆಯಲ್ಲೇ ಕಬಡ್ಡಿ ಆಡುತ್ತಿದ್ದಾರೆ.
हम किसी से कम हैं क्या !!!
छत्तीसगढ़िया ओलंपिक में महिला कबड्डी. pic.twitter.com/06QyhY4ojp
ಮಹಿಳೆಯರ(Women) ಎರಡು ತಂಡಗಳು ಕಬಡ್ಡಿ ಕೋರ್ಟ್‌ನಲ್ಲಿ (Kabaddi Court)ಪರಸ್ಪರ ಸೆಣಸಾಡುತ್ತಿದ್ದರೆ, ಸುತ್ತಲೂ ನಿಂತಿರುವ ಇತರ ಮಹಿಳೆಯರು, ಮಕ್ಕಳು ಪುರುಷರು ಮಹಿಳೆಯರ ಈ ಬಿಂದಾಸ್ ಆಟಕ್ಕೆ ಚಪ್ಪಾಳೆ ತಟ್ಟುವ ಜೊತೆ ಕಿರುಚಾಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ. ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಅವನೀಶ್ ಮಿಶ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಎರಡು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಛತ್ತಿಸ್ಗರಿಯ ಒಲಿಂಪಿಕ್‌ನಲ್ಲಿ(Chhattisgarhia Olympics) ನಡೆದ ಮಹಿಳೆಯರ ಕಬಡ್ಡಿ (Women's Kabaddi)ಪಂದ್ಯಾವಳಿ, ನಾವು ಯಾರಿಗಾದರೂ ಕಡಿಮೆ ಇದ್ದೇವೆಯೇ? ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಹಿಳೆಯರ ಈ ಸಾಮರ್ಥ್ಯ ಹಾಗೂ ಕ್ರೀಡಾ ಸ್ಪೂರ್ತಿಗೆ ಅನೇಕ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅತ್ಯದ್ಭುತ, ಅಮೋಘ, ನಿಮಗೆ ಬದುಕಿನಲ್ಲಿ ಇನ್ನಷ್ಟು ಸಾಧನೆ ಮಾಡಲು ದೇವರು ಆಶೀರ್ವಾದಿಸಲಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಬಹುಕಾಯಕವಿದು, ಒಂದೇ ಉಸಿರಿನಲ್ಲಿ ಕಬಡ್ಡಿ ಹಾಗೂ ಸೀರೆಯ ಸೆರಗಿನ ನಿರ್ವಹಣೆ ಎರಡು ಇಷ್ಟವಾಯಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಿದ್ದರಾಮಯ್ಯ, ಆಶೋಕ್ ನಡುವೆ ಕಬಡ್ಡಿ ಮಾತು, ಕಲಾಪದಲ್ಲಿ ಹಾಸ್ಯ ಚಟಾಕಿ!
ಕಬಡ್ಡಿ ಒಂದು ಬಹು ರೋಚಕ ಆಟ, ಕಬಡ್ಡಿ ಕೋರ್ಟ್ ಮುಂದೆ ನೋಡುತ್ತಾ ನಿಂತವರನ್ನು ಮುಂದೆ ಮುಂದೆ ಹೋಗುವಂತೆ ಮಾಡುವ, ತಾವೇ ಆಟವಾಡುತ್ತಿದ್ದೆವೇನೋ ಎಂಬಷ್ಟು ಸೂಜಿಗಲ್ಲಿನಂತೆ ಸೆಳೆಯುವ ರೋಚಕ ಆಟ. ಈ ಕಬಡ್ಡಿಗೆ ವಿಶ್ವ ಮಟ್ಟದ ಮಾನ್ಯತೆ ತಂದು ಕೊಟ್ಟಿದ್ದು ಪ್ರೊ ಕಬಡ್ಡಿ. ಯಶಸ್ವಿ 8 ಸೀಸನ್‌ಗಳನ್ನು ಮುಗಿಸಿರುವ ಪ್ರೊ ಕಬಡ್ಡಿಯ 9ನೇ ಸೀಸನ್ ಪ್ರಸ್ತುತ ನಡೆಯುತ್ತಿದೆ. ಈ ನಡುವೆ ಕೆಲ ದಿನಗಳ ಹಿಂದೆ ಪುಟ್ಟ ಮಗು ದೊಡ್ಡ ಗುಂಪಿನೊಂದಿಗೆ ಕಬಡ್ಡಿ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಕಬಡ್ಡಿ ಪ್ರೇಮಿಗಳನ್ನು ಬೆರಗುಗೊಳ್ಳುವಂತೆ ಮಾಡಿತ್ತು..
Pro Kabaddi League ಗುಜರಾತ್ ಜೈಂಟ್ಸ್ ಹಾಗೂ ತಮಿಳ್ ತಲೈವಾಸ್ ಪಂದ್ಯವೂ ಟೈನಲ್ಲಿ ಅಂತ್ಯ!
ಈ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವೆ ಅಧಿಕಾರಿ ಪ್ರಹ್ಲಾದ್ ಮೀನಾ (prahlad meena) ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದರು. ಬಾಲಕನ ವಿಡಿಯೋ ಯಾವ ಕಾರ್ಯಕ್ಕೂ ವಯಸ್ಸು ಮುಖ್ಯವಲ್ಲ, ಆಸಕ್ತಿ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿಡಿಯೋದಲ್ಲಿ ಮಕ್ಕಳ ಕಬಡ್ಡಿ ತಂಡವೊಂದು ಕಬಡ್ಡಿ ಆಡುತ್ತಿದೆ. ಈ ಟೀಮ್‌ನಲ್ಲಿ ಪುಟ್ಟ ಬಾಲಕನೋರ್ವನು ಬಹಳ ಉತ್ಸಾಹದಿಂದ ಕಬಡ್ಡಿ ಆಡುತ್ತಿದ್ದಾನೆ. ವಿರೋಧಿ ತಂಡದ, ತನಗಿಂತ ಮೂರು ಪಾಲು ಎತ್ತರವಿರುವವ ರೈಡ್‌ಗೆ ಬಂದಿದ್ದು, ಈ ವೇಳೆ ಪುಟ್ಟ ಬಾಲಕ ಆತನನ್ನು ಕ್ಯಾಚ್ ಹಾಕುವ ರೀತಿ ಬಹಳ ರೋಚಕವಾಗಿದೆ. ಆತ ತನಗಿಂತ ಮೂರು ಪಾಲು ಎತ್ತರವಿದ್ದಾನೆ ಎಂಬುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳದೇ ಬಾಲಕ ಸಖತ್ ಆಗಿ ಕ್ಯಾಚ್ ಮಾಡಿದ್ದಾನೆ. ಈ ವಿಡಿಯೋ ಪುಟ್ಟ ಬಾಲಕನ ಆತ್ಮವಿಶ್ವಾಸವನ್ನು ತೋರಿಸಿದ್ದೆ. ಈ ವಿಡಿಯೋಗೂ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು.