ಟೆನಿಸ್ ಲೋಕದ ದಿಗ್ಗಜ, ಗ್ರ್ಯಾಂಡ್ ಸ್ಲಾಂ ದಾಖಲೆಗಳ ಸರದಾರ, ಇದಕ್ಕೂ ಮಿಗಿಲಾಗಿ ಅಪಾರ ಅಭಿಮಾನಿಗಳ ನೆಚ್ಚಿನ ಕ್ರೀಡಾಪಟು ರೋಜರ್ ಫೆಡರರ್ ನಿವೃತ್ತಿ ಘೋಷಿಸಿದ್ದಾರೆ.
ಬರ್ನ್(ಸೆ.15): ಟೆನಿಸ್ ಲೋಕದ ದಿಗ್ಗಜ, 20 ಗ್ರ್ಯಾಂಡ್ ಸ್ಲಾಂ ಒಡೆಯ ರೋಜರ್ ಫೆಡರರ್ ನಿವೃತ್ತಿ ಘೋಷಿಸಿದ್ದಾರೆ. ಸ್ವಿಟ್ಜರ್‌ಲೆಂಡ್‌ನ ಟೆನಿಸ್ ಕ್ರೀಡಾಪಟು ರೋಜರ್ ಫೆಡರರ್, ಭಾವುಕ ಪತ್ರದೊಂದಿಗೆ ವಿದಾಯ ಘೋಷಿಸಿದ್ದಾರೆ. 41 ವರ್ಷದ ಫೆಡರರ್ ಟೆನಿಸ್ ಲೋಕಕ್ಕೆ ನಿವೃತ್ತಿ ಘೋಷಿಸಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ಫೆಡರರ್ ಕಾರಣದಿಂದಲೇ ಹಲವರು ಟೆನಿಸ್ ಕ್ರೀಡೆ ಆಡಲು ಆರಂಭಿಸಿದ್ದರೆ, ಅಸಂಖ್ಯಾತ ಅಭಿಮಾನಿಗಳು ಫೆಡರರ್ ಆಟ ನೋಡಲು ಟೆನಿಸ್‌ನತ್ತ ತಿರುಗಿದ ಅದೆಷ್ಟೋ ಉದಾಹಣೆಗಳಿವೆ. ನನಗೆ 41 ವರ್ಷ, ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದಲು ಬಯಸುತ್ತಿದ್ದೇನೆ. ನನ್ನ ಟೆನಿಸ್ ಪಯಣವನ್ನು ಮತ್ತಷ್ಟು ರೋಚಕವಾಗಿಸಿದ ಪ್ರತಿ ಸ್ಪರ್ಧಿಗಳು, ಅಭಿಮಾನಿಳಿಗೆ ಚಿರಋಣಿ ಎಂದು ಫೆಡರರ್ ಹೇಳಿದ್ದಾರೆ.
ಕಳೆದ 24 ವರ್ಷಗಳಲ್ಲಿ ನಾನು 1,500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ನಾನು ಕನಸಿಗೂ ನಿಲುಕದಷ್ಟು ಟೆನಿಸ್(Tennis) ನನ್ನನ್ನೂ ಅತ್ಯಂತ ಪ್ರೀತಿಯಿಂದ ಹಾಗೂ ಉದಾರವಾಗಿ ನಡೆಸಿಕೊಂಡಿದೆ. ಇದೀಗ ನಾನು ಅರ್ಥಮಾಡಿಕೊಳ್ಳಬೇಕಾದ ಸಮಯ. ನನ್ನ ಸ್ಪರ್ಧಾತ್ಮಕ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಇದನ್ನು ನಾನು ಗುರುತಿಸಬೇಕು. ಗೌರವಿಸಬೇಕು. ಈ ಸಂದರ್ಭದಲ್ಲಿ ನಾನು ಹಲವರಿಗೆ ಚಿರಋಣಿಯಾಗಿದ್ದೇನೆ. ಪ್ರತಿ ನಿಮಿಷವೂ ನನ್ನ ಪರವಾಗಿ ನಿಂತು, ನನ್ನ ಸೋಲು ಗೆಲುವುಗಳಲ್ಲಿ ಬೆಂಬಲ ಸೂಚಿಸಿದ ಪತ್ನಿ ಮಿರ್ಕಾಗೆ ಧನ್ಯವಾದ. ಪ್ರತಿ ಪಂದ್ಯಕ್ಕೂ ಮುನ್ನ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದಳು. 8 ತಿಂಗಳ ಗರ್ಭಿಣಿಯಾಗಿದ್ದಾಗಲೂ ಲೆಕ್ಕವಿಲ್ಲದಷ್ಟು ಪಂದ್ಯಗಳನ್ನು ವೀಕ್ಷಿಸಿದ್ದಾಳೆ. ಕಳೆದ 20 ವರ್ಷಗಳಿಂದ ನನ್ನ ತಂಡದ ಜೊತೆ ನನ್ನನ್ನ ಸಹಿಸಿಕೊಂಡಿದ್ದಾಳೆ. ಸ್ಪರ್ಧಾತ್ಮಕ ಟೆನಿಸ್ ಪಯಣದಲ್ಲಿ ನನ್ನ ಎದುರಾಳಿಗಳಾಗಿ ಹೋರಾಡಿದ, ನನ್ನ ಆಟವನ್ನು ಮತ್ತಷ್ಟು ಚುರುಕಾಗಿಸಿದ ಪ್ರತಿಸ್ಪರ್ಧಿಗಳು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಎಂದು ರೋಜರ್ ಫೆಡರರ್ ಹೇಳಿದ್ದಾರೆ.
undefined
2022ರ ಗರಿಷ್ಠ ಗಳಿಕೆಯಲ್ಲಿ ರೋಜರ್ ಫೆಡರರ್ ನಂ.1 ಟೆನಿಸಿಗ..!
ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೆವರ್ ಕಪ್(Laver Cup) ರೋಜರ್ ಫೆಡರರ್(Roger Federer Retires) ಅವರ ಕೊನೆಯ ಎಟಿಪಿ ಟೂರ್ನಿಯಾಗಿದೆ. ಇತ್ತೀಟೆಗೆ ಮುಕ್ತಾಯಗೊಂಡ ಯುಎಸ್ ಓಪನ್(US Open) ಟೂರ್ನಿಯಲ್ಲಿ ರೋಜರ್ ಫೆಡರರ್ ಪಾಲ್ಗೊಂಡಿರಲಿಲ್ಲ. ಇಂಜುರಿ(Injury) ಸಮಸ್ಯೆಯಿಂದ ಫೆಡರರ್ ಹಲವು ಟೂರ್ನಿಗಳಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಗಿ ಬಂದಿದೆ. ಇದೇ ಗಾಯದ ಸಮಸ್ಯೆಯಿಂದ ರೋಜರ್ ಫೆಡರರ್, ಜುಲೈ ತಿಂಗಳಲ್ಲೇ ನಿವತ್ತಿ ಸೂಚನೆ ನೀಡಿದ್ದರು.
To my tennis family and beyond,
With Love,
Roger pic.twitter.com/1UISwK1NIN
ನೆದರ್ಲೆಂಡ್ ಪತ್ರಿಕೆ ಜೊತೆಗಿನ ಸಂದರ್ಶನದಲ್ಲಿ ಫೆಡರರ್ ತಮ್ಮ ಇಂಜುರಿ ಸಮಸ್ಯೆ ಹಾಗೂ ವಯಸ್ಸಿನ ಕುರಿತು ಸೂಚ್ಯವಾಗಿ ಹೇಳಿದ್ದರು. ‘ನಾನು ಗೆಲುವನ್ನು ಪ್ರೀತಿಸುತ್ತೇನೆ. ಆದರೆ ಆಡಲು ಸಾಧ್ಯವಿಲ್ಲದಿದ್ದಾಗ ಅದನ್ನು ನಿಲ್ಲಿಸುವುದು ಉತ್ತಮ. ಹೀಗಾಗಿ ನನಗೀಗ ಟೆನಿಸ್ ಅಗತ್ಯವಿದೆ ಎಂದು ಭಾವಿಸುವುದಿಲ್ಲ’ ಎಂದು 41 ವರ್ಷದ ಫೆಡರರ್ ಹೇಳಿದ್ದಾರೆ. ‘ಟೆನಿಸ್, ಜೀವನದ ಒಂದು ಭಾಗ ಮಾತ್ರ, ಅದು ನನ್ನ ಸಂಪೂರ್ಣ ಗುರುತಲ್ಲ. ನಾನು ಯಾವತ್ತೂ ಯಶಸ್ವಿಯಾಗಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಆದರೆ ಅದನ್ನು ಕ್ರೀಡೆಯ ಹೊರಗೂ ಕೂಡಾ ಮಾಡಬಹುದು ಎಂದಿರುವ ಅವರು, ವೃತ್ತಿಪರ ಬದುಕು ಶಾಶ್ವತವಲ್ಲ ಎಂಬುವುದು ನನಗೆ ಗೊತ್ತಿದೆ’ ಎಂದು ತಿಳಿಸಿದ್ದಾರೆ.
ಅವಕಾಶ ಸಿಕ್ಕಿದರೇ ದಿನೇಶ್ ಕಾರ್ತಿಕ್ ಯಾವ ತಾರೆ ಜತೆ ಊಟ ಮಾಡಲು ಇಷ್ಟಪಡುತ್ತಾರಂತೆ ಗೊತ್ತಾ..?
ದೀರ್ಘ ಸಮಯದಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಫೆಡರರ್ 1999ರ ಬಳಿಕ ಮೊದಲ ಬಾರಿ ಈ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ಆಡಿರಲಿಲ್ಲ. ಅಲ್ಲದೇ 25 ವರ್ಷಗಳ ಬಳಿಕ ಮೊದಲ ಬಾರಿ ರಾರಯಂಕಿಂಗ್ ಪಟ್ಟಿಯಿಂದ ಹೊರಬಿದ್ದಿದ್ದರು.