ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಒಡಿಶಾದ ಭುವನೇಶ್ವರ ಹಾಗೂ ರೂರ್ಕೆಲಾ ಜಂಟಿ ಆತಿಥ್ಯ ವಹಿಸಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಭುವನೇಶ್ವರ(ನ.28): 2023ರ ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ಒಡಿಶಾದ ಭುವನೇಶ್ವರ ಹಾಗೂ ರೂರ್ಕೆಲಾ ಜಂಟಿ ಆತಿಥ್ಯ ನೀಡಲಿವೆ ಎಂದು ಬುಧವಾರ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದರು. ಭಾರತ ಸತತ 2ನೇ ಬಾರಿಗೆ ವಿಶ್ವಕಪ್ ಆತಿಥ್ಯ ಹಕ್ಕು ಪಡೆದಿದ್ದು, ಜ.13ರಿಂದ 29ರ ವರೆಗೂ ಟೂರ್ನಿ ನಡೆಯಲಿದೆ.
ಭಾರತ ಹಾಕಿ ತಂಡಕ್ಕೆ ಶುಭಕೋರಿದ ಕಮಲ್ ಹಸನ್!
2018ರ ವಿಶ್ವಕಪ್ಗೂ ಭುವನೇಶ್ವರ ಆತಿಥ್ಯ ವಹಿಸಿತ್ತು. ಬೆಲ್ಜಿಯಂ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇತ್ತೀಚಿನ ವರ್ಷಗಳಲ್ಲಿ ಭುವನೇಶ್ವರದ ಕಳಿಂಗಾ ಕ್ರೀಡಾಂಗಣ ಹಲವು ಪ್ರಮುಖ ಟೂರ್ನಿಗಳಿಗೆ ವೇದಿಕೆ ಕಲ್ಪಿಸಿದೆ. 2017ರ ಹಾಕಿ ವಿಶ್ವ ಲೀಗ್ ಫೈನಲ್, 2019ರ ಪುರುಷರ ಹಾಕಿ ಸೀರೀಸ್ ಫೈನಲ್ಸ್, ಇದೇ ತಿಂಗಳ ಆರಂಭದಲ್ಲಿ ವಿಶ್ವಕಪ್ ಅರ್ಹತಾ ಪಂದ್ಯಗಳು ಇಲ್ಲಿ ನಡೆದಿದ್ದವು.
2023ರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ; ದಿನಾಂಕ ಪ್ರಕಟ!
ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಪಾಲಿಗೆ ವಿಶ್ವಕಪ್ ಟೂರ್ನಿ ಮಹತ್ವದ್ದಾಗಿದೆ. ಹಾಗಾಗಿ ಗುಣಮಟ್ಟದ ವ್ಯವಸ್ಥೆ ಬೇಕಾಗುತ್ತದೆ. ಸದ್ಯದ ಮಟ್ಟಿಗೆ ಭುವನೇಶ್ವರ ಹಾಗೂ ಡೆಲ್ಲಿಯಲ್ಲಿ ಮಾತ್ರ ಅಂತಹ ಗುಣಮಟ್ಟದ ಕ್ರೀಡಾಂಗಣ ಇದೆ. ಇದೀಗ ರೂರ್ಕೆಲಾ ಸಹ ಸಿದ್ದವಾಗಿದ್ದು, ಇನ್ನಷ್ಟು ಅದನ್ನು ಮೇಲ್ದರ್ಜೆಗೇರಿಸಬೇಕಾಗುತ್ತದೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಸರ್ಕಾರದ ಜಠಿಲ ಕಾನೂನುಗಳಿಂದ ಡೆಲ್ಲಿ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಭಾರತದ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೇಂದರ್ ಭಾತ್ರಾ ತಿಳಿಸಿದ್ದಾರೆ.