ಪಿಬಿಎಲ್ ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ಶಟ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 7 ತಂಡಗಳು ಸ್ಟಾರ್ ಶಟ್ಲರ್‌ಗಳನ್ನು ಖರೀದಿಸಲು ಮುಗಿಬಿದ್ದವು. ಭಾರತದ ತಾರಾ ಶಟ್ಲರ್ ಪಿವಿ ಸಿಂಧು ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ
ನವದೆಹಲಿ(ನ.27) : ಮುಂದಿನ ವರ್ಷ ಜ.20ರಿಂದ ಫೆ.9ರ ವರೆಗೆ ನಡೆಯಲಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) 5ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ವಿಶ್ವ ಚಾಂಪಿಯನ್ ಪಿ.ವಿ ಸಿಂಧು .77 ಲಕ್ಷ ಮೊತ್ತವನ್ನು ಬಾಚಿಕೊಂಡಿದ್ದಾರೆ. ವಿಶ್ವ ನಂ.1 ಸಿಂಗಲ್ಸ್ ತಾರೆ ಚೈನೀಸ್ ತೈಪೆಯ ತೈ ತ್ಜು ಯಿಂಗ್ ಕೂಡ 77 ಲಕ್ಷ ಪಡೆದಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿಂಧು ಹಾಗೂ ತೈ ತ್ಜು ಯಿಂಗ್ ಈ ಆವೃತ್ತಿಯ ಅತ್ಯಂತ ದುಬಾರಿ ಶಟ್ಲರ್ಗಳು ಎನಿಸಿಕೊಂಡರು. ಉಳಿದಂತೆ ಪುರುಷರಲ್ಲಿ ತಾರಾ ಶಟ್ಲರ್ ಬಿ.ಸಾಯಿ ಪ್ರಣೀತ್ 32 ಲಕ್ಷ ರು. ಪಡೆದಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ, ಪಿವಿ ಸಿಂಧುಗೆ ಹೊಸ ಜವಾಬ್ದಾರಿ ಕೊಟ್ಟ ನರೇಂದ್ರ ಮೋದಿ
ವಿಶ್ವ ನಂ.9 ಅಮೆರಿಕದ ಸಿಂಗಲ್ಸ್ ತಾರಾ ಆಟಗಾರ್ತಿ ಬೀವನ್ ಝಾಂಗ್ 39 ಲಕ್ಷ ರು. ಜ್ಯಾಕ್‌ಪಾಟ್ ಹೊಡೆದಿದ್ದಾರೆ. ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಪುತ್ರಿ ಗಾಯತ್ರಿ ಗೋಪಿಚಂದ್ರನ್ನು ಚೆನ್ನೈ ಸೂಪರ್ಸ್ಟಾರ್ಸ್ ಆಯ್ಕೆ ಮಾಡಿದೆ. ಉದಯೋನ್ಮುಖ ಅಸ್ಸಾಮೀಸ್ ಶಟ್ಲರ್ 3 ಲಕ್ಷ ರು. ಮೊತ್ತಕ್ಕೆ ತವರು ತಂಡ ನಾತ್‌ರ್ ಈಸ್ಟ್ ವಾರಿಯರ್ಸ್ ಸೇರಿದರು. ಈ ಬಾರಿ 74 ಶಟ್ಲರ್ಗಳು ಟೂರ್ನಿ ಆಡಲಿದ್ದಾರೆ. ಬಿ.ಸುಮೀತ್ ರೆಡ್ಡಿಯನ್ನು 11 ಲಕ್ಷ ಹಾಗೂ ಚಿರಾಗ್ ಶೆಟ್ಟಿಅವರನ್ನು 15.5 ಲಕ್ಷಕ್ಕೆ ಪುಣೆ ಉಳಿಸಿದೆ.
ಇದನ್ನೂ ಓದಿ: ಕೇರಳ ದೇವಸ್ಥಾನಕ್ಕೆ ಭೇಟಿ: ಸಾಂಪ್ರದಾಯಿಕ ಲುಕ್ ನಲ್ಲಿ ಕಂಗೊಳಿಸಿದ ಸಿಂಧು
ತಾರಾ ಶಟ್ಲರ್ ಸಿಂಧುಗೆ 77 ಲಕ್ಷ ರು. ಕೊಟ್ಟು ಹೈದರಾಬಾದ್ ಹಂಟರ್ಸ್ ತನ್ನಲ್ಲೇ ಉಳಿಸಿಕೊಂಡಿದೆ. ಚೈನೀಸ್ ತೈಪೆಯ ತೈ ತ್ಜು ಯಿಂಗ್‌ರನ್ನು ಹಾಲಿ ಚಾಂಪಿಯನ್ ತಂಡ ಬೆಂಗಳೂರು ರಾರಯಪ್ಟರ್ಸ್ ದುಬಾರಿ ಖರೀದಿ ಮಾಡಿದೆ. ಇನ್ನೊಂದೆಡೆ ಯುವ ಶಟ್ಲರ್ ಬಿ.ಸಾಯಿ ಪ್ರಣೀತ್ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ.
39 ಲಕ್ಷಕ್ಕೆ ಬೀವನ್ ಝಾಂಗ್‌ರನ್ನು ಅವಧ್ ವಾರಿಯರ್ಸ್ ಉಳಿಸಿಕೊಂಡಿದೆ. ಎಲ್ಲಾ ಫ್ರಾಂಚೈಸಿಗಳೂ ಹರಾಜಿನಲ್ಲಿ 2 ಕೋಟಿ ರು. ಮೊತ್ತವನ್ನು ಬಳಸಿಕೊಳ್ಳುವ ಅವಕಾಶ ಹೊಂದಿದ್ದವು. ಆದರೆ ಯಾವುದೇ ಒಬ್ಬ ಶಟ್ಲರ್ಗೆ 77 ಲಕ್ಷಕ್ಕಿಂತ ಹೆಚ್ಚು ವಿನಿಯೋಗ ಮಾಡುವಂತಿಲ್ಲ. ಕಳೆದ ಬಾರಿ ಅತಿಹೆಚ್ಚು ಮೊತ್ತದ ಮಿತಿ 80 ಲಕ್ಷ ರು. ಆಗಿತ್ತು. 154 ಆಟಗಾರರ ಹರಾಜಿನಲ್ಲಿ ಲಕ್ಷ್ಯ ಸೇನ್, ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗು ಚಿರಾಗ್ ಶೆಟ್ಟಿಇದ್ದರು.
ತಾರಾ ಶಟ್ಲರ್ಗಳು ಗೈರು:
ಭಾರತದ ತಾರಾ ಶಟ್ಲರ್ಗಳಾದ ಸೈನಾ ನೆಹ್ವಾಲ್ ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ 5ನೇ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇಬ್ಬರೂ ಶಟ್ಲರ್ಗಳು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿಯಿಂದ ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಸ್ಪೇನ್ ತಾರೆ ಕ್ಯಾರೊಲಿನಾ ಮರೀನ್ ಈ ಬಾರಿ ಸ್ಪರ್ಧಿಸುತ್ತಿಲ್ಲ.
ಲೀಗ್‌ನಲ್ಲಿ 7 ತಂಡಗಳು:
5ನೇ ಆವೃತ್ತಿಯ ಪಿಬಿಎಲ್‌ನಲ್ಲಿ 7 ತಂಗಳು ಪ್ರಶಸ್ತಿಗಾಗಿ ಸೆಣಸಲಿವೆ. ಹಾಲಿ ಚಾಂಪಿಯನ್ ಬೆಂಗಳೂರು ರಾರಯಪ್ಟರ್ಸ್, ಅವಧ್ ವಾರಿಯರ್ಸ್, ಮುಂಬೈ ರಾಕೆಟ್ಸ್, ಹೈದರಾಬಾದ್ ಹಂಟರ್ಸ್, ಚೆನ್ನೈ ಸೂಪರ್ಸ್ಟಾರ್ಸ್, ನಾತ್‌ರ್ ಈಸ್ಟರ್ನ್ ವಾರಿಯರ್ಸ್, ಪುಣೆ 7 ಏಸಸ್ ತಂಡಗಳು ಪ್ರಶಸ್ತಿ ಕಣದಲ್ಲಿವೆ.