ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಭಾರತ ಕಬಡ್ಡಿ ತಂಡ ಪ್ರಕಟ: ಬುಲ್ಸ್ ನಾಯಕ ಪವನ್‌ಗೆ ಜಾಕ್‌ಪಾಟ್..!

By Web Desk  |  First Published Nov 26, 2019, 6:30 PM IST

ದಕ್ಷಿಣ ಏಷ್ಯನ್ ಗೇಮ್ಸ್‌ ಕ್ರೀಡಾಕೂಟಕ್ಕೆ ಭಾರತ ಕಬಡ್ಡಿ ತಂಡವನ್ನು ಪ್ರಕಟಿಸಲಾಗಿದ್ದು, ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆರಾವತ್‌ಗೆ ಜಾಕ್‌ಪಾಟ್ ಹೊಡೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ....


ನವದೆಹಲಿ(ನ.26): ಮುಂಬರುವ ಡಿಸೆಂಬರ್’ನಲ್ಲಿ ಜರುಗಲಿರುವ ದಕ್ಷಿಣ ಏಷ್ಯನ್ ಗೇಮ್ಸ್ ಕಬಡ್ಡಿ ಟೂರ್ನಿಗೆ ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್ 12 ಆಟಗಾರನ್ನೊಳಗೊಂಡ ತಂಡ ಪ್ರಕಟಿಸಲಾಗಿದ್ದು, ದೀಪಕ್ ಹೂಡಾಗೆ ನಾಯಕತ್ವ ಪಟ್ಟ ನೀಡಲಾಗಿದೆ. ಇನ್ನು ಬುಲ್ಸ್ ನಾಯಕ ಪವನ್ ಶೆರಾವತ್ ಗೆ ಜಾಕ್ ಪಾಟ್ ಹೊಡೆದಿದೆ. 13ನೇ ದಕ್ಷಿಣ ಏಷ್ಯನ್ ಗೇಮ್ಸ್ ಟೂರ್ನಿಯು ಡಿಸೆಂಬರ್ 04ರಿಂದ 9ರವರೆಗೆ ನೇಪಾಳ ರಾಜಧಾನಿ ಕಠ್ಮುಂಡುವಿನ ಫೊಕಾರದಲ್ಲಿ ನಡೆಯಲಿದೆ.

ರಾಷ್ಟ್ರೀಯ ಕಬಡ್ಡಿ ಶಿಬಿರ: ರಾಜ್ಯದ ನಾಲ್ವರಿಗೆ ಸ್ಥಾನ

Tap to resize

Latest Videos

ದೀಪಕ್ ನಿವಾಸ್ ಹೂಡಾ ಭಾರತದ ಪುರುಷರ ಕಬಡ್ಡಿ ತಂಡವನ್ನು ಮುನ್ನಡೆಸಿದರೆ, ಪ್ರಿಯಾಂಕ ಭಾರತ ಮಹಿಳಾ ತಂಡದ ನಾಯಕಿಯಾಗಿ ನೇಮಕವಾಗಿದ್ದಾರೆ. ಇನ್ನು ಪುರುಷರ ತಂಡದ ಉಪನಾಯಕನಾಗಿ ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿದ್ದ ಪವನ್ ಕುಮಾರ್ ಶೆರಾವತ್’ಗೆ ಉಪನಾಯಕ ಪಟ್ಟ ನೀಡಲಾಗಿದೆ. ಮಹಿಳಾ ತಂಡದ ಉಪನಾಯಕಿಯಾಗಿ ದೀಪಿಕಾ ಜೋಸೆಫ್ ಆಯ್ಕೆಯಾಗಿದ್ದಾರೆ.

ದೀಪಕ್ ನಿವಾಸ್ ಹೂಡಾ ನೇತೃತ್ವದ ಕಬಡ್ಡಿ ತಂಡ ದಕ್ಷಿಣ ಏಷ್ಯನ್ ಗೇಮ್ಸ್’ನಲ್ಲಿ 10ನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ತಂಡದಲ್ಲಿ ಪವನ್ ಶೆರಾವತ್, ಪ್ರದೀಪ್ ನರ್ವಾಲ್, ವಿಕಾಸ್ ಖಂಡೋಲ, ದಬಾಂಗ್ ಡೆಲ್ಲಿ ತಂಡದ ಸ್ಟಾರ್ ರೇಡರ್ ನವೀನ್ ಕುಮಾರ್ ಬಲ ನೀಡಲಿದ್ದಾರೆ.

ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ

ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದಿದ್ದ ಭಾರತ ತಂಡದ ಅನುಭವಿ ಆಟಗಾರರಾದ ರಾಹುಲ್ ಚೌಧರಿ, ಸಂದೀಪ್ ನರ್ವಾಲ್, ರವೀಂದ್ರ ಪೆಹಾಲ್ ಹಾಗೂ ನಿತಿನ್ ತೋಮರ್ ಅವರಂತಹ ದಿಗ್ಗಜ ಆಟಗಾರರು ಟೀಂ ಇಂಡಿಯಾ ಕಬಡ್ಡಿ ತಂಡದಲ್ಲಿ ಅರ್ಹತೆಗಿಟ್ಟಿಸಲು ವಿಫಲರಾಗಿದ್ದಾರೆ. 

ಪುರುಷರ ಕಬಡ್ಡಿ ತಂಡ ಹೀಗಿದೆ:

ದೀಪಕ್ ನಿವಾಸ್ ಹೂಡ[ನಾಯಕ], ಪವನ್ ಕುಮಾರ್ ಶೆರಾವತ್[ಉಪನಾಯಕ], ನಿತೇಶ್ ಕುಮಾರ್, ವಿಶಾಲ್ ಭಾರಧ್ವಾಜ್, ಸುನಿಲ್ ಕುಮಾರ್, ಪರ್ವೇಸ್ ಭೈನಸ್ವಾಲ್, ನವೀನ್ ಕುಮಾರ್, ಪ್ರದೀಪ್ ನರ್ವಾಲ್, ಅಮಿತ್ ಹೂಡಾ, ಸುರೇಂದರ್ ನಾಡಾ, ವಿಕಾಸ್ ಖಂಡೋಲಾ ಹಾಗೂ ದರ್ಶನ್ ಕಡಿಯಾನ್

ಮಹಿಳಾ ತಂಡ:
ಪ್ರಿಯಾಂಕ[ನಾಯಕಿ], ದೀಪಿಕಾ ಜೋಸೆಫ್[ಉಪನಾಯಕಿ], ರಿತು ಕುಮಾರಿ, ನಿಶಾ, ಪುಷ್ಪಾ, ಸಾಕ್ಷಿ ಕುಮಾರಿ, ಪಾಯೆಲ್ ಚೌಧರಿ, ರಿತು ನೇಗಿ, ಸೋನಾಲಿ ವಿಷ್ಣು ಶಿಂಘಾಟೆ, ಸ್ನೇಹಲ್ ಪ್ರದೀಪ್ ಶಿಂಧೆ, ಮಮ್ತಾ ಕುಮಾರಿ ಢಾಕಾ ಮತ್ತು ಹರ್ವೀಂದೀರ್ ಕೌರ್.

click me!