
ಬೆಂಗಳೂರು(ಅ.28): 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ (National Swimming Championship) ಕರ್ನಾಟಕ ಶ್ರೀಹರಿ ನಟರಾಜ್ (Srihari Nataraj) ಮತ್ತೊಂದು ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಬುಧವಾರ ಒಟ್ಟು ಮೂರು ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡವು.
100 ಮೀ. ಫ್ರೀಸ್ಟೈಲ್ ಪುರುಷರ ವಿಭಾಗದಲ್ಲಿ ರಾಜ್ಯದ ಶ್ರೀಹರಿ ನಟರಾಜ್ ಹೀಟ್ಸ್‌ನಲ್ಲಿ 50.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ವಿರ್ಧವಾಲ್ ಖಾಡೆ 2012ರಲ್ಲಿ ಬರೆದಿದ್ದ ರಾಷ್ಟ್ರೀಯ ದಾಖಲೆ (National Record) (50.53 ಸೆ.)ಯನ್ನು ಮುರಿದರು. ಬಳಿಕ ಫೈನಲ್‌ನಲ್ಲಿ 49.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.
ರಾಷ್ಟ್ರೀಯ ಈಜು: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಶ್ರೀಹರಿ ನಟರಾಜ್
800 ಮೀ. ಫ್ರೀಸ್ಟೈಲ್‌ನಲ್ಲಿ ದೆಹಲಿಯ ಕುಶಾಗ್ರ ರಾವತ್ 8 ನಿಮಿಷ 08.32 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ತಮ್ಮದೇ ರಾಷ್ಟ್ರೀಯ ದಾಖಲೆ(8 ನಿ. 09.47 ಸೆ)ಯನ್ನು ಉತ್ತಮಪಡಿಸಿದರು. ಪಂಜಾಬ್‌ನ ಚಹತ್ ಅರೋರ 50 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 33.62 ಸೆಕೆಂಡ್‌ನಲ್ಲಿ ಗುರಿ ತಲುಪಿ, ಜಯವೀರನ್ 2018ರಲ್ಲಿ ಬರೆದಿದ್ದ ರಾಷ್ಟ್ರೀಯ ದಾಖಲೆ(33.81 ಸೆ.)ಯನ್ನು ಮುರಿದರು.
ಮಂಗಳವಾರದಿಂದ ಆರಂಭವಾದ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್ (Srihari Nataraj) 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 55.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮದೇ ರಾಷ್ಟ್ರೀಯ ದಾಖಲೆ (National Record) (55.63 ಸೆ.)ಯನ್ನು ಉತ್ತಮಪಡಿಸಿಕೊಂಡರು.
ಅಕ್ಟೋಬರ್ 26ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಹಿರಿಯರ ಈಜು
ಬುಧವಾರ ಕೂಡಾ ಅತಿಥೇಯ ಕರ್ನಾಟಕ 8 ಪದಕಗಳನ್ನು ಜಯಿಸಿತು. ಮಂಗಳವಾರ 8 ಪದಕ ಜಯಿಸಿತ್ತು. ಹಿರಿಯರ ಚಾಂಪಿಯನ್‌ಶಿಪ್ ಅಕ್ಟೋಬರ್ 26ರಿಂದ 29ರವರೆಗೆ ನಡೆಯಲಿದೆ. ಈಜು ವಿಭಾಗದ ಸ್ಪರ್ಧೆಗಳು ಬೆಂಗಳೂರಿನ (Bengaluru) ಬಸವನಗುಡಿಯ ನವೀಕೃತ ಈಜು ಕೊಳದಲ್ಲಿ ನಡೆಯಲಿದ್ದು, ಡೈವಿಂಗ್ ಹಾಗೂ ವಾಟರ್ ಪೋಲೋ ಸ್ಪರ್ಧೆಗಳು ಕ್ರಮವಾಗಿ ಅಲ್ಸೂರಿನ ಕೆನ್ಸಿಂಗ್ಟನ್ ಈಜು ಕೊಳ ಹಾಗೂ ನೆಟ್ಕಲಪ್ಪ ಈಜು ಕೇಂದ್ರದಲ್ಲಿ ನಡೆಯುತ್ತಿವೆ
ವಿಶ್ವ ಬಾಕ್ಸಿಂಗ್: ಭಾರತದ 7 ಬಾಕ್ಸರ್‌ಗಳು 2ನೇ ಸುತ್ತಿಗೆ
ಬೆಲ್ಗ್ರೇಡ್: ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ (World Boxing Championship) ಭಾರತದ ಮೇಲುಗೈ ಮುಂದುವರೆದಿದ್ದು, 7 ಬಾಕ್ಸರ್‌ಗಳು 2ನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಶಾಂತ್ ದೇವ್ ಹಂಗೇರಿಯ ಲಾಸ್ಲೊ ಕೊಜಕ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸುಮಿತ್ ಜಮೈಕಾದ ಡಮೋನ್ ಒ’ನೀಲ್ ವಿರುದ್ಧ 5-0ರಲ್ಲಿ ಗೆದ್ದರೆ, ನರೇಂದರ್ ಬೆರ್ವಾಲ್ (92+ ಕೆ.ಜಿ) ಪೋಲೆಂಡ್‌ನ ಓಸ್ಕರ್ ಸಫರ‍್ಯನ್ ವಿರುದ್ಧ 4-1 ಅಂತರದಲ್ಲಿ ಗೆದ್ದು 2ನೇ ಸುತ್ತು ತಲುಪಿದರು.
Major Dhyan Chand Khel Ratna ಪ್ರಶಸ್ತಿಗೆ ನೀರಜ್, ಮಿಥಾಲಿ ಸೇರಿ 11 ಕ್ರೀಡಾಪಟುಗಳ ಹೆಸರು ಶಿಫಾರಸು..!
86 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಲಕ್ಷ್ಯಾ ಚಹರ್ ದಕ್ಷಿಣ ಕೊರಿಯಾದ ಕಿಮ್ ವಿರುದ್ಧ ಸೋಲನುಭವಿಸಿದರು. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಆರಂಭದಲ್ಲೇ ಏಷ್ಯನ್ ಬಾಕ್ಸಿಂಗ್ ಪದಕ ವಿಜೇತ ಶಿವ ಥಾಪಾ(63.5) ಸೇರಿದಂತೆ ನಾಲ್ವರು ಬಾಕ್ಸರ್‌ಗಳು ಈ ಮೊದಲೇ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ದೀಪಕ್ ಬೊಹ್ರಿಯ(51 ಕೆಜಿ) ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸುಮಾರು 100ಕ್ಕೂ ಹೆಚ್ಚು ದೇಶಗಳಿಂದ 600ಕ್ಕೂ ಅಧಿಕ ಬಾಕ್ಸರ್‌ಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಬಾಕ್ಸರ್‌ಗಳು 3 ಪಂದ್ಯಗಳನ್ನು ಗೆದ್ದರೆ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.