ರಾಷ್ಟ್ರೀಯ ಈಜು: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಶ್ರೀಹರಿ ನಟರಾಜ್

By Kannadaprabha NewsFirst Published Oct 27, 2021, 9:50 AM IST
Highlights

* ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ಶ್ರೀಹರಿ

* ಬೆಂಗಳೂರಿನಲ್ಲಿ ನಡೆಯುತ್ತಿರುವ 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌

* ಕೂಟದ ಮೊದಲ ದಿನ ಅತಿಥೇಯ ಕರ್ನಾಟಕ 9 ಪದಕಗಳನ್ನು ಗೆದ್ದುಕೊಂಡಿದೆ

ಬೆಂಗಳೂರು(ಅ.27): ಮಂಗಳವಾರದಿಂದ ಆರಂಭಗೊಂಡ 74ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ (National Swimming Championship) ನಲ್ಲಿ ಮೊದಲ ದಿನವೇ ಮೂರು ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡವು. ಕರ್ನಾಟಕದ ಶ್ರೀಹರಿ ನಟರಾಜ್‌ (Srihari Nataraj) 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 55.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮದೇ ರಾಷ್ಟ್ರೀಯ ದಾಖಲೆ (National Record) (55.63 ಸೆ.)ಯನ್ನು ಉತ್ತಮಪಡಿಸಿಕೊಂಡರು. ಶ್ರೀಹರಿ ನಟರಾಜ್ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಪುರುಷರ 400 ಮೀ. ಫ್ರೀಸ್ಟೈಲ್‌ನಲ್ಲಿ ದೆಹಲಿಯ ಕುಶಾಗ್ರ ರಾವತ್‌ 3 ನಿಮಿಷ 53.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಒಲಿಂಪಿಯನ್‌ ಸಾಜನ್‌ ಪ್ರಕಾಶ್‌ (sajjan prakash) 2018ರಲ್ಲಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ(3 ನಿ. 54.93 ಸೆ.)ಯನ್ನು ಮುರಿದರು. 4*200 ಮೀ. ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ಈಜು ತಂಡ 7 ನಿ. 37.65 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ರೈಲ್ವೇಸ್‌ ತಂಡದ ರಾಷ್ಟ್ರೀಯ ದಾಖಲೆಯನ್ನು ಮುರಿಯಿತು. 

ಅಕ್ಟೋಬರ್ 26ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಹಿರಿಯರ ಈಜು

ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ರಿಧಿಮಾ ಒಲಿಂಪಿಯನ್‌ ಮಾನಾ ಪಟೇಲ್‌ರನ್ನು (Mana Patel) ಹಿಂದಿಕ್ಕಿ 1 ನಿಮಿಷ 04.40 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಕೂಟದ ಮೊದಲ ದಿನ ಅತಿಥೇಯ ಕರ್ನಾಟಕ (Karnataka) 9 ಪದಕಗಳನ್ನು ಗೆದ್ದುಕೊಂಡಿತು.

ವಿಶ್ವ ಬಾಕ್ಸಿಂಗ್‌: 2ನೇ ಸುತ್ತಿಗೆ ಶಿವ ಥಾಪ, ಆಕಾಶ್‌ ಸಾಂಗ್ವಾನ್‌

ಬೆಲ್ಗ್ರೇಡ್‌: ಪುರುಷರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ (World Boxing Championship) ಭಾರತದ ಬಾಕ್ಸರ್‌ಗಳಾದ ಶಿವ ಥಾಪ (Shiva Thapa), ಆಕಾಶ್‌ ಸಾಂಗ್ವಾನ್‌ ಹಾಗೂ ರೋಹಿತ್‌ ಮೋರ್‌ ಮೊದಲ ಸುತ್ತಿನಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ. 

ಅಮೃತ ಕ್ರೀಡಾ ದತ್ತು ಯೋಜನೆಗೆ ಅದಿತಿ ಅಶೋಕ್, ಶ್ರೀ ಹರಿ ಸೇರಿ 75 ಕ್ರೀಡಾಪಟುಗಳು ಆಯ್ಕೆ

63.5 ಕೆ.ಜಿ. ವಿಭಾಗದಲ್ಲಿ ಕೀನ್ಯಾದ ವಿಕ್ಟರ್‌ ನ್ಯೆದೆರಾ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರೆ, 67 ಕೆ.ಜಿ. ವಿಭಾಗದಲ್ಲಿ ಸಾಂಗ್ವಾನ್‌ ಟರ್ಕಿಯ ಫುರ್ಕಾನ್‌ ಆ್ಯಡೆಮ್‌ ವಿರುದ್ಧ 5-0ರಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು. 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ರೋಹಿತ್‌ ಈಕ್ವೆಡಾರ್‌ನ ಜೀನ್‌ ಕಾಯ್ಕೆಡೊ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರು. ಏಷ್ಯನ್‌ ಚಾಂಪಿಯನ್‌ ಸಂಜೀತ್‌(92 ಕೆ.ಜಿ.) ಹಾಗೂ ಸಚಿನ್‌ ಕುಮಾರ್‌ (80 ಕೆ.ಜಿ)ಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದ್ದು, 2ನೇ ಸುತ್ತು ಪ್ರವೇಶಿಸಿದ್ದಾರೆ.

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: 2ನೇ ಸುತ್ತಿಗೆ ಸಮೀರ್‌

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌ (French Open Badminton) ಟೂರ್ನಿಯಲ್ಲಿ ಭಾರತದ ಸಮೀರ್‌ ವರ್ಮಾ (Sameer Verma) ಗೆಲುವಿನ ಆರಂಭ ಪಡೆದಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ದಕ್ಷಿಣ ಕೊರಿಯಾದ ಲೀ ಡೊಂಗ್‌ ವಿರುದ್ಧ 21-14, 21-12 ಅಂತರದಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು. 

COVID Vaccine ಪಡೆದಿದ್ದರಷ್ಟೇ ಆಸ್ಟ್ರೇಲಿಯನ್ ಓಪನ್‌ಗೆ ಬನ್ನಿ: ಆಸ್ಟ್ರೇಲಿಯಾ ಸರ್ಕಾರ

ಈ ಮೊದಲು 2 ಬಾರಿ ಲೀ ಗೆ ಶರಣಾಗಿದ್ದ ಸಮೀರ್‌, ಮೊದಲ ಬಾರಿ ಗೆಲುವಿನ ಸವಿಯುಂಡರು. ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಧ್ರುವ್‌ ಕಪಿಲಾ-ಸಿಕ್ಕಿ ರೆಡ್ಡಿ ಜೋಡಿ ಮಲೇಷ್ಯಾದ ಚಾನ್‌ ಪೆಂಗ್‌-ಲಿಯು ಯಿಂಗ್‌ ಜೋಡಿ ವಿರುದ್ಧ 0-2 ಗೇಮ್‌ ಸೋಲನುಭವಿಸಿತು.

click me!