ಹುಬ್ಬಳ್ಳಿಯಲ್ಲಿ ತಲೆಯೆತ್ತಲಿದೆ ಮಲ್ಟಿಸ್ಪೋರ್ಟ್ಸ್ ಅರೇನಾ

By Kannadaprabha News  |  First Published Nov 28, 2019, 1:05 PM IST

ಉತ್ತರ ಕರ್ನಾಟಕದ ಕ್ರೀಡಾಪಟುಗಳಿಗೆ ನೆರವಾಗಲೆಂದೇ ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ಮಲ್ಟಿಸ್ಪೋರ್ಟ್ಸ್ ಅರೇನಾ ತಲೆಯೆತ್ತಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ವರದಿ: ಮಯೂರ ಹೆಗಡೆ

ಹುಬ್ಬಳ್ಳಿ(ನ.28): ಉತ್ತರ ಕರ್ನಾಟಕ ಭಾಗದ ಮೊದಲ ಮಲ್ಟಿಸ್ಪೋರ್ಟ್ಸ್ ಅರೇನಾ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸದ್ದಿಲ್ಲದೇ ತಲೆ ಎತ್ತುತ್ತಲಿದ್ದು, ವರ್ಷಾಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ. ಸುಮಾರು 32 ಗುಂಟೆ ಜಾಗದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣಗೊಳ್ಳುತ್ತಿದ್ದು, ಚೈತನ್ಯ ಸ್ಪೋರ್ಟ್ಸ್ ಫೌಂಡೇಶನ್‌ನ(ಸಿಎಸ್‌ಎಫ್‌) ಇದರ ಹೊಣೆ ಹೊತ್ತಿದೆ. 

Tap to resize

Latest Videos

‬#IPLFlashback ಪ್ರತಿ ಆವೃತ್ತಿಯ ಅತೀ ದುಬಾರಿ ಆಟಗಾರರಿವರು..!

ಸ್ಪೋರ್ಟ್ಸ್ ಕೋಟಾದಡಿ ನೈಋುತ್ಯ ರೈಲ್ವೆಯಲ್ಲಿ ಉದ್ಯೋಗ ಪಡೆದ ಅಂತಾರಾಷ್ಟ್ರೀಯ ಕ್ರೀಡಾಳುಗಳು ಯಾವುದೇ ವೇತನ ಪಡೆಯದೇ ಇಲ್ಲಿ ಕೋಚ್‌ಗಳಾಗಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ತಮ್ಮ ಅನುಭವವನ್ನು ಧಾರೆಯೆರಲಿದ್ದಾರೆ.

ಮೊದಲ ಸಿಂಥೆಟಿಕ್‌ ಟ್ರ್ಯಾಕ್‌:

ಕ್ರಿಕೆಟ್‌, ಬಾಕ್ಸ್‌ ಕ್ರಿಕೆಟ್‌, ಫುಟ್ಬಾಲ್‌, ಅಥ್ಲೆಟಿಕ್ಸ್‌, ವಾಲ್‌ ಕ್ಲೈಂಬಿಂಗ್‌, ರೋಪ್‌ ಕ್ಲೈಂಬಿಂಗ್‌, ಶೂಟಿಂಗ್‌, ಬ್ಯಾಡ್ಮಿಂಟನ್‌, ಕರಾಟೆ, ಸ್ಯಾಂಡ್‌ ವಾಲಿಬಾಲ್‌, ದೇಶಿ ಕ್ರೀಡೆಗಳಾದ ಕಬಡ್ಡಿ(ಮ್ಯಾಟ್‌), ಖೋಖೋ ಕ್ರೀಡೆಗಳಿಗೂ ತರಬೇತಿ ಸಿಗ​ಲಿದೆ. ಹುಬ್ಬಳ್ಳಿಯಲ್ಲಿ ಮೊದಲ 100 ಮೀಟರ್‌ ಸಿಂಥೆಟಿಕ್‌ ಟ್ರ್ಯಾಕ್‌ ಕೂಡ ಇಲ್ಲಿ ನಿರ್ಮಾಣವಾಗುತ್ತಿದೆ.

ಸಂಜು ಸ್ಯಾಮ್ಸನ್‌ಗೆ ಸ್ಥಾನ: ಕೊನೆಗೂ ಖುಷಿಯಾದ ಫ್ಯಾನ್ಸ್..!

‘ಉತ್ತರ ಕರ್ನಾಟಕ ಭಾಗದ ಕ್ರೀಡಾಳುಗಳು ಅಗತ್ಯ ತರಬೇತಿ ಪಡೆಯಲು ಬೆಂಗಳೂರು, ಪುಣೆ, ಮುಂಬೈ, ಗೋವಾ ಮತ್ತಿತರ ಪ್ರದೇಶಗಳಿಗೆ ಹೋಗಬೇಕಿತ್ತು. ಇಲ್ಲಿ ಗುಣಮಟ್ಟದ, ಅರ್ಹ ತರಬೇತಿಯ ಅವಕಾಶ ಇರಲಿಲ್ಲ. ಈ ಭಾಗದ ಗ್ರಾಮೀಣ, ಬಡ ಕ್ರೀಡಾಳುಗಳಿಗೆ ಕಡಿಮೆ ವೆಚ್ಚದಲ್ಲಿ ತರಬೇತಿ ನೀಡುವುದು ನಮ್ಮ ಉದ್ದೇಶ. 8 ವರ್ಷದಿಂದ ಹಿಡಿದು 70 ವರ್ಷದವರೂ ಇಲ್ಲಿ ತರಬೇತಿ ಪಡೆಯಬಹುದಾ​ಗಿದೆ’ ಎಂದು ಸಿಎಸ್‌ಎಫ್‌ನ ಪರಶುರಾಮ ಪೂಜಾರಿ ‘ಕ​ನ್ನ​ಡ​ಪ್ರಭ’ಕ್ಕೆ ತಿಳಿ​ಸಿ​ದ್ದಾ​ರೆ.

ವೃತ್ತಿ​ಪರ ಕೋಚ್‌ಗಳು

ನೈಋುತ್ಯ ರೈಲ್ವೆಯ ಹುಬ್ಬಳ್ಳಿ ಮೆಕ್ಯಾನಿಕಲ್‌ ವಿಭಾಗದಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ರುವ ವಿಕಾಸ್‌ ನೀಲಗುಂದ ಈ ಕ್ರೀಡಾ ಸಮುಚ್ಚಯದ ಮುಖ್ಯ ಕೋಚ್‌ ಆಗಿದ್ದಾರೆ. ಇವರು ಸೌಥ್‌ ಏಷ್ಯನ್‌ ಗೇಮ್ಸ್‌, ಏಷ್ಯನ್‌ ಗ್ರ್ಯಾನ್‌ ಪ್ರೀ, ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಸೇರಿದಂತೆ 15 ಬಾರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 

ಮುಷ್ತಾಕ್ ಅಲಿ ಟ್ರೋಫಿ: ಸೆಮೀಸ್ ಪ್ರವೇಶಿಸಿದ ಕರ್ನಾಟಕ

2009ರಲ್ಲಿ ಏಕಲವ್ಯ, 2014 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಇವರ ಪತ್ನಿ ಕಾವೇರಮ್ಮ ಕರ್ನಾಟಕ ಹಾಕಿ ಮಹಿಳಾ ತಂಡದ ಕ್ಯಾಪ್ಟನ್‌ ಆಗಿದ್ದವರು. ಇವರು ಮಾನ್ಯತೆಯುಳ್ಳ ಕೋಚ್‌ ಆಗಿದ್ದಾರೆ. ರೈಲ್ವೆ ರಣಜಿ ತಂಡದ ಕ್ರಿಕೆಟಿಗ ನಿತಿನ್‌ ಬಿಲ್ಲೆ, ಕರ್ನಾಟಕ ರಣಜಿ ಕ್ರಿಕೆಟಿಗ ಪವನ ದೇಶಪಾಂಡೆ ಸೇರಿ ಪ್ರತಿಯೊಂದು ಆಟಕ್ಕೂ ಇಬ್ಬರು ಪುರುಷ, ಮಹಿಳಾ ಕೋಚ್‌ಗಳು ತರಬೇತಿ ನೀಡಲಿದ್ದಾರೆ.

’ಉಕ ಭಾಗದಲ್ಲಿ ಉತ್ತಮ ಕ್ರೀಡಾಳುಗಳಿದ್ದಾರೆ, ಆದರೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಹೀಗಾಗಿ ಸ್ಪೋರ್ಟ್ಸ್ ಕೋಟಾದ ಉದ್ಯೋಗ ಪಡೆಯಲೂ ಸಾಧ್ಯವಾಗುತ್ತಿಲ್ಲ. ಸ್ಪೋರ್ಟ್ಸ್ ಕೋಟಾದಡಿ ಉದ್ಯೋಗ ಪಡೆದ ನಾವು ಇತರರಿಗೆ ನೆರವಾಗಲೆಂದು ಬಿಡುವಿನ ವೇಳೆ ಉಚಿತವಾಗಿ ತರಬೇತಿ ನೀಡಲು ನಿರ್ಧರಿಸಿದ್ದೇವೆ.’

- ವಿಕಾಸ ನೀಲಗುಂದ, ಸಿಎಸ್‌ಎಫ್‌ ಸ್ಪೋರ್ಟ್ಸ್ ಅರೇನಾದ ಮುಖ್ಯ ಕೋಚ್‌
 

click me!