ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌: 2ನೇ ಸುತ್ತಿಗೆ ಶ್ರೀಕಾಂತ್‌

Published : Nov 21, 2019, 11:17 AM IST
ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌: 2ನೇ ಸುತ್ತಿಗೆ ಶ್ರೀಕಾಂತ್‌

ಸಾರಾಂಶ

ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿದಂಬಿ ಶ್ರೀಕಾಂತ್‌ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಗ್ವಾಂಗ್ಜು (ನ.21): ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌ ಹಾಗೂ ಸಮೀರ್‌ ವರ್ಮಾ ಇಲ್ಲಿ ನಡೆ​ಯು​ತ್ತಿ​ರು​ವ ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯ ಪುರು​ಷರ ಸಿಂಗಲ್ಸ್‌ನಲ್ಲಿ 2ನೇ ಸುತ್ತಿಗೆ ಪ್ರವೇ​ಶಿ​ಸಿ​ದ್ದಾರೆ.

ಬುಧ​ವಾರ ನಡೆದ ಮೊದಲ ಸುತ್ತಿನ ಪಂದ್ಯ​ದಲ್ಲಿ ಶ್ರೀಕಾಂತ್‌ ಹಾಂಕಾಂಗ್‌ನ ವೊಂಗ್‌ ವಿಂಗ್‌ ವಿನ್ಸೆಂಟ್‌ ವಿರುದ್ಧ 21-18, 21-17 ಗೇಮ್‌ಗಳಲ್ಲಿ ಗೆಲುವು ಸಾಧಿ​ಸಿ​ದರು. ಕೇವಲ 37 ನಿಮಿಷಗಳ ಕಾಲ ನಡೆದ ಪಂದ್ಯ​ದಲ್ಲಿ ಶ್ರೀಕಾಂತ್‌ ಸಂಪೂರ್ಣ ಮೇಲುಗೈ ಸಾಧಿ​ಸಿ​ದರು. ವಿನ್ಸೆಂಟ್‌ ವಿರುದ್ಧ ಶ್ರೀಕಾಂತ್‌ಗಿದು 11ನೇ ಗೆಲುವು. 2ನೇ ಸುತ್ತಿ​ನಲ್ಲಿ ವಿಶ್ವ ನಂ.1 ಆಟ​ಗಾರ, ಜಪಾನ್‌ನ ಕಂಟಾ ತ್ಸುನೆ​ಯೇಮಾ ವಿರುದ್ಧ ಸೆಣ​ಸ​ಲಿ​ದ್ದಾರೆ. ಶ್ರೀಕಾಂತ್‌ಗೆ, ಜಪಾನ್‌ ಆಟ​ಗಾರನಿಂದ ಕಠಿಣ ಸ್ಪರ್ಧೆ ಎದು​ರಾ​ಗುವ ನಿರೀಕ್ಷೆ ಇದೆ.

ಕೊರಿಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟ​ನ್‌: ಶ್ರೀಕಾಂತ್ ಮೇಲೆ ಎಲ್ಲರ ಚಿತ್ತ

ಕಳೆದ ವಾರ ಹಾಂಕಾಂಗ್‌ ಓಪನ್‌ನಲ್ಲಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದ್ದ ಶ್ರೀಕಾಂತ್‌, ಈ ವರ್ಷ ಇಂಡಿಯಾ ಓಪನ್‌ನಲ್ಲಿ ರನ್ನರ್‌-ಅಪ್‌ ಆಗಿ​ದ್ದರು. 2019ರಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ಶ್ರೀಕಾಂತ್‌ ಎದುರು ನೋಡು​ತ್ತಿದ್ದು, ಇಲ್ಲಿ ಚಾಂಪಿ​ಯನ್‌ ಆಗಬಲ್ಲ ನೆಚ್ಚಿನ ಆಟ​ಗಾ​ರರ ಪೈಕಿ ಒಬ್ಬ​ರೆ​ನಿ​ಸಿ​ಕೊಂಡಿ​ದ್ದಾರೆ.

ಮುಷ್ತಾಕ್‌ ಅಲಿ ಟಿ20: ಸೂಪರ್‌ ಲೀಗ್‌ ವೇಳಾ​ಪಟ್ಟಿ ಪ್ರಕಟ

ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಸಮೀರ್‌ ವರ್ಮಾ ಜಪಾನ್‌ನ ಕಜು​ಮಾಸ ಸಕಾಯಿ ವಿರುದ್ಧ ಗೆಲುವು ಸಾಧಿ​ಸಿ​ದರು. ಸಮೀರ್‌ ಮೊದ​ಲ ಗೇಮ್‌ನಲ್ಲಿ 11-8ರಿಂದ ಮುನ್ನಡೆ ಹೊಂದಿದ್ದ ವೇಳೆ ಸಕಾಯಿ ಗಾಯ​ಗೊಂಡು ನಿವೃತ್ತಿ ಪಡೆದ ಕಾರಣ, ಸಮೀರ್‌ಗೆ ಗೆಲುವು ಒಲಿ​ಯಿತು. 2ನೇ ಸುತ್ತಿ​ನಲ್ಲಿ ಸಮೀರ್‌ಗೆ ಸ್ಥಳೀಯ ಆಟ​ಗಾರ ಕಿಮ್‌ ಡೊಂಗ್‌ಹುನ್‌ ಎದು​ರಾ​ಗ​ಲಿ​ದ್ದಾರೆ. ಕಿಮ್‌ ಮೊದಲ ಸುತ್ತಿನ ಪಂದ್ಯ​ದಲ್ಲಿ ಭಾರ​ತದ ಸೌರಭ್‌ ವರ್ಮಾ ವಿರುದ್ಧ 21-13, 12-21, 13-21 ಗೇಮ್‌ಗಳಲ್ಲಿ ಸೋಲು ಕಂಡರು. ಮೊದಲ ಗೇಮ್‌ನಲ್ಲಿ ಸುಲ​ಭ​ವಾಗಿ ಗೆದ್ದಿದ್ದ ಸೌರಭ್‌, ನಂತ​ರದ 2ನೇ ಗೇಮ್‌ಗಳನ್ನು ಬಿಟ್ಟು​ಕೊ​ಟ್ಟರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!