ಹಲವು ಅಡೆ ತಡೆ ಎದುರಿಸಿದೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಡೇವಿಸ್ ಕಪ್ ಟೂರ್ನಿಗೆ ಕೊನೆಗೂ ಮಹೂರ್ತ ಕೂಡಿ ಬಂದಿದೆ. ಆದರೆ ಒಳಾಂಗಣ ಕ್ರೀಡಾಂದಲ್ಲಿ ಟೂರ್ನಿ ನಡೆಯಲಿದೆ.
ನವದೆಹಲಿ(ನ.20): ಭಾರತ-ಪಾಕಿಸ್ತಾನ ನಡುವೆ ನ.29, 30ರಂದು ನಡೆಯಲಿರುವ ಏಷ್ಯಾ/ಓಷಿಯಾನಿಯಾ ಡೇವಿಸ್ ಕಪ್ ಟೆನಿಸ್ ಪಂದ್ಯಕ್ಕೆ ಕಜಕಸ್ತಾನದ ನೂರ್-ಸುಲ್ತಾನ್ ಆತಿಥ್ಯ ವಹಿಸಲಿದೆ ಎಂದು ಅಂತಾರಾಷ್ಟ್ರೀಯ ಟೆನಿಸ್ ಫೆಡರೇನ್ (ಐಟಿಎಫ್) ಖಚಿತಪಡಿಸಿದೆ.
ಇದನ್ನೂ ಓದಿ: ಡೇವಿಸ್ ಕಪ್: ಪಾಕ್ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ.
undefined
ವಿಪರೀತ ಚಳಿ ಇರುವ ಕಾರಣ, ಪಂದ್ಯವನ್ನು ಒಳಾಂಗಣ ಕೋರ್ಟ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದು ಭಾರತಕ್ಕೆ ನೆರವಾಗವಾಗಲಿದೆ. ‘ಒಳಾಂಗಣದಲ್ಲಿ ಆಡುವ ಟೆನಿಸ್‌ನ ಗುಣಮಟ್ಟಹೆಚ್ಚಿರಲಿದೆ. ಗಾಳಿ, ಬಿಸಿಲಿನ ಸಮಸ್ಯೆ ಇರುವುದಿಲ್ಲ. ನಮ್ಮ ಆಟಗಾರರ ಆಟದ ಶೈಲಿಗೆ ಒಳಾಂಗಣ ಟೆನಿಸ್ ಸೂಕ್ತ.
ಇದನ್ನೂ ಓದಿ: ಡೇವಿಸ್ ಕಪ್: ರೋಹಿತ್ ಅಲ್ಲ ಈಗಲೂ ನಾನೇ ನಾಯಕ ಎಂದ ಭೂಪತಿ
ಹೀಗಾಗಿ ನಮಗೆ ಲಾಭವಾಗಲಿದೆ’ ಎಂದು ಭಾರತ ತಂಡದ ಕೋಚ್ ಝೀಶಾನ್ ಅಲಿ ಹೇಳಿದ್ದಾರೆ. ರೋಹನ್ ಬೋಪಣ್ಣ ಭುಜದ ಗಾಯಕ್ಕೆ ತುತ್ತಾಗಿದ್ದು, ಪಂದ್ಯದಿಂದ ಹೊರಬಿದ್ದಿದ್ದಾರೆ. ಆದರೆ ಭಾರತ ತಂಡದಲ್ಲಿ ಡಬಲ್ಸ್‌ನಲ್ಲಿ ಅನುಭವಿ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ಜೀವನ್ ಮುನ್ನಡೆಸಲಿದ್ದಾರೆ.