
ನವದೆಹಲಿ[ಅ.09]: ಅ.15ರಿಂದ 20ರ ವರೆಗೆ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್ ವೀಸಾ ಸಮಸ್ಯೆ ಎದುರಿಸುತ್ತಿದ್ದು ಕೇಂದ್ರ ಗೃಹ ಸಚಿವಾಲಯ ಅಧಿಕಾರಿ ಸಂಜೀವ್ ಗುಪ್ತಾ ಸೋಮವಾರ ತಕ್ಷಣವೇ ನೆರವಾಗಿದ್ದಾರೆ.
T20I ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ಟಾಪ್ 10 ಕ್ರಿಕೆಟಿಗರಿವರು..
ವೀಸಾ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಸಂದರ್ಶನದಲ್ಲಿ ಉಪಸ್ಥಿತರಿರಬೇಕು ಎಂಬ ಡೆನ್ಮಾರ್ಕ್’ನ ಭಾರತ ರಾಯಭಾರ ಕಚೇರಿಯ ಹೊಸ ನಿಯಮ ಸಮಸ್ಯೆಗೆ ಕಾರಣವಾಯಿತು. ‘ಹೈದರಾಬಾದ್ನಲ್ಲಿ ವೀಸಾ ಪ್ರಕ್ರಿಯೆ ಆರಂಭವಾಗಿದೆ. ರಜಾ ದಿನದಲ್ಲೂ ಅಸಾಧ್ಯವಾಗಿದ್ದ ಕೆಲಸ ಸಾಧಿಸಿದ ಸಂಜೀವ್, ಡೆನ್ಮಾರ್ಕ್ನಲ್ಲಿರುವ ಭಾರತ ರಾಯಭಾರ ಕಚೇರಿ ಹಾಗೂ ವಿಎಫ್ಎಸ್ ಗ್ಲೋಬಲ್ಗೆ ಸೈನಾ ಕೃತಜ್ಞತೆ ಹೇಳಿದ್ದಾರೆ. ಶುಕ್ರವಾರ ಪ್ರಯಾಣಕ್ಕೆ ವೀಸಾ ಲಭ್ಯವಾಗುವ ನಿರೀಕ್ಷೆಯಿದೆ’ ಎಂದು ಸೈನಾ ಟ್ವೀಟ್ ಮಾಡಿದರು.
ಸೈನಾ ನೆಹ್ವಾಲ್ ಪ್ರಸ್ತುತ 8ನೇ ಶ್ರೇಯಾಂಕ ಹೊಂದಿದ್ದು, ಕಳೆದ ವರ್ಷ ನಡೆದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಇದೀಗ ಸೈನಾ ಮೊದಲ ಸುತ್ತಿನಲ್ಲಿ ಜಪಾನಿನ ಸಯಾಕಾ ತಕಹಾಸಿ ಅವರನ್ನು ಎದುರಿಸಲಿದ್ದಾರೆ.
ಅಶ್ವಿನ್, ಜಡೇಜಾಗೆ ಮೊದಲ ಆದ್ಯತೆ; ವರಸೆ ಬದಲಿಸಿದ ಕೊಹ್ಲಿ!
ಇನ್ನು ಸೈನಾ ಸಹಪಾಠಿ ಸಿಂಧು ಸಹಾ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಹಾಗೂ ಬಿ. ಸಾಯಿ ಪ್ರಣೀತ್ ಇತ್ತೀಚೆಗಷ್ಟೇ ಮುಕ್ತಾಯವಾದ ಕೊರಿಯಾ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲು ಕಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.