
ನವದೆಹಲಿ[ಅ.09]: ಭಾರತದ ತಾರಾ ಪ್ರೊ ಬಾಕ್ಸರ್ ವಿಜೇಂದರ್ ಸಿಂಗ್, ನ.22ರಂದು ದುಬೈನಲ್ಲಿ ಮುಂದಿನ ಪಂದ್ಯ ಆಡಲಿದ್ದಾರೆ. ಸೋಲಿಲ್ಲದ ಸರದಾರ ವಿಜೇಂದರ್ (11-0, 8 ನಾಕೌಟ್) ಎದುರಾಳಿ ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲ.
ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ಗೆ 11ನೇ ಜಯ
2024ರ ಒಲಿಂಪಿಕ್ಸ್ಗೆ ಕಬಡ್ಡಿ ಸೇರಲಿ: ರಿಜಿಜು
ವಿಜೇಂದರ್ ತಮ್ಮ ಅಜೇಯ ದಾಖಲೆ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಜುಲೈ ತಿಂಗಳಲ್ಲಿ ಅಮೆರಿಕದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವಿಜೇಂದರ್, ಮೈಕ್ ಸ್ನೈಡರ್ ವಿರುದ್ಧ ಟೆಕ್ನಿಕಲ್ ನಾಕೌಟ್‌ನಿಂದ ಗೆಲುವು ಸಾಧಿಸಿದ್ದರು. ಸದ್ಯ ತರಬೇತುದಾರ ಲೀ ಬೇರ್ಡ್ ಜೊತೆ ಮ್ಯಾಂಚೆಸ್ಟರ್ನಲ್ಲಿ ತಯಾರಿ ನಡೆಸುತ್ತಿದ್ದು, ‘ದುಬೈನಲ್ಲಿ ಅಭಿಮಾನಿಗಳು ನನ್ನ ಅತ್ಯುತ್ತಮ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.’ ಎಂದು ವಿಜೇಂದರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಹರ್ಯಾಣ ಮೂಲದ ವಿಜೇಂದರ್ ಸಿಂಗ್ 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್’ನಲ್ಲಿ ಈಕ್ವೇಡರ್’ನ ಕಾರ್ಲೋಸ್ ಗೋಂಗೊರಾ ಮಣಿಸಿ ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ಸ್’ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೊದಲ ಬಾಕ್ಸರ್ ಎನ್ನುವ ಗೌರವಕ್ಕೆ ವಿಜೇಂದರ್ ಭಾಜನರಾಗಿದ್ದರು. ಆ ಬಳಿಕ ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಪ್ರಶಸ್ತಿ ಗೌರವಕ್ಕೂ ವಿಜೇಂದರ್ ಪಾತ್ರರಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.