ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಚಿಂದಿ ಉಡಾಯಿಸಿದ 71 ವರ್ಷದ ಅಜ್ಜಿ : ವಿಡಿಯೋ ವೈರಲ್

By Suvarna NewsFirst Published Aug 9, 2022, 4:57 PM IST
Highlights

ವಯಸ್ಸು ಕೇವಲ ಸಂಖ್ಯೆ ಮಾತ್ರ ಇದನ್ನು ಅನೇಕರು ಹಲವು ಬಾರಿ ನಮ್ಮ ನಡುವೆ ಇರುವವರು ಸಾಬೀತುಪಡಿಸಿದ್ದಾರೆ. ಅದೇ ರೀತಿ ಈಗ 71 ವರ್ಷದ ವೃದ್ಧರೊಬ್ಬರು ಬಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಯುವಕರನ್ನು ಮೀರಿಸುವಂತೆ ಆಡುವ ಮೂಲಕ ತಾನು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಯಸ್ಸು ಕೇವಲ ಸಂಖ್ಯೆ ಮಾತ್ರ ಇದನ್ನು ಅನೇಕರು ಹಲವು ಬಾರಿ ನಮ್ಮ ನಡುವೆ ಇರುವವರು ಸಾಬೀತುಪಡಿಸಿದ್ದಾರೆ. ಅದೇ ರೀತಿ ಈಗ 71 ವರ್ಷದ ವೃದ್ಧರೊಬ್ಬರು ಬಾಸ್ಕೆಟ್‌ಬಾಲ್‌ ಕೋರ್ಟ್‌ನಲ್ಲಿ ಯುವಕರನ್ನು ಮೀರಿಸುವಂತೆ ಆಡುವ ಮೂಲಕ ತಾನು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.ಪ್ರಸ್ತುತ ಗ್ರ್ಯಾನಿ ಜೋರ್ಡನ್ ಎಂದು ಕರೆಯಲ್ಪಡುವ 71 ವರ್ಷದ ಅಂಡ್ರಿಯಾ ಗ್ರೇಸಿಯಾ ಲೊಪೆಜ್‌ ಅವರು ಬಾಸ್ಕೆಟ್‌ ಬಾಲ್ ಆಟದಲ್ಲಿ ಅತ್ಯುನ್ನತ ಪ್ರತಿಭೆಯ ಮೂಲಕ ಮೈದಾನದಲ್ಲಿದ್ದ ಎಲ್ಲರನ್ನು ಬೆರಗುಗೊಳಿಸಿದ್ದಾರೆ.  ಜೋರ್ಡನ್‌ನ ಸಾನ್ ಇಸ್ಟ್‌ಬ್ಯಾನ್‌ ಅಟಟ್ಲಾಹುಕ ಎಂಬ ಪುಟ್ಟ ನಗರದ ಈ ಅಜ್ಜಿ ಈಗ ತಮ್ಮ ಬಾಸ್ಕೆಟ್‌ಬಾಲ್ ಪರಿಣತಿಯಿಂದಲೇ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಅಜ್ಜಿ ಯುವಕರನ್ನು ಮೀರಿಸುವಂತೆ ಆಕ್ರಮಣಕಾರಿಯಾಗಿ ಆಟವಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ಲೋಪೆಜ್ ಅವರು ಬ್ಯಾಸ್ಕೆಟ್‌ನ ಬಳಿ ಎದುರಾಳಿಯತ್ತ ಬಾಲ್ ಎಸೆದಂತೆ ಮಾಡಿ ಅವರ ದಿಕ್ಕು ತಪ್ಪಿಸಿ ಬಾಸ್ಕೆಟ್‌ಗೆ ಬಾಲ್ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಪುಟ್ಟ ಮಕ್ಕಳು ಕೂಡ ಇವರೊಂದಿಗೆ ಆಟವಾಡಲು ಹೆಣಗುತ್ತಿದ್ದಾರೆ. ಅಷ್ಟೊಂದು ಚುರುಕಾಗಿ ನವ ತರುಣಿಯಂತೆ ಅಜ್ಜಿ ಮೈದಾನದಲ್ಲಿ ಓಡಾಡುವ ಮೂಲಕ ನೋಡುಗರನ್ನು ಬೆರಗುಗೊಳಿಸುತ್ತಿದ್ದಾರೆ. ರಾಯಿಟರ್ಸ್‌ ಪ್ರಕಾರ, ಲುಪೇಜ್‌ ಅವರು ಸ್ಥಳೀಯ ಕಲಾವಿದರಾಗಿದ್ದು, ಆಕೆಯ ಮೊಣಕಾಲು ಸ್ವಲ್ಪಮಟ್ಟಿಗೆ ನೋವಿದ್ದರೂ, ಇನ್ನೂ ಹಲವು ವರ್ಷಗಳ ಕಾಲ ಆಟವಾಡಲು ಆಶಿಸುತ್ತೇನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರಂತೆ. 

ಬೆರಣಿ ತಟ್ಟುವ ಮಹಿಳೆಯ ವಿಡಿಯೋ ವೈರಲ್: ಬಾಸ್ಕೆಟ್‌ಬಾಲ್‌ ಟೀಮಲ್ಲಿರಬೇಕಿತ್ತು ಎಂದ ನೆಟ್ಟಿಗರು

ತಮ್ಮ ಆಟದ ವಿಡಿಯೋ ವೈರಲ್ ಆಗುತ್ತಿದ್ದಂತೆ ಲುಪೇಜ್ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು, ಅವರು ಆಟವಾಡುತ್ತಿರುವ ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರ ಮೊಮ್ಮಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ನೆಟಟಿಗರು ಆಕೆಯ ಅದ್ಭುತವಾದ ಕ್ರೀಡಾಸ್ಪೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆಯ ಅದ್ಭುತ ಬ್ಯಾಸ್ಕೆಟ್‌ಬಾಲ್‌ಗೆ ಅಗತ್ಯವಾದ ಪಾಸಿಂಗ್, ಡ್ರಿಬ್ಲಿಂಗ್ ಮತ್ತು ಶೂಟಿಂಗ್‌ನ್ನು ಜನ ಶ್ಲಾಘಿಸಿದ್ದಾರೆ. 

ಕಳೆದ ಜೂನ್‌ನಲ್ಲಿ ಕೇರಳದ 64 ವರ್ಷದ ವೃದ್ಧರೊಬ್ಬರು ಫುಟ್‌ಬಾಲ್‌ನೊಂದಿಗೆ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಯಾವುದೇ ಯುವಕರಿಗೆ ಕಡಿಮೆ ಇಲ್ಲದಂತೆ ಫುಟ್‌ಬಾಲ್ ಎಲ್ಲೂ ನೆಲಕ್ಕೆ ಬೀಳದಂತೆ ತಮ್ಮ ಕಾಲು ತಲೆ ಹೆಗಲು ಹಾಗೂ ಇಡಿಯ ದೇಹವನ್ನು ಬಳಸಿ ಅವರು ಫುಟ್ಬಾಲ್‌ ಆಟವಾಡುತ್ತಿದ್ದರು. ಜೇಮ್ಸ್ ಎಂಬ ಹೆಸರಿನ ವ್ಯಕ್ತಿಯ ಈ ಚಾಣಾಕ್ಷ ಆಟವನ್ನು ಪ್ರದೀಪ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತು.

 

Indian National Basketball League: ಬಾಸ್ಕೆಟ್‌ಬಾಲ್ ಹಬ್ ಆಗಲಿದೆ ಕರ್ನಾಟಕ..!

ಈಗಲೂ ಫುಟ್‌ಬಾಲ್ ಆಡುವ ಈ 64 ವರ್ಷದ ವ್ಯಕ್ತಿಯನ್ನು ಭೇಟಿಯಾಗಿದ್ದು ನನ್ನ ಭಾಗ್ಯ. ಜೀವನೋಪಾಯಕ್ಕಾಗಿ ಟ್ರಕ್ ಓಡಿಸುವ ಇವರು ತಾವು ಹೋಗುವಲ್ಲೆಲ್ಲಾ ತಮ್ಮ ಫುಟ್‌ಬಾಲ್ ಕಿಟ್ ಅನ್ನು ತನ್ನೊಂದಿಗೆ ಒಯ್ಯುತ್ತಾರೆ. ಅವರು ವಯನಾಡ್ ಫುಟ್‌ಬಾಲ್ ತಂಡದ ಭಾಗವಾಗಿದ್ದರು ಮತ್ತು ಇನ್ನೂ ಆಡುವ ಏಕೈಕ ವ್ಯಕ್ತಿ. ಅವರಿಂದ ನಾನು ಕಲಿತ ಏಕೈಕ ವಿಷಯವೆಂದರೆ ನೀವು ಏನನ್ನಾದರೂ ಮಾಡಲು ಇಷ್ಟಪಡುತ್ತೀರಾ? ಅದನ್ನು ಮಾಡಿ  ಎಂಬುದು ಎಂದು ಈ ವಿಡಯೋವನ್ನು ಪೋಸ್ಟ್‌ ಮಾಡುವಾಗ ಪ್ರದೀಪ್ ಹೇಳಿಕೊಂಡಿದ್ದಾರೆ. 


 

click me!