ಅಮೆರಿಕದ IA ಅಧ್ಯಕ್ಷರಾಗಿ ಸತೀಶ್: ಕರುನಾಡಿಗರಿಂದ ಗುಡ್ ವಿಶ್!

Suvarna News   | Asianet News
Published : Feb 05, 2020, 12:37 PM IST
ಅಮೆರಿಕದ IA ಅಧ್ಯಕ್ಷರಾಗಿ ಸತೀಶ್: ಕರುನಾಡಿಗರಿಂದ ಗುಡ್ ವಿಶ್!

ಸಾರಾಂಶ

ವಿದ್ವತ್ತಿನಿಂದಲೇ ಜಗತ್ತು ಗೆದ್ದ ಕನ್ನಡಿಗರು| ಗತ್ತಿನ ಮೂಲೆ ಮೂಲೆಯಲ್ಲೂ ರಾರಾಜಿಸುತ್ತಿರುವ ಕನ್ನಡ ಧ್ವಜ| ಸಪ್ತಸಾಗರದಾಚೆ ಕನ್ನಡದ ಕಂಪು ಪಸರಿಸಿದ ಕನ್ನಡಾಂಬೆಯ ಹೆಮ್ಮೆಯ ಪುತ್ರರು| ಭಾರತೀಯ ಅಸೋಸಿಯೇಷನ್ ಸಂಘಟನೆಯ ಚುಕ್ಕಾಣಿ ಕನ್ನಡಿಗನ ಹೆಗಲಿಗೆ| ಭಾರತೀಯ ಅಸೋಸಿಯೇಷನ್ ಸಂಘಟನೆಯ ಮುಖ್ಯಸ್ಥರಾಗಿ ಸತೀಶ್ ನಂಜಪ್ಪ ಆಯ್ಕೆ| ಭಾರತೀಯರ ಒಗ್ಗೂಡುವಿಕೆಗೆ ಸಾಕ್ಷಿಗಿರುವ ಭಾರತೀಯ ಅಸೋಸಿಯೇಷನ್ ಸಂಘಟನೆ| 1965 ರಲ್ಲಿ‌ಸ್ಥಾಪನೆಗೊಂಡ ಭಾರತೀಯ ಅಸೋಸಿಯೇಷನ್ ಸಂಘಟನೆ| ಸಮಸ್ತ ಕನ್ನಡಿಗರ ಪರವಾಗಿ ಸತೀಶ್ ನಂಜಪ್ಪ ಅವರಿಗೆ ಅಭಿನಂದನೆಗಳು| 

ಸೇಂಟ್ ಲೂಯಿಸ್(ಫೆ.05): ‘ಓ ನನ್ನ ಚೇತನ, ಆಗು ನೀ ಅನಿಕೇತನ..’ ಎಂಬ ವಿಶ್ವ ಕವಿ ಕುವೆಂಪು ಅವರ ಆಶಯದಂತೆ ಕನ್ನಡಿಗ ಇಂದು ಜಗತ್ತು ಗೆದ್ದಾಗಿದೆ. ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲೂ ಕನ್ನಡದ ಕಂಪು ಹರಡುವಲ್ಲಿ ಕನ್ನಡಿಗ ನಿರತನಾಗಿದ್ದಾನೆ.

ತನ್ನ ವಿದ್ವತ್ತು, ಗಾಢ ಸಂಸ್ಕೃತಿಯನ್ನು ಬೆನ್ನಿಗೆ ಹಾಕಿಕೊಂಡೇ ವಿಶ್ವ ಪರ್ಯಟನೆಗೆ ಹೊರಟ ಕನ್ನಡಿಗ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಕನ್ನಡದ ಧ್ವಜ ರಾರಾಜಿಸುವಂತೆ ಮಾಡಿದ್ದಾನೆ.

ಸಪ್ತಸಾಗರಗಳನ್ನು ಜಯಿಸಿ ಬೇರೊಂದು ನೆಲಕ್ಕೆ ಕಾಲಿಟ್ಟಿರುವ ಕನ್ನಡಿಗರು, ಅಲ್ಲಿಯೂ ತಮ್ಮ ಮಣ್ಣಿನ ಗುಣವನ್ನು ಹೆಮ್ಮೆಯಿಂದ ಪಸರಿಸುತ್ತಿದ್ದಾರೆ. ಇದಕ್ಕೆ ಜ್ವಲಂತ ಉದಾಹರಣೆ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿರುವ ಕನ್ನಡಿಗರು. 

ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು

ಹೌದು, ಅಮೆರಿಕದಲ್ಲಿರುವ  ಕನ್ನಡಿಗರು ಸಾಮಾಜಿಕವಾಗಿ ಸಂಘಟಿತ ಸಮುದಾಯವಾಗಿ ಗಾಢವಾಗಿ ನೆಲೆಯೂರಿ ದಶಕಗಳೇ ಕಳೆದಿವೆ. ಸ್ವತಃ ಅಮೆರಿಕನ್ನರೂ ಗುರುತಿಸುವಂತ ಪ್ರಬಲ ಸಮುದಾಯವಾಗಿ ಕನ್ನಡಿಗರು ಹೊರಹೊಮ್ಮಿದ್ದಾರೆ. 

ಅದರಂತೆ ಇತ್ತೀಚೆಗೆ ನಡೆದ ಭಾರತೀಯ ಅಸೋಸಿಯೇಷನ್ ಚುನಾವಣೆಯಲ್ಲಿ ಕನ್ನಡಿಗರೇ ಆದ ಸತೀಶ್ ನಂಜಪ್ಪ ಆಯ್ಕೆಯಾಗಿದ್ದು, ಕನ್ನಡಿಗನ ಹೆಗಲಿಗೆ ಸಂಘಟನೆಯ ಜವಾಬ್ದಾರಿ ಲಭಿಸಿದೆ. 

ಅಮೆರಿಕದ ಸೇಂಟ್ ಲೂಯಿಸ್’ನಲ್ಲಿರುವ ಭಾರತೀಯ ಅಸೋಸಿಯೇಷನ್ ಭಾರತೀಯರ ಒಗ್ಗೂಡುವಿಕೆಗೆ ಸಾಕ್ಷಿಗಿರುವ ಸಂಘಟನೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಬೇಕಾದ ಸಕಲ ನೆರವನ್ನು ಒದಗಿಸುವ ಈ ಸಂಘಟನೆಯನ್ನು ಇದೀಗ ಕನ್ನಡಿಗ ಮುನ್ನಡೆಸಲಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ.

ಅಮೆರಿಕಾದ ಆಲ್ಬನಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ಭಾರತೀಯ ಅಸೋಸಿಯೇಷನ್:

1965 ರಲ್ಲಿ‌ಸ್ಥಾಪನೆಗೊಂಡ ಭಾರತೀಯ ಅಸೋಸಿಯೇಷನ್ ಸಂಘಟನೆ, ಅಮೆರಿಕ ದೇಶದಲ್ಲಿ ನೆಲೆಸಿರುವ ಭಾರತೀಯರ ಒಗ್ಗೂಡುವಿಕೆಗೆ ಸಾಕ್ಷಿಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಬೇಕಾದ ಸಕಲ ನೆರವುಗಳು ಹಾಗೂ ಎರಡೂ ದೇಶಗಳ ರಾಜತಾಂತ್ರಿಕ ಕಾರ್ಯಗಳಿಗೆ ಕೊಂಡಿಯಾಗಿ ಈ ಸಂಘಟನೆ ಕೆಲಸ ಮಾಡಿಕೊಂಡು ಬಂದಿದೆ.

ಇದೀಗ ಅಮೆರಿಕದಲ್ಲಿರುವ ಭಾರತೀಯ ಅಸೋಸಿಯೇಷನ್’ಗೆ ಅಧ್ಯಕ್ಷರಾಗಿ‌ ಕನ್ನಡಿಗರೇ ಆಯ್ಕೆ ಆಗಿರುವುದು ಇಡೀ ರಾಜ್ಯವೇ ಹೆಮ್ಮೆಪಡುವಂತಾಗಿದೆ. ಭಾರತೀಯ ಅಸೋಸಿಯೇಷನ್’ಗೆ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ನಂಜಪ್ಪ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದೆಗಳು...

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ