ಯಶ್ ಮನಗೆ ಹೊಸ ಅತಿಥಿ; ಹಳೇ ಪೈಂಟಿಂಗ್‌ಗೆ ಕೋಟಿ ಕೋಟಿ; ಅ.30ರ ಟಾಪ್ 10 ಸುದ್ದಿ!

By Web DeskFirst Published Oct 30, 2019, 5:00 PM IST
Highlights

ರಾಜಕೀಯದಲ್ಲೀಗ ಸಾಮೂಹಿಕ ರಾಜೀನಾಮೆ ಪರ್ವ. ಬಿಜೆಪಿ ಬೆನ್ನಲ್ಲೇ ಬೆಳಗಾವಿ ಕಾಂಗ್ರೆಸ್‌ನ 23 ನಾಯಕರ ಸಾಮೂಹಿಕ  ರಾಜೀನಾಮೆ ನೀಡಿದ್ದಾರೆ. ಅಡುಗೆ ಮನೆಯಲ್ಲಿ ನೇತುಹಾಕಿದ್ದ ಹಳೇ ಪೈಂಟಿಂಗ್‌ ಕೋಟಿ ಕೋಟಿ ರೂಪಾಯಿಗೆ ಬಿಕರಿಯಾಗೋ ಮೂಲಕ ಹೊಸ ದಾಖಲೆ ಬರೆದಿದೆ. ಸ್ಯಾಂಡಲ್‍‌ವುಡ್ ಸ್ಟಾರ್ ದಂಪತಿ ಯಶ್ ಹಾಗೂ ರಾಧಿಕ 2ನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಬಾಂಗ್ಲಾದೇಶ ಕ್ರಿಕಿಟಗ ಶಕೀಬ್ ಅಲ್ ಹಸನ್ ನಿಷೇಧಕ್ಕೆ ಕ್ರಿಕೆಟಿಗರ ಪ್ರತಿಕ್ರಿಯೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕ್ಲೋರಿನ್ ಸೋರಿಕೆ ಸೇರಿದಂತೆ ಅ.30ರ ಟಾಪ್ 10 ಸುದ್ದಿ ಇಲ್ಲಿವೆ.

1) ಬಿಜೆಪಿ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ಗೂ ತಟ್ಟಿದ ಸಾಮೂಹಿಕ ರಾಜೀನಾಮೆ!

ಮತ್ತೆ ಬೆಳಗಾವಿ ರಾಜಕೀಯ ಸ್ಫೋಟಗೊಂಡಿದ್ದು, ಕಾಂಗ್ರೆಸ್ ನ 23 ಮುಖಂಡರುಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಇದ್ರಿಂದ ಉಪಚುನಾವಣೆಯ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಆರಂಭಿಕ ಆಘಾತವನ್ನುಂಟುಮಾಡಿದೆ.


2) ಅಡುಗೆ ಮನೆಯಲ್ಲಿ ಬಿದ್ದಿದ್ದ ಪೇಂಟಿಂಗ್'ಗೆ ಸಿಕ್ತು ಕೋಟಿ ಕೋಟಿ ದುಡ್ಡು!

ಉತ್ತರ ಫ್ರಾನ್ಸ್ ಮನೆಯೊಂದರ ಅಡುಗೆ ಮನೆಯಲ್ಲಿ ನೇತು ಹಾಕಿದ್ದ ಸಣ್ಣ ಪೇಂಟಿಂಗ್'ವೊಂದು ಇದೀಗ ಮನೆಯೊಡತಿಯ ಭಾಗ್ಯದ ಬಾಗಿಲು ತೆರೆಯವಂತೆ ಮಾಡಿದೆ. ಆ ಒಂದು ಸಣ್ಣ ಪೇಂಟಿಂಗ್ ಈಗ ಮನೆಯೊಡತಿಯನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ.

3) ಕುಕ್ಕೆ ಸುಬ್ರ​ಹ್ಮ​ಣ್ಯ​ದಲ್ಲಿ ಕ್ಲೋರಿನ್‌ ಸೋರಿ​ಕೆ, ಉಸಿರಾಡಲು ಪರದಾಡಿದ ಜನ

ಕುಕ್ಕೆ ಸುಬ್ರಹ್ಮಣ್ಯದ ಕಲ್ಲಪಣೆಯಲ್ಲಿರುವ ಕುಡಿಯುವ ನೀರಿನ ಘಟಕದಲ್ಲಿ ಕ್ಲೋರಿನ್‌ ಸೋರಿಕೆಯಾಗಿ ಸೋಮವಾರ ತಡರಾತ್ರಿ ಈ ಪರಿಸರದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು. ಕ್ಲೋರಿನ್‌ ಸೋರಿಕೆಯಿಂದ ವಾತಾವರಣದಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಕೆಲವು ಸಮಯ ಇಲ್ಲಿನ ಜನರು ಉಸಿರಾಡಲು ತೊಂದರೆ ಪಡುವ ಸ್ಥಿತಿ ನಿರ್ಮಾಣಗೊಂಡಿತು.

4) ಭಾರತ ಬೆಂಬಲಿಸುವ ದೇಶದ ಮೇಲೆ ಮಿಸೈಲ್ ದಾಳಿ: ಪಾಕ್ ಮಿನಿಸ್ಟರ್ ಜೋಕ್ ಆಫ್ ದಿ ಡೇ ಕೇಳಿ!

ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಮಿಸೈಲ್ ದಾಳಿ ಮಾಡುವುದಾಗಿ ಪಾಕಿಸ್ತಾನದ ಕಾಶ್ಮೀರ ವ್ಯವಹಾರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಉಸ್ತುವಾರಿ ಸಚಿವ ಅಮಿನ್ ಗಂಡಾಪುರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

5) ಶಕೀಬ್‌ಗೆ 2 ವರ್ಷ ನಿಷೇಧದ ಶಿಕ್ಷೆ; ಗಳ ಗಳನೆ ಅತ್ತ ಮುಷ್ಫಿಕರ್ ರಹೀಮ್!

ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ಗೆ 2 ವರ್ಷ ನಿಷೇಧದ ಶಿಕ್ಷೆಗೆ ಸಹ ಕ್ರಿಕಟಿಗರು, ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಶಕೀಬ್‌ಗೆ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಬಾಂಗ್ಲಾ ಕ್ರಿಕೆಟಿಗ ಮುಷ್ಫಿಕರ್ ರಹೀಮ್ ನೋವು ಹಂಚಿಕೊಂಡಿದ್ದಾರೆ.

6) ಯಶ್-ರಾಧಿಕಾ ನಂದಗೋಕುಲಕ್ಕೆ ಬಂದಾಯ್ತು ಹೊಸ ಅತಿಥಿ; ಅಕ್ಕ ಆಗಿದ್ದಾಳೆ 'ಐರಾ'!

ರಾಧಿಕಾ ಯಶ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಪುಟಾಣಿ ಐರಾ ಅಕ್ಕ ಆಗಿದ್ದಾಳೆ. ಯಶ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮ - ಮಗ ಆರೋಗ್ಯವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. 

7) ಕ್ರೇಜಿಸ್ಟಾರ್, ಕನಸುಗಾರ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್

ಕನ್ನಡ ಚಿತ್ರರಂಗದ ಕಸುಗಾರ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಹಾಗಾಗಿ ಇನ್ನು ಮುಂದೆ ರವಿಚಂದ್ರನ್ ಡಾ. ರವಿಚಂದ್ರನ್. ರವಿಚಂದ್ರನ್ ಕೇವಲ ಒಬ್ಬ ನಟ ಮಾತ್ರವಲ್ಲ. ಅನೇಕ ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿಯೂ ಸೈ ಎನಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಮೆಚ್ಚುಗೆ ಗಳಿಸಿಕೊಂಡವರು.

8) ವಿಷಯ ವಿದ್ವತ್ತಿನದ್ದು: ವಿಶ್ವದಲ್ಲೇ ಅತ್ಯಂತ ಚಿಕ್ಕ ಮೆದುಳು ಭಾರತೀಯರದ್ದು!

ಇದೇ ಮೊದಲ ಬಾರಿಗೆ ಭಾರತೀಯರ ಮೆದುಳಿನ ಅಟ್ಲಾಸ್ ರಚಿಸಿರುವ ಹೈದರಾಬಾದ್ ಐಐಟಿ ಸಂಶೋಧಕರು, ಭಾರತೀಯರ ಮೆದುಳು ಗಾತ್ರ ಹಾಗೂ ತೂಕದಲ್ಲಿ ಇಡೀ ವಿಶ್ವದಲ್ಲೇ ಅತ್ಯಂತ ಚಿಕ್ಕದು ಎಂದು ತಿಳಿಸಿದ್ದಾರೆ. ತಮ್ಮ ವಿದ್ವತ್ತಿನಿಂದಲೇ ಇಡೀ ವಿಶ್ವದ ಗಮನ ಸೆಳೆದಿರುವ ಭಾರತೀಯರ ಮೆದುಳು ವಿಶ್ವದಲ್ಲೇ ಅತ್ಯಂತ ಚಿಕ್ಕದು.

9) ಆತ್ಮಹತ್ಯೆ ಪ್ರಕರಣ: ಐಟಿ ಕಿರುಕುಳ ಕುರಿತ ಸಿದ್ಧಾರ್ಥ ಪತ್ರ ಅಸಲಿ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ, ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಸಾವಿನ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಪತ್ರವನ್ನು ಸಿದ್ಧಾರ್ಥ ಅವರೇ ಬರೆದಿದ್ದು, ಅದರಲ್ಲಿದ್ದ ಸಹಿ ಕೂಡ ಅವರದ್ದೇ ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. 


10) #FactCheck ದೀಪಾವಳಿ ಪ್ರಯುಕ್ತ ಹೋಂಡಾದಿಂದ ಸ್ಕೂಟರ್‌ ಫ್ರೀ!

ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಹೋಂಡಾ ದ್ವಿಚಕ್ರ ವಾಹನ ಕಂಪನಿಯು ತನ್ನ ಗ್ರಾಹಕರಿಗೆ ಉಚಿತವಾಗಿ ಸ್ಕೂಟರ್‌ ನೀಡುತ್ತಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗುತ್ತಿದೆ. ಹೀಗೆ ಹರಿದಾಡುತ್ತಿರುವ ಆಫರ್ ಕುರಿತ ಸತ್ಯಾಸತ್ಯತೆ ಈ ಸ್ಟೋರಿಯಲ್ಲಿ ವಿವರಿಸಲಾಗಿದೆ.

click me!