ಬಿಜೆಪಿ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ಗೂ ತಟ್ಟಿದ ಸಾಮೂಹಿಕ ರಾಜೀನಾಮೆ

By Web DeskFirst Published Oct 30, 2019, 4:31 PM IST
Highlights

ಮತ್ತೆ ಬೆಳಗಾವಿ ರಾಜಕೀಯ ಸ್ಫೋಟಗೊಂಡಿದ್ದು, ಕಾಂಗ್ರೆಸ್ ನ 23 ಮುಖಂಡರುಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಇದ್ರಿಂದ ಉಪಚುನಾವಣೆಯ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಆರಂಭಿಕ ಆಘಾತವನ್ನುಂಟುಮಾಡಿದೆ.

ಬೆಳಗಾವಿ, [ಅ.30]: ನಿನ್ನೆ ಅಷ್ಟೇ [ಮಂಗಳವಾರ] ಬಳ್ಳಾರಿ ನಗರಾಭಿವೃದ್ಧಿ ಅಧ್ಯಕ್ಷರಾನ್ನಾಗಿ ದಮ್ಮೂರ ಶೇಖರ್ ಅವರನ್ನು ನೇಮಕ ಮಾಡಿರುವುದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಅಷ್ಟೇ ಅಲ್ಲದೇ ಬಳ್ಳಾರಿ ಜಿಲ್ಲಾಧ್ಯಕ್ಷ ಸೇರಿದಂತೆ 40ಕ್ಕೂ ಹೆಚ್ಚು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ ಗೂ ಸಮೂಹಿಕ ರಾಜೀನಾಮೆ ಬಿಸಿ ತಟ್ಟಿದೆ.

ಬಿಜೆಪಿಗೂ ತಟ್ಟಿದ ಸಾಮೂಹಿಕ ರಾಜೀನಾಮೆ ಶಾಕ್; 48 ಮುಖಂಡರು ಗುಡ್‌ಬೈ

ಬೆಳಗಾವಿಯ ಗೋಕಾಕ್ ತಾಲೂಕು ಪಂಚಾಯಿತಿಯ 23 ಸದಸ್ಯರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರು ಎಂದು ತಿಳಿದುಬಂದಿದೆ.

ಉಪಚುನಾವಣೆಯ ಸಂದರ್ಭದಲ್ಲಿಯೇ ಸಾಮೂಜಿಕ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಭಾರೀ ಹೊಡೆತ ಬಿದ್ದಂತಾಗಿದೆ.  ಇದೇ ಡಿಸೆಂಬರ್ 05ಕ್ಕೆ ಮತದಾನ ನಡೆಯಲಿದ್ದು, ಡಿ.09ಕ್ಕೆ ಫಲಿತಾಂಶ ಹೊರಬೀಳಲಿದೆ.

ಇದಕ್ಕಾಗಿ ಕಾಂಗ್ರೆಸ್ ಲಖನ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಆದ್ರೆ, ಅಧಿಕೃತವಾಗಿ ಪ್ರಕಟವಾಗುವುಂದೊಂದೆ ಬಾಕಿ ಇದೆ. ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೆರೆ ಪ್ರವಾಸದ ಜತೆಗೆ ಉಪಚುನಾವಣೆ ಪ್ರಚಾರ ಆರಂಭಿಸಿದ್ದಾರೆ.

ಇದೀಗ ಗೋಕಾಕ್ ತಾಲೂಕು ಪಾಂಚಾಯಿತಿ ಸದಸ್ಯರು ದಿಢೀರ್ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಆರಂಭಿಕ ಆಘಾತವಾಗಿದೆ. ರಾಜೀನಾಮೆ ಬಗ್ಗೆ ಅತ್ತ ಕಾಂಗ್ರೆಸ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅದ್ಯಾವುದು ನನಗೆ ಗೊತ್ತಿಲ್ಲ ಎನ್ನುವ ರೀತಿಯಲ್ಲಿದ್ದಾರೆ.

ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!