ಹೋದಲ್ಲಿ ಬಂದಲ್ಲಿ ಅವಮಾನಕ್ಕೀಡಾಗುವುದೇ ಪಾಕಿಸ್ತಾನದ ಕೆಲಸ| ಜಾಧವ್ ಪ್ರಕರಣದಲ್ಲಿ ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದ ಅಂತಾರಾಷ್ಟ್ರೀಯ ನ್ಯಾಯಾಲಯ| ವಿಶ್ವಸಂಸ್ಥೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ವರದಿ| ವರದಿ ಸಲ್ಲಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ಕಾವಿ ಯೂಸಫ್| ವಿಯೆನ್ನಾ ಒಪ್ಪಂದದ ವಿಧಿ 36ರ ಅಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಯನ್ನು ಮರೆತಿದೆ| ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಲು ಪಾಕಿಸ್ತಾನಕ್ಕೆ ಸೂಚನೆ|
ವಿಶ್ವಸಂಸ್ಥೆ(ಅ.31): ದಿನಬೆಳಗಾದರೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೈಯಿಸಿಕೊಳ್ಳುವುದೇ ಕೆಲಸ. ಹೋದಲ್ಲಿ ಬಂದಲ್ಲಿ ಅವಮಾನಕ್ಕೀಡಾಗುವ ಪಾಕಿಸ್ತಾನಕ್ಕೆ ಮತ್ತೊಂದು ಮರ್ಮಾಘಾತವಾಗಿದೆ.
ಭಾರತಕ್ಕೆ ರಾಜತಾಂತ್ರಿಕ ಗೆಲುವು: ಕುಲಭೂಷಣ್ ಗಲ್ಲುಶಿಕ್ಷೆ ಅಮಾನತು!
ಸುಳ್ಳು ಆರೋಪದಡಿ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ, ವಿಯೆನ್ನಾ ಒಪ್ಪಂದದ ಕಾನೂನನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ಕಾವಿ ಯೂಸುಫ್ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
ಐಸಿಜೆ ತೀರ್ಪು ಐತಿಹಾಸಿಕ: ವಕೀಲ ಹರೀಶ್ ಸಾಳ್ವೆ ಸಂತಸ
ವಿಶ್ವಸಂಸ್ಥೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ವರದಿ ಸಲ್ಲಿಸಿದ ನ್ಯಾಯಾಧೀಶ ಯೂಸಫ್, ವಿಯೆನ್ನಾ ಒಪ್ಪಂದದ ವಿಧಿ 36ರ ಅಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಯನ್ನು ಮರೆತು ಒಪ್ಪಂದ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಕುಲಭೂಷಣ್ ಜಾಧವ್ ಬಿಡುಗಡೆ ಮಾಡಿ: ಜೈಶಂಕರ್ ಗುಡುಗು!
ಜಾಧವ್‌ಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಲು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದ್ದು, ಪಾಖಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಬಂದ್ಹೋಗಿ: ಜಾಧವ್ ರಾಜತಾಂತ್ರಿಕ ಸಂಪರ್ಕಕ್ಕೆ ಪಾಕ್ ಸಮ್ಮತಿ!
ಇನ್ನು ವಿಶ್ವಸಂಸ್ಥೆಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ವರದಿ ಸಲ್ಲಿಕೆಯಾಗುತ್ತಿದ್ದಂತೇ ಕುಲಭೂಷಣ್ ಅವರಿಗೆ ರಾಜತಾಂತ್ರಿಕ ನೆರವು ನೀಡಲು ಪಾಖಿಸ್ತಾನ ಒಪ್ಪಿಗೆ ಸೂಚಿಸಿದೆ.
ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: