
ವಾಷಿಂಗ್ಟನ್(ಅ.31): ಐಸಿಸ್ ಮುಖ್ಯಸ್ಥ ಅಬುಲ್ ಬಕರ್ ಅಲ್ ಬಾಗ್ದಾದಿ ಅಡಗುತಾಣದ ಮೇಲಿನ ದಾಳಿಯ ವಿಡಿಯೋವನ್ನು ಪೆಂಟಗನ್ ಬಿಡುಗಡೆ ಮಾಡಿದೆ.
ಉತ್ತರ ಸಿರಿಯಾದ ಬಾಗ್ದಾದಿ ಅಡಗುತಾಣದ ಮೇಲೆ ಅಮೆರಿಕ-ಖುರ್ದಿಷ್ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್ ಮುಖ್ಯಸ್ಥ ಅಬುಲ್ ಬಕರ್ ಅಲ್ ಬಾಗ್ದಾದಿಯನ್ನು ಕೊನೆಗಾಣಿಸಲಾಗಿತ್ತು.
ಇದೀಗ ಬಾಗ್ದಾದಿ ಹತ್ಯೆಯ ಕೊನೆಯ ಕ್ಷಣದ ವಿಡಿಯೋ ಬಿಡುಗಡೆ ಮಾಡಿರುವ ಪೆಂಟಗನ್, ದಾಳಿಯ ಸಂಪೂರ್ಣ ವಿವರವನ್ನು ಹೊರ ಹಾಕಿದೆ. ಕಪ್ಪು ಬಿಳುಪಿನ ಈ ವಿಡಿಯೋದಲ್ಲಿ ಬಾಗ್ದಾದಿ ಮತ್ತು ಆತನ ಸಹಚರರ ಕೊನೆಯ ಕ್ಷಣದ ಹೋರಾಟದ ದೃಶ್ಯ ಸೆರೆಯಾಗಿದೆ.
ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ
ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!
ಈ ಕುರಿತು ಮಾಹಿತಿ ನೀಡಿರುವ ಯುಎಸ್ ಸೆಂಟ್ರಲ್ ಕಮಾಂಡ್‌ನ ಕಮಾಂಡರ್, ಮರೈನ್ ಕಾರ್ಪ್ಸ್ ಜನರಲ್ ಕೆನೆತ್ ಮೆಕೆಂಜಿ, ಸಾವು ಕಟ್ಟಿಟ್ಟ ಬುತ್ತಿ ಎಂದು ಅರಿತ ಬಾಗ್ದಾದಿ ತನ್ನಿಬ್ಬರು ಮಕ್ಕಳೊಂದಿಗೆ ಸೂಸೈಡ್ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆಗೆ ಶರಣಾದ ಎಂದು ತಿಳಿಸಿದ್ದಾರೆ.
ಬಾಗ್ದಾದಿ ಅವಿತಿದ್ದ ಅಡಗುತಾಣದ ಕಂಪೌಂಡ್ ಒಳಗೆ ಬಾಗ್ದಾದಿ, ಆತನ ಇಬ್ಬರು ಮಕ್ಕಳು, ಓರ್ವ ಮಹಿಳೆ ಹಾಗೂ ಇಬ್ಬರು ಐಸಿಸ್ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದ್ದು, ಕಂಪೌಂಡ್ ಹೊರಗೆ ಬಾಗ್ದಾದಿ ಸಹಾಯಕ್ಕೆ ಧಾವಿಸಿದ್ದ ಉಗ್ರರನ್ನೂ ಹೊಡೆದುರುಳಿಸಲಾಗಿದೆ.
ಬಾಗ್ದಾದಿ ಸಾವು: ಹೇಡಿ, ನಾಯಿ ಸತ್ತ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್
ಐಸಿಸ್ ಡೆಡ್ ಚೀಫ್ ಬಾಗ್ದಾದಿ: ಏಜೆಂಟ್‌ರು ಅಂಡರ್‌ವೇರ್ ಕದ್ದಿದ್ದು ಯಾಕಾಗಿ?
ದಾಳಿಯಾಗುತ್ತಿದ್ದಂತೇ ಮಕ್ಕಳ ಸಮೇತ ಸುರಂಗದೊಳಕ್ಕೆ ಓಡಿದ ಬಾಗ್ದಾದಿ, ಅಲ್ಲಿಂದಲೇ ಅಮೆರಿಕದ ಸೈನಿಕರ ಮೇಲೆ ಗುಂಡು ಹಾರಿಸುತ್ತಿದ್ದ. ಆದರೆ ಸಾವು ಸಮೀಪಿಸಿದಾಗ ಕೂಡಲೇ ಸೂಸೈಡ್ ಬಾಂಬ್ ಸ್ಫೋಟಿಸಿ ಆತ್ಮಹತ್ಯೆಗೆ ಶರಣಾದ ಎಂದು ಕೆನೆತ್ ಮೆಕೆಂಜಿ ತಿಳಿಸಿದ್ದಾರೆ.
ಬಳಿಕ ಬಾಗ್ದಾದಿ ಶವವನ್ನು ಅಂತಾರಾಷ್ಟ್ರೀಯ ಯುದ್ಧ ನೀತಿಗೆ ಅನುಗುಣವಾಗಿ ಸಮುದ್ರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.
ಬಾಗ್ದಾದಿ ಮಾಹಿತಿ ನೀಡಿದಾತನಿಗೆ 175 ಕೋಟಿ ಬಹುಮಾನ
ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.