ಮಂಗನ ಕಾಯಿಲೆಗೆ ಸಾಗರದ ಮತ್ತೊಬ್ಬ ಮಹಿಳೆ ಸಾವು

Published : Mar 04, 2019, 11:18 AM IST
ಮಂಗನ ಕಾಯಿಲೆಗೆ ಸಾಗರದ  ಮತ್ತೊಬ್ಬ ಮಹಿಳೆ ಸಾವು

ಸಾರಾಂಶ

ಮಂಗನ ಕಾಯಿಲೆಗೆ ಸಾಗರದ ಮತ್ತೊಬ್ಬ ಮಹಿಳೆ ಸಾವು | ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 13 ಕ್ಕೇರಿಕೆ | ಮಹಾಮಾರಿಗೆ ಒಂದೇ ಗ್ರಾಮದ 12 ಮಂದಿ ಬಲಿ

ಶಿವಮೊಗ್ಗ (ಮಾ. 04): ಮಂಗನ ಕಾಯಿಲೆಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮತ್ತೊಬ್ಬ ಮಹಿಳೆ  ಸಾವನ್ನಪ್ಪಿದ್ದಾರೆ.

ರಾಮನಗರದಲ್ಲೂ ಈಗ ಮಂಗನಕಾಯಿಲೆ ಭೀತಿ

ಈ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಂದೋಡಿಗ್ರಾಮದ ಸೀತಮ್ಮ ಪೂಜಾರಿ (58) ಮೃತಪಟ್ಟವರು. ಕಳೆದ ಕೆಲ ದಿನಗಳಿಂದ ಜ್ವರ ಪೀಡಿತರಾಗಿದ್ದ ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.

ಮಂಗನ ಕಾಯಿಲೆ: ಮಲೆನಾಡಲ್ಲಿ ಮರಣ ಮೃದಂಗ

ಶುಕ್ರವಾರ, ಶನಿವಾರ ಕೂಡ ಜಿಲ್ಲೆಯಲ್ಲಿ ಇಬ್ಬರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಇತ್ತೀಚೆಗೆ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಂತು ಎಂದು ನೆಮ್ಮದಿಯಲ್ಲಿದ್ದ ಜನರಲ್ಲಿ ಮತ್ತೆ ಆತಂಕ ಹುಟ್ಟಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!