ಹುತಾತ್ಮ ಯೋಧ ಗುರು ಪತ್ನಿಗೆ ಉಚಿತ ಆರೋಗ್ಯ ವಿಮೆ

Published : Mar 04, 2019, 10:58 AM IST
ಹುತಾತ್ಮ ಯೋಧ ಗುರು ಪತ್ನಿಗೆ ಉಚಿತ ಆರೋಗ್ಯ ವಿಮೆ

ಸಾರಾಂಶ

ಹುತಾತ್ಮ ಯೋಧ ಗುರು ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವಿಮಾ ಕಂಪನಿ | ಯೋಧ ಗುರು ಪತ್ನಿಗೆ ಉಚಿತ ಆರೋಗ್ಯ ವಿಮೆ | ದೇಶದಾದ್ಯಂತ ಇರುವ 8400 ಆಸ್ಪತ್ರೆ, ಕರ್ನಾಟಕದಲ್ಲಿರುವ 500 ಆಸ್ಪತ್ರೆಗಳಲ್ಲಿ ಕಲಾವತಿಗೆ ಉಚಿತ ಚಿಕಿತ್ಸೆ

ಮಂಡ್ಯ (ಮಾ. 04): ಪುಲ್ವಾಮಾ ದಾಳಿಯಲ್ಲಿ ಹುತಾತ್ಮನಾದ ಯೋಧ ಗುರು ಕುಟುಂಬದ ಆರೋಗ್ಯದ ಬಗ್ಗೆ ವಿಮಾ ಪ್ರತಿನಿಧಿಗಳು ಕಾಳಜಿ ವಹಿಸಿದ್ದಾರೆ. ಯೋಧ ಗುರು ಪತ್ನಿ ಕಲಾವತಿಯವರಿಗೆ ಉಚಿತ ಆರೋಗ್ಯ ವಿಮೆ ನೀಡಿದ್ದಾರೆ. 

23 ಹುತಾತ್ಮ CRPF ಯೋಧರ ಸಾಲ ಮನ್ನಾ ಮಾಡಿದ SBI: ವಿಮೆಯೂ ಪಾಸ್

ಭಾರತೀಯ ವಿಮಾ ಪಾಲಿಸಿದಾರರ ಕ್ಷೇಮಾಭಿವೃದ್ಧಿ ದತ್ತಿ ಸಂಸ್ಥೆಯಿಂದ ಸಂಸ್ಥೆ ಅಧ್ಯಕ್ಷ ಡಾ. ಡಿ ಸಿ ಶ್ರೀಧರ್ ವಿಮೆ ಕಾರ್ಡ್ ವಿತರಣೆ ಮಾಡಿದ್ದಾರೆ. 

ಕಲಾವತಿಯವರಿಗೆ 5 ಲಕ್ಷವರೆಗಿನ ಆರೋಗ್ಯ ವಿಮೆಯನ್ನು ನೀಡಲಾಗಿದೆ. ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಕಂಪನಿಯ ವ್ಯಾಪ್ತಿಗೆ ಬರುವ ದೇಶದಾದ್ಯಂತ ಇರುವ 8400 ಆಸ್ಪತ್ರೆ, ಕರ್ನಾಟಕದಲ್ಲಿರುವ 500 ಆಸ್ಪತ್ರೆಗಳಲ್ಲಿ ಕಲಾವತಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. 

ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

ಪುಲ್ವಾಮಾ ದಾಳಿಯಲ್ಲಿ ಗುರು ಹುತಾತ್ಮರಾದ ವಿಚಾರ ತಿಳಿಯುತ್ತಿದ್ದಂತೆ ಯಾವುದೇ ದಾಖಲೆ ಕೇಳದೇ ಎಲ್ ಐಸಿ ವಿಮೆ ಮರಣದಾವೆ ಮೊತ್ತ ತಲುಪಿಸಿ ಮಾನವೀಯತೆ ಮೆರೆದಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!