ಚೆನ್ನೈನಲ್ಲಿ ಜಲಕ್ಷಾಮ ಮಿತಿಮೀರಿದ್ದು, ಚೆನ್ನೈನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈಗ ವೈವಿಧ್ಯಮಯ ಪ್ಲೇಟ್‌ಗಳನ್ನು ಬಳಕೆ ಮಾಡುವ ಬದಲು ಬಾಳೆ ಎಲೆಯನ್ನು ಬಳಸಲು ಶುರು ಮಾಡಿವೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಚೆನ್ನೈ(ಜೂ.30): ಜಲಕ್ಷಾಮಕ್ಕೆ ತತ್ತರಿಸಿರುವ ಚೆನ್ನೈನಲ್ಲಿ ಈಗ ಹೋಟೆಲ್ ಉದ್ಯಮಿಗಳು ನೀರು ಉಳಿಸಲು ಬೇರೆ ಬೇರೆ ಮಾರ್ಗೋಪಾಯ ಹುಡುಕಿಕೊಳ್ಳಲು ಆರಂಭಿಸಿದ್ದಾರೆ.
ನೀರಿನ ಕೊರತೆ: ಚೆನ್ನೈಗೆ ಬೇರೆ ಜಿಲ್ಲೆಗಳಿಂದ ರೈಲಿನಲ್ಲಿ ನೀರು
ನೀರು ಬಳಕೆ ಕಡಿಮೆ ಮಾಡುವುದೊಂದೇ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿರುವ ಚೆನ್ನೈನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈಗ ವೈವಿಧ್ಯಮಯ ಪ್ಲೇಟ್‌ಗಳನ್ನು ಬಳಕೆ ಮಾಡುವ ಬದಲು ಬಾಳೆ ಎಲೆಯನ್ನು ಬಳಸಲು ಶುರು ಮಾಡಿವೆ. ದರ್ಶಿನಿಗಳಂಥ ಸಣ್ಣ-ಪುಟ್ಟಹೋಟೆಲ್‌ಗಳಿಂದ ಸ್ಟಾರ್ ಹೋಟೆಲ್‌ಗಳಲ್ಲೂ ಬಾಲೆ ಎಲೆಯನ್ನೇ ಬಳಸುತ್ತಿವೆ. ಗ್ರಾಹಕರ ಮನವೊಲಿಸಲು ಹೋಟೆಲ್ ಮಾಲೀಕರು, ಆಡಳಿತ ಮಂಡಳಿ ‘ನೀರು ಉಳಿತಾಯಕ್ಕಾಗಿ ಬಾಳೆ ಎಲೆ ಬಳಕೆ ಮಾಡಲಾಗುತ್ತಿದೆ, ಗ್ರಾಹಕರು ಸಹಕರಿಸಬೇಕು’ ಎಂದು ಫಲಕಗಳನ್ನು ಹಾಕಿದ್ದಾರೆ.
ನೀರಿನ ಸಮಸ್ಯೆ: Work From Homeಗೆ ಸೂಚಿಸಿದ ಕಂಪನಿಗಳು
ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಬಾಳೆ ಎಲೆ ಊಟ ಸಂಪ್ರದಾಯವಾಗಿದ್ದು, ಅದೇ ಮಾದರಿಯಲ್ಲಿ ಸೇವೆ ಒದಗಿಸಲಾಗುತ್ತಿದೆ ಎಂದು ಹೋಟೆಲ್ ಉದ್ಯಮಿಗಳು ಹೇಳಿಕೊಂಡಿದ್ದಾರೆ.