ಕೇದಾರದಲ್ಲಿನ ಮೋದಿ ಧ್ಯಾನ ಗುಹೆ ಈಗ ಸೂಪರ್‌ಹಿಟ್‌

Published : Jun 30, 2019, 12:01 PM IST
ಕೇದಾರದಲ್ಲಿನ ಮೋದಿ ಧ್ಯಾನ ಗುಹೆ ಈಗ ಸೂಪರ್‌ಹಿಟ್‌

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕೇದಾರನಾಥದಲ್ಲಿರುವ ಧ್ಯಾನ ಗುಹೆಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಆರಂಭವಾಗಿದೆಯಂತೆ. ಮೋದಿ ಬಂದು ಧ್ಯಾನ ಮಾಡಿ ಹೋದ ಬಳಿಕ ಒಂದು ದಿನವೂ ಗುಹೆ ಖಾಲಿ ಉಳಿದಿಲ್ಲ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಡೆಹ್ರಾಡೂನ್‌(ಜೂ.30): ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಪ್ರಸಿದ್ಧ ಯಾತ್ರಾ ಸ್ಥಳ ಕೇದಾರನಾಥದಲ್ಲಿರುವ ಧ್ಯಾನ ಗುಹೆಗೆ ಭಾರಿ ಬೇಡಿಕೆ ಕಂಡುಬಂದಿದೆ. ಮೋದಿ ಅವರು ಇಲ್ಲಿ ಧ್ಯಾನ ಮಾಡಿ ಹೋದ ಬಳಿಕ ಒಂದು ದಿನವೂ ಗುಹೆ ಖಾಲಿ ಉಳಿದಿಲ್ಲ. ಅಲ್ಲದೆ ಜುಲೈನಾದ್ಯಂತ ಜನರು ಈ ಗುಹೆಯನ್ನು ಕಾದಿರಿಸಿದ್ದಾರೆ. ಆಗಸ್ಟ್‌, ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನ ವಿವಿಧ ದಿನಾಂಕಗಳಿಗೂ ಈಗಲೇ ಬುಕಿಂಗ್‌ ಮಾಡಿದ್ದಾರೆ.

ಮೋದಿ ಧ್ಯಾನ ಮಾಡಿದ ಗುಹೆಗೆ ಭಾರೀ ಬೇಡಿಕೆ: ಇನ್ನೂ 4 ಗುಹೆ ನಿರ್ಮಾಣ!

ಗಡವಾಲ್‌ ಮಂಡಲ ವಿಕಾಸ ನಿಗಮದ ವೆಬ್‌ಸೈಟ್‌ಗೆ ವಿವಿಧೆಡೆಯಿಂದ ಎಡತಾಕುತ್ತಿರುವ ಜನರು, ಗುಹೆಯನ್ನು ಬುಕಿಂಗ್‌ ಮಾಡುತ್ತಿದ್ದಾರೆ. ಮೋದಿ ಬಂದು ಹೋದ ಬಳಿಕ ಪ್ರತಿನಿತ್ಯವೂ ಗುಹೆಯಲ್ಲಿ ಜನ ತಂಗಿ ಧ್ಯಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡವಾಲ್‌ ಹಿಮಾಲಯದಲ್ಲಿ ಸಮುದ್ರಮಟ್ಟದಿಂದ 12500 ಅಡಿ ಎತ್ತರದ ಸುಂದರ ಪ್ರದೇಶದಲ್ಲಿ ಈ ಗುಹೆಯನ್ನು ನಿರ್ಮಾಣ ಮಾಡಲಾಗಿದೆ. ನಿರ್ಮಾಣ ಮಾಡಿ ಒಂದು ವರ್ಷವಾಗಿದ್ದರೂ ಜನರು ಭೇಟಿಗೆ ಆಸಕ್ತಿ ತೋರುತ್ತಿರಲಿಲ್ಲ. ಮೋದಿ ಭೇಟಿ ಬಳಿಕ ಏಕಾಏಕಿ ಬೇಡಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಮೂರು ಗುಹೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಒಂದರ ಕಾಮಗಾರಿ ಆರಂಭವಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾದಿಕಾರಿ ಮಂಗೇಶ್‌ ಗಿಲ್ಡಿಯಾಲ್‌ ಅವರು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು