ಕೇಂದ್ರ ಬಜೆಟ್ ಯಾರಿಗೆ ಸಹಕಾರಿ? ಹೊಸ ಚಿತ್ರಕ್ಕೆ ರಾಕಿ ಬಾಯ್ ತಯಾರಿ; ಫೆ.1ರ ಟಾಪ್ 10 ಸುದ್ದಿ!

Suvarna News   | Asianet News
Published : Feb 01, 2020, 05:02 PM ISTUpdated : Feb 01, 2020, 05:06 PM IST
ಕೇಂದ್ರ ಬಜೆಟ್ ಯಾರಿಗೆ ಸಹಕಾರಿ? ಹೊಸ ಚಿತ್ರಕ್ಕೆ ರಾಕಿ ಬಾಯ್ ತಯಾರಿ; ಫೆ.1ರ ಟಾಪ್ 10 ಸುದ್ದಿ!

ಸಾರಾಂಶ

ಮೋದಿ ಸರ್ಕಾರ ಸತತ 2ನೇ ಬಜೆಟ್ ಮಂಡಿಸಿದೆ. ತೆರಿಗೆದಾರರಿಗೆ ವಿನಾಯಿತಿ, ಬ್ಯಾಂಕ್ ಠೇವಣಿ ವಿಮೆ ಹೆಚ್ಚಳ ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ. ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ದಕ್ಕಿದ್ದೇನು? ಜನಸಾಮಾನ್ಯರಿಗೆ ಸಿಕ್ಕಿದ್ದೇನು? ಯಾವುದು ಅಗ್ಗ, ಯಾವುದು ದುಬಾರಿ ಸೇರಿದಂತೆ ಕೇಂದ್ರ ಬಜೆಟ್‌ನ ಸಂಪೂರ್ಣ ವಿವರ ಫೆಬ್ರವರಿ 1ರ ಟಾಪ್ 10 ಸುದ್ದಿಯಲ್ಲಿದೆ.   

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ

ಮೋದಿ ಸರ್ಕಾರದ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಬಜೆಟ್ ಮಂಡಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಿದೆ. ತೆರಿಗೆದಾರರಿಗೂ ಸಿಹಿ ಸುದ್ದಿ ಕೊಟ್ಟಿರುವ ನಿರ್ಮಲಾ ಚಿನ್ನ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಬಿಡಿ ಮುಟ್ಟಿಸಿದ್ದಾರೆ.

ಒಣಗಿದ ನಿರ್ಮಲಾ ಗಂಟಲು: ಮೋದಿ ತಡೆದರು ಬಜೆಟ್ ಪೂರ್ಣ ಭಾಷಣ ಓದಲು!

ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರದಂದು ಕೇಂದ್ರ ಬಜೆಟ್ ಮಮಡಿಸಿದ್ದಾರೆ. ಈ ವೇಳೆ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಕಾಲ ಬಜೆಟ್ ಮಂಡಿಸಿದ್ದರೂ, ಸಂಪೂರ್ಣವಾಗಿ ಓದಿಲ್ಲ. ಬಜೆಟ್ ಮಂಡನೆ ವೇಳೆ ನಿರ್ಮಲಾ ಆರೋಗ್ಯ ಹದಗೆಟ್ಟ ಪರಿಣಾಮ ಬಜೆಟ್ ನ ಕೊನೆಯ ಕೆಲ ಪುಟಗಳನ್ನು ಓದಲು ಆಗಲಿಲ್ಲ. 

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು: ಪ್ರಯಾಣ ಇನ್ನು ಸುಲಭ ಗುರು!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಸಾರಿಗೆ ಕ್ಷೇತ್ರ ಅದರಲ್ಲೂ ರೈಲ್ವೇ ಇಲಾಖೆಯ ಅಭಿವೃದ್ಧಿಗೆ ನಿರ್ಮಲಾ ಭರಪೂರ ಯೋಜನೆಗಳನ್ನು ಘೋಷಿಸಿದ್ದಾರೆ.

ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ದೇಶದ ತೆರಿಗೆದಾರರಿಗೆ ಭಾರೀ ವಿನಾಯ್ತಿ ಘೋಷಿಸಿರುವ ಮೋದಿ ಸರ್ಕಾರ, ಹೊಸ ಟ್ಯಾಕ್ಸ್ ಸ್ಲ್ಯಾಬ್ ಪರಿಚಯಿಸಿದೆ.

ಫಟಾಫಟ್ ಪ್ಯಾನ್ ಮತ್ತು ಆಧಾರ್: ಮೋದಿ ಸರ್ಕಾರದ ಕೊಡುಗೆ ಬಂಪರ್!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಹಲವು ಪ್ರಮುಖ ಅಂಶಗಳಿದ್ದು, ಪ್ರಮುಖವಾಗಿ ತೆರಿಗೆದಾರರಿಗೆ ವಿನಾಯ್ತಿ ಘೋಷಿಸಿರುವುದು ಕೇಂದ್ರ ಬಜೆಟ್‌ನ ಆಕರ್ಷಣೆಯಾಗಿದೆ.

ಕೆಜಿಎಫ್ ನಂತರ ಹೊಸ ಸಿನಿಮಾಗೆ ಸಜ್ಜಾದ್ರು ರಾಕಿ ಬಾಯ್!

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.  ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ರಾಕಿ ಬಾಯ್ ಫೆಬ್ರವರಿ ಒಂದರಿಂದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಈ ಮಧ್ಯೆ ರಾ ಕಿಂಗ್ ನೆಕ್ಸ್ಟ್ ಸಿನಿಮಾ ಯಾವುದು? ಯಾರ ನಿರ್ದೇಶನದಲ್ಲಿ ಯಶ್ ಅಭಿನಯ ಮಾಡ್ತಾರೆ? ಯಾರು ನಿರ್ಮಾಪಕರು ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಸಿಕ್ಕಿದೆ.

ಮೋದಿ ವಿರುದ್ಧ ಅವಹೇಳನಕಾರಿ ನಾಟಕ: ಬೀದರ್‌ಗೆ ಅಸಾದುದ್ದಿನ್ ಓವೈಸಿ ಭೇಟಿ

 ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ನಾಟಕ ಪ್ರದರ್ಶನ ಮಾಡಿದ ನಗರದ ಶಾಹಿನ್ ಶಿಕ್ಷಣ ಸಂಸ್ಥೆ ವಿರುದ್ಧ ದೇಶ ದ್ರೋಹದ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಬೀದರ್ ನಗರಕ್ಕೆ ಇಂದು(ಶನಿವಾರ) ಆಗಮಿಸಿದ್ದರು. 

ಸರಳವಾಗಿ ಮದುವೆಯಾದ ಚೇತನ್, ಹೊಸ ಜೋಡಿಗೆ ಶುಭಾಶಯ

ಅತೀ ಸರಳವಾಗಿ ಆ ದಿನಗಳು ಚೇತನ್ ಮದುವೆಯಾಗಿದ್ದಾರೆ.  ರಿಜಿಸ್ಟರ್ಡ್‌ ಮದುವೆ ಆಗಿ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸಂತೋಷ ಕೂಟ ಆಚರಿಸುವ ಮೂಲಕ ಮಾದರಿ ನಡೆಗೆ ನಾಂದಿ ಹಾಡಿದ್ದಾರೆ.

ನಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದ ಮಾಲೀಕನಿಗೆ ಬಿತ್ತು ದುಬಾರಿ ದಂಡ!

ಈಗಾಗಲೇ ಬೈಕ್ ಹಿಂದೆ ನಾಯಿ ಕೂರಿಸಿಕೊಂಡು ತಿರುಗಾಡಿದ ಹಲವು ವಿಡಿಯೋಗಳು ವೈರಲ್ ಆಗಿದೆ. ನಾಯಿಗೆ ಹೆಲ್ಮೆಟ್ ಹಾಕಿ ಬೈಕ್ ಮೇಲೆ ತಿರುಗಾಡಿಸಿದ ವಿಡಿಯೋ ಕೂಡ ಸಂಚಲನ ಮೂಡಿಸಿತ್ತು. ಸಾರ್ವಜನಿಕ ರಸ್ತೆಯಲ್ಲಿ ನಾಯಿಯನ್ನು ಬೈಕ್ ಅಥವಾ ದ್ವಿಚಕ್ರ ವಾಹನದಲ್ಲಿ ಕೂರಿಸಿ ತಿರುಗಾಡಿಸುವವರಿಗೆ ಬಿಗ್ ಶಾಕ್ ಕಾದಿದೆ.

ನಿಖಿಲ್ ಮದುವೆ ಅವರಿಷ್ಟಪಟ್ಟ ಈ ಜಾಗದಲ್ಲಿ ನಡೆಯುತ್ತಂತೆ!

ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ದೊಡ್ಡ ಗೌಡ್ರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇದೀಗ ನಿಖಿಲ್ ಮದುವೆ ಎಲ್ಲಿ ಅನ್ನೋದು ಫಿಕ್ಸ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು