
ನವದೆಹಲಿ(ಫೆ.01): ಪ್ರೀತಿಗಾಗಿ ಏನೇನೋ ಮಾಡೋರು ಇರ್ತಾರೆ. ಉತ್ತರಾಖಂಡ್‌ನ ವರನೊಬ್ಬ ಮುಖದಲ್ಲಿ ಕಿರುನಗು ತುಂಬಿಕೊಂಡು ತನ್ನ ವಧುವನ್ನು ನೋಡಲು 4 ಕಿಲೋ ಮೀಟರ್ ಹಿಮದಲ್ಲಿ ಬರಗಾಲಲ್ಲಿ ನಡೆದಿದ್ದಾನೆ. ತನ್ನ ನೆಚ್ಚಿನ ವಧುವನ್ನು ವಿವಾಹವಾಗಲು ಹಿಮದ ಕಠಿಣ ರಸ್ತೆಯಲ್ಲೇ ಯುವಕ ನಡೆದಿರುವ ನಡೆದಿರುವ ಘಟನೆ ಚಮೋಲಿಯಲ್ಲಿ ನಡೆದಿದೆ.
ವರ ತನ್ನ ಬಾರತ್‌ನೊಂದಿಗೆ ಹಿಮದಲ್ಲಿಯೇ ನಡೆದು ಹೋಗುತ್ತಿರುವ ಫೋಟೋವನ್ನು ಎಎನ್‌ಐ ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ಮುಖದಲ್ಲಿ ದೊಡ್ಡ ನಗು ತುಂಬಿಕೊಂಡು ಕೊಡೆ ಹಿಡಿದು ವರ ನಡೆಯುತ್ತಿರುವ ಚಿತ್ರ ಸದ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ತನ್ನ ಸ್ನೇಹಿತರೂ, ಸಂಬಂಧಿಕರ ಜೊತೆ 4 ಕಿಮೀ ನಡೆದು ಚಮೋಲಿಯ ಬಿಜ್ರಾದಲ್ಲಿರುವ ವಧುವಿನ ಮನೆಗೆ ತಲುಪಿದ್ದಾನೆ.
ಚೀನಾದಿಂದ ವಾಪಸ್ಸಾದವರಿಗೆ 14 ದಿನ ಆಸ್ಪತ್ರೆ ವಾಸ ಕಡ್ಡಾಯ!
ಈ ಫೋಟೋವನ್ನು ಜನವರಿ 29ರಂದು ಪೋಸ್ಟ್ ಮಾಡಲಾಗಿದ್ದು, 7600ಕ್ಕೂ ಹೆಚ್ಚು ಲೈಕ್ ಮತ್ತು 1000 ಶೇರ್ ಪಡೆದಿದೆ. ಫೋಟೋವನ್ನು ಶೇರ್ ಮಾಡಿರುವ ನೆಟ್ಟಿಗರು ಇಂದಿಗೂ ಪ್ರಣಯ ಜೀವಂತವಾಗಿದೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ