
ನಾಗ್ಪುರ: ಕಾಂಗ್ರೆಸ್‌ನ ವಿರೋಧದ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, 'ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ನಮಿಸಲು ಬಂದಿರುವೆ,' ಎಂದು ಹೇಳಿದ್ದಾರೆ.
ಡಾ.ಕೆ.ಬಿ.ಹೆಡಗೆವಾರ್ ಅವರ ಸ್ಮಾರಕ್ಕೆ ನಮಿಸಿದ ಪ್ರಣಬ್, ವಿಸಿಟರ್ಸ್ ಪುಸ್ತಕದಲ್ಲಿ ಅವರನ್ನು ಸ್ಮರಿಸಿದ್ದು 'ಭಾರತದ ಹೆಮ್ಮೆಯ ಪುತ್ರ' ಎಂದು. ಸಂಘದ ಸ್ವಯಂ ಸೇವಕರು ಪಥ ಸಂಚಲನದ ಮೂಲಕ ಪ್ರಣಬ್‌ಗೆ ಗೌರವ ಸಲ್ಲಿಸಿದರು.
ಈ ಕಾರ್ಯಕ್ರಮಕ್ಕೆ ಸೈದ್ಧಾಂತಿಕವಾಗಿ ವಿಭಿನ್ನವಾಗಿರುವ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದಾಗ ಕಾಂಗ್ರೆಸ್ ಮುಖಂಡರು ಸೇರಿ, ಖುದ್ದು ಪ್ರಣಬ್ ಮಗಳು ಶರ್ಮಿಷ್ಠಾ ಸಹ ವಿರೋಧಿಸಿದ್ದರು. 'ಬಿಜೆಪಿ ಹಾಗೂ ಸಂಘದ ಸುಳ್ಳುಗಳನ್ನು ಸಮರ್ಥಿಸಲು ಪ್ರಣಬ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ,' ಎಂದು ಇವರ ನಡೆಯನ್ನು ವಿರೋಧಿಸಲಾಗಿತ್ತು.
ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸಹ 'ಪ್ರಣಬ್ ಅವರಿಂದ ನಾವು ಇದನ್ನು ನಿರೀಕ್ಷಿಸಿರಲಿಲ್ಲ...'ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.