ರಾಜ್ಯದಲ್ಲಿ ಟಿಪ್ಪು ಸುಲ್ತಾನ ವಿವಾದ ತಾರಕಕ್ಕೇರಿದೆ. ಇದೀಗ ಪಠ್ಯ ಪುಸ್ತಕದಿಂದ ಟಿಪ್ಪು ವಿಷಯ ತೆಗೆದುಹಾಕಲು ಬಿಜೆಪಿ ಸರ್ಕಾರ ಮುಂದಾಗಿದೆ. ಇಂಧನ ಸಚಿವರೊಬ್ಬರು 30 ತಿಂಗಳಲ್ಲಿ 34 ಬಾರಿ ತಮ್ಮ ಕಾರಿನ ಟೈರ್ ಬದಲಾಯಿಸಿದ್ದಾರೆ. ಈ ಮೂಲಕ ಲಕ್ಷ ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಸಾಮೂಹಿಕ ಮದುವೆ, 13,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಖಾಸಗಿ ಕಂಪನಿ ಸೇರಿದಂತೆ ಅ.31ರ ಟಾಪ್ 10 ಸುದ್ದಿ ಇಲ್ಲಿವೆ.
1) ಬಾಗ್ದಾದಿ ಕೊನೆ ಕ್ಷಣಗಳು: ಪೆಂಟಗನ್ ಬಿಡುಗಡೆ ಮಾಡಿದ ವಿಡಿಯೋ ತುಣುಕುಗಳು!
undefined
ಐಸಿಸ್ ಮುಖ್ಯಸ್ಥ ಅಬುಲ್ ಬಕರ್ ಅಲ್ ಬಾಗ್ದಾದಿ ಅಡಗುತಾಣದ ಮೇಲಿನ ದಾಳಿಯ ವಿಡಿಯೋವನ್ನು ಪೆಂಟಗನ್ ಬಿಡುಗಡೆ ಮಾಡಿದೆ. ಬಾಗ್ದಾದಿ ಹತ್ಯೆಯ ಕೊನೆಯ ಕ್ಷಣದ ವಿಡಿಯೋ ಬಿಡುಗಡೆ ಮಾಡಿರುವ ಪೆಂಟಗನ್, ದಾಳಿಯ ಸಂಪೂರ್ಣ ವಿವರವನ್ನು ಹೊರ ಹಾಕಿದೆ.
2) ಹೊಸಕೋಟೆ ಬೈ ಎಲೆಕ್ಷನ್ ಶರತ್ತು : ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ ಶರತ್
ಹೊಸಕೋಟೆ ವಿಧಾನಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಸಂಸದ ಬಚ್ಚೇಗೌಡ ಮಗ ಶರತ್ ಬಚ್ಚೇಗೌಡ ಕಣಕ್ಕಿಳಿಯೋದು ಪಕ್ಕಾ ಆಗಿದೆ.
3) ಮೈಸೂರು ಹುಲಿ ‘ಅಧ್ಯಾಯ’ ಅಂತ್ಯ: ಕಾಂಗ್ರೆಸ್-ಬಿಜೆಪಿ ಮಧ್ಯೆ ಟಿಪ್ಪು ಯುದ್ಧ
ಟಿಪ್ಪು ಜಯಂತಿ ಆಚರಣೆಯನ್ನ ಬ್ಯಾನ್ ಮಾಡಿದ್ದಾಯ್ತು.ಇದೀಗ ಟಿಪ್ಪು ಇತಿಹಾಸವನ್ನ ಹೇಳುವ ಪಠ್ಯವನ್ನೂ ತೆಗೆಯಲು ಸರ್ಕಾರ ಮುಂದಾಗಿದೆ. ಇದ್ರಿಂದ ಮತ್ತೆ ರಾಜ್ಯ ರಾಜಕಾರಣದಲ್ಲಿ ಟಿಪ್ಪು ಯುದ್ಧ ಶುರುವಾಗಿದೆ.
4) ರಾಜ್ಯ ಸರ್ಕಾರದಿಂದಲೇ ಮದುವೆ ಭಾಗ್ಯ: ಇದು ಬಡವರ ಪಾಲಿಗೆ ಸೌಭಾಗ್ಯ
ಈವರೆಗೆ ಸಂಘ-ಸಂಸ್ಥೆಗಳು ಮಾಡುತ್ತಿದ್ದ ಸಾಮೂಹಿಕ ವಿವಾಹವನ್ನು ಇದೀಗ ರಾಜ್ಯ ಸರ್ಕಾರವೇ ಮಾಡಲಿದೆ. ಮುಜರಾಯಿ ಇಲಾಖೆ ನೇತೃತ್ವದಲ್ಲಿ ಪ್ರತಿ ವರ್ಷ 10 ಸಾವಿರ ಉಚಿತ ಸಾಮೂಹಿಕ ಮದುವೆ ಮಾಡಿಸುವ ನೂತನ ಯೋಜನೆ ಇದಾಗಿದ್ದು, ಇದರ ಸಿದ್ಧತೆಯೂ ಆರಂಭವಾಗಿದೆ.
5) ರನೌಟ್ ನಿಯಮ ಗೊತ್ತಿರದ ಲಂಕಾದ ಸಂಡಕನ್ ಎಡವಟ್ಟು!
ಶ್ರೀಲಂಕಾ ಕ್ರಿಕೆಟಿಗ ಲಕ್ಷನ್ ಸಂಡಕನ್ ನಿಯಮ ಸರಿಯಾಗಿ ಅರ್ಥಮಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದಾರೆ. ರನೌಟ್ ನಿಯಮದಲ್ಲಿ ಸಣ್ಣ ತಪ್ಪು ಮಾಡಿದ ಕಾರಣ ಬ್ಯಾಟ್ಸ್‌ಮನ್ ಔಟಾಗದೇ ಉಳಿದುಕೊಂಡರು. ಸಂಡಕನ್ ಮಾಡಿದ ಎಡವಟ್ಟು ಇದೀಗ ಭಾರಿ ವೈರಲ್ ಆಗಿದೆ.
6) ಸನ್ನಿ ಲಿಯೋನ್ ಕಳ್ಳತನ ಮಾಡಿದ್ರಾ? ವಿವಾದದಲ್ಲಿ ಸಿಲುಕಿದ ನಟಿ
ಒಂದು ಕಾಲದ ನೀಲಿ ಚಿತ್ರ ತಾರೆ, ಸದ್ಯದ ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಇದೀಗ ಸನ್ನಿ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಸನ್ನಿಲಿಯೋನ್ ಬಣ್ಣಗಳಿಂದ ತುಂಬಿದ ಕಲಾಕೃತಿಯನ್ನು ಹರಾಜಿಗೆ ಇಟ್ಟಿದ್ದರು ಇದು ವಿವಾದಕ್ಕೆ ಕಾರಣವಾಗಿದೆ.
7) 13 ಸಾವಿರ ನೌಕರರು ನನ್ನವರಲ್ಲ ಎಂದ ಕಾಗ್ನಿಜೆಂಟ್: ಉದ್ಯೋಗ ಕಡಿತದ ಸ್ಟಂಟ್!
ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪನಿ ಏಕಾಏಕಿ ತನ್ನ 13,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ. ವಾರ್ಷಿಕ ಬೆಳವಣಿಗೆಯಲ್ಲಿನ ಕುಸಿತ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಕಳಪೆ ಮುನ್ನೋಟದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಕಾಗ್ನಿಜೆಂಟ್ ಕಂಪನಿ ಮುಂದಾಗಿದೆ.
8) 30 ತಿಂಗಳಲ್ಲಿ ಕಾರಿನ 34 ಟೈರ್ ಬದಲಾಯಿಸಿದ ಸಚಿವ!
ಸಚಿವರ ಖರ್ಚು ವೆಚ್ಚಗಳನ್ನು ಸರಕಾರ ನೋಡಿಕೊಳ್ಳುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು ಸಿಕ್ಕ ಸಿಕ್ಕ ಬಿಲ್ ಕಳುಹಿಸಿ ಹಣ ಮಂಜೂರು ಮಾಡಿಕೊಳ್ಳುತ್ತಾರೆ. ಇದೀಗ ಕಾಗಕ್ಕ ಗುಬ್ಬಕ್ಕನ ಕತೆ ಹೇಳಿ ಸಚಿವರೊಬ್ಬರು 30 ತಿಂಗಳಲ್ಲಿ ತಮ್ಮ ಕಾರಿನ 34 ಟೈರ್ ಬದಲಾಯಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಲಕ್ಷ ಲಕ್ಷ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ.
9) ಮೋದಿ ಕೇಳಿದ್ದು, ದೊರೆ ಕೊಟ್ಟಿದ್ದು: ಸಿಗಲಿದೆಯಾ ನಮಗೆಲ್ಲ ಸಿಗಬೇಕಾದ್ದು?
ಇರಾನ್ ಮೇಲಿನ ಅಮೆರಿಕದ ನಿರ್ಬಂಧದ ಪರಿಣಾಮವಾಗಿ ಭಾರತಕ್ಕೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕೊರತೆಯನ್ನು ನೀಗಿಸಲು ಪ್ರಧಾನಿ ಮೋದಿ ಸೌದಿ ಅರೇಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
10) ಜಾಧವ್ ಪ್ರಕರಣದಲ್ಲಿ ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ: ಅಂತಾರಾಷ್ಟ್ರೀಯ ನ್ಯಾಯಾಲಯ!
ಸುಳ್ಳು ಆರೋಪದಡಿ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ, ವಿಯೆನ್ನಾ ಒಪ್ಪಂದದ ಕಾನೂನನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ಕಾವಿ ಯೂಸುಫ್ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.