ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭಕ್ಕೆ ಸಿಧು!

By Web DeskFirst Published Oct 31, 2019, 4:29 PM IST
Highlights

ನ.09ರಂದು ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭ| ಉದ್ಘಾಟನಾ ಸಮಾರಂಭದ ಆಹ್ವಾನ ಸ್ವೀಕರಿಸಿದ ನವಜೋತ್ ಸಿಧು| ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಇಮ್ರಾನ್ ಖಾನ್ ಆಹ್ವಾನ| ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ ಹೇಳಿದ ಸಿಧು| ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಸಿಧು|

ನವದೆಹಲಿ(ಅ.31): ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಆಹ್ವಾನವನ್ನು ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಸ್ವೀಕರಿಸಿದ್ದಾರೆ. 

ಕರ್ತಾರ್‌ಪುರ ಉದ್ಘಾಟನೆಗೆ ಸಿಂಗ್‌ಗೆ ಇಮ್ರಾನ್‌ ಅಧಿಕೃತ ಆಹ್ವಾನ!

ತಾವು ಇಮ್ರಾನ್ ಆಹ್ವಾನವನ್ನು ಸ್ವೀಕರಿಸಿದ್ದು, ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಸಿಧು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಮಾರಂಭಕ್ಕೆ ಆಹ್ವಾನ ನೀಡಿದ್ದಕ್ಕೆ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕರ್ತಾರ್‌ಪುರಕ್ಕೆ ಬರಲು ಸಿಂಗ್‌ ಒಪ್ಪಿದ್ದಾರೆ: ಪಾಕ್‌

ಇಮ್ರಾನ್ ಖಾನ್ ನಿರ್ದೇಶನದ ಮೇರೆಗೆ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸೆನೆಟರ್ ಫೈಸಲ್ ಜಾವೇದ್,  ಸಿಧು ಅವರನ್ನು ಸಂಪರ್ಕಿಸಿ ಉದ್ಘಾಟನಾ ಸಮಾರಂಭಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಕರ್ತಾರ್‌ಪುರ್: ಗುರು-ಭಕ್ತರನ್ನು ಬೆಸೆಯುವ ಅಪರೂಪದ ಕಾರಿಡಾರ್!

ಕಳೆದ ವರ್ಷ ಆಗಸ್ಟ್‌ನಲ್ಲಿ ಸಿಧು ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವೇಳೆ ಪಾಕ್ ಸೇನಾಧ್ಯಕ್ಷರನ್ನು ಅಪ್ಪಿಕೊಂಡು ಸಿಧು ವಿವಾದ ಸೃಷ್ಟಿಸಿದ್ದರು.

ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಸಹಿ ಹಾಕಿದ ಭಾರತ-ಪಾಕಿಸ್ತಾನ!

ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ದೇಗುಲವಾದ ಗುರುದ್ವಾರ ದರ್ಬಾರ್ ,ಭಾರತೀಯ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಭೇಟಿ ನೀಡುವ ಕರ್ತಾರ್‌ಪುರ ಕಾರಿಡಾರ್‌ ದ್ವಿಪಕ್ಷಿಯ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಕಳೆದ ವಾರವಷ್ಟೇ  ಸಹಿ ಹಾಕಿವೆ. 

ಗುರು-ಭಕ್ತರನ್ನು 70 ವರ್ಷ ದೂರ ಮಾಡಿದ್ದ ಕಾಂಗ್ರೆಸ್: ಮೋದಿ ಆರೋಪ!

ಈ ಒಪ್ಪಂದದಂತೆ ಪ್ರತಿದಿನ 5,000 ಭಾರತೀಯ ಯಾತ್ರಾರ್ಥಿಗಳಿಗೆ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಪಾಕಿಸ್ತಾನ ಅವಕಾಶ ನೀಡಲಿದೆ.

click me!