ಭಾರತದಲ್ಲಿ ಕೊರೋನಾ ವೈರಸ್ ಒಂದು ಹಂತಕ್ಕೆ ಹತೋಟಿಯಲ್ಲಿತ್ತು. ಅಷ್ಟರಲ್ಲಿ ಜನರ ನಿರ್ಲಕ್ಷ್ಯದಿಂದ ಇದೀಗ ಮತ್ತೆ ವೈರಸ್ ಹರಡುವಿಕೆ ವೇಗ ಪಡೆದುಕೊಂಡಿದೆ. ದಿನ ದಿನೇ ಪ್ರಕರಣಳು ಹೆಚ್ಚಾಗುತ್ತಿದೆ. ಇದರ ಜೊತೆಗೆ ಪ್ರಾಣಿಗಳಿಗೂ ಕೊರೋನಾ ವೈರಸ್ ತಗುಲಿದೆ. ಇದು ಆತಂಕ ಹೆಚ್ಚಿಸಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರಿಗೆ ಅಮಿತಾಬ್ ಬಚ್ಚನ್ 1 ತಿಂಗಳ ರೇಶನ್ ನೀಡಿದ್ದಾರೆ. ಲಾಕ್‌ಡೌನ್ ಮುಂದುವರಿಕೆ, ಊಟ ಬಿಡಲು ಬಿಎಸ್ ವೈ ನಿರ್ಧಾರ ಸೇರಿದಂತೆ ಏಪ್ರಿಲ್ 6ರ ಟಾಪ್ 10 ಸುದ್ದಿ ಇಲ್ಲಿವೆ.
ದೇಶದಲ್ಲಿ ಐದು ದಿನಗಳಿಂದ ಹೆಚ್ಚಿದ ಕೊರೋನಾ ಅಟ್ಟಹಾಸ!...
undefined
ದೇಶದಲ್ಲಿ ದಿನೇ ದಿನೇ ಕೊರೋನಾ ಅಟ್ಟಹಾಸ ಮಿತಿ ಮೀರುತ್ತಿದ್ದು, ಸೋಂಕಿತರ ಹಾಗೂ ಮೃತರ ಸಂಖ್ಯೆಯೂ ಹೆಚ್ಚಲಾರಂಭಿಸಿದೆ. ಇನ್ನು ಕಳೆದ ಐದು ದಿನಗಳಿಂದ ಸೋಂಕಿತರ ಹಾಗೂ ಮೃತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರಾಣಿಗಳಿಗೂ ಅಂಟಿದ ಮಹಾಮಾರಿ ಕೊರೋನಾ: ಭಾರತದಲ್ಲಿ ಹೈಅಲರ್ಟ್...
ಈಗಾಗಲೇ ಇಡೀ ವಿಶ್ವವನ್ನೇ ವ್ಯಾಪಿಸಿರುವಂತ ಕೊರೋನಾ ವೈರಸ್ ಸೋಂಕು, ಇದೀಗ ಮನುಷ್ಯರ ನಂತ್ರ, ಪ್ರಾಣಿಗಳಿಗೂ ವ್ಯಾಪಿಸಿದೆ. ಅಮೆರಿಕಾದ ಝೂ ಒಂದರ ಹುಲಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಏಪ್ರಿಲ್ 14 ರ ನಂತರವೂ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ?...
ಭಾರತ ಲಾಕ್‌ಡೌನ್ ಘೋಷಣೆಯಾಗಿ ಇಂದಿಗೆ 13 ದಿನಗಳಾಗಿವೆ. ಏಪ್ರಿಲ್ 14 ರ ನಂತರವೂ ಮುಂದುವರೆಯುತ್ತಾ? ಎಂಬ ಗೊಂದಲ ಶುರುವಾಗಿದೆ. ಪ್ರಧಾನಿ ಮೋದಿ ಅಂದಾಜು ಮಾಡಿದಷ್ಟು ಈ ಲಾಕ್‌ಡೌನ್ ಯಶಸ್ವಿಯಾಗಿಲ್ಲ ಎನ್ನಲಾಗಿದೆ. ಕೊರೋನಾ ವಿರುದ್ಧ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲು ಕೇಂದ್ರ ಪ್ಲಾನ್ ಮಾಡಿದೆ.
RCB ಕಪ್ ಗೆಲ್ಲಲು ಸಾಧ್ಯವಾಗುತ್ತಿಲ್ಲ ಏಕೆ? ಕೊನೆಗೂ 'ಆ ಸೀಕ್ರೇಟ್' ಬಿಚ್ಚಿಟ್ಟ ಕ್ಯಾಪ್ಟನ್ ಕೊಹ್ಲಿ..!...
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ 12 ಆವೃತ್ತಿಯಲ್ಲಿ ಕಣಕ್ಕಿಳಿದಿರುವ ಬೆಂಗಳೂರು ಮೂಲದ ಫ್ರಾಂಚೈಸಿಗೆ ಐಪಿಎಲ್ ಕಪ್ ಎನ್ನುವುದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ. ಕಪ್ ಗೆದ್ದಿಲ್ಲ ಯಾಕೆ ಅನ್ನೋದು ಇದೀಗ ಬಹಿರಂಗವಾಗಿದೆ.
ಲಾಕ್‌ಡೌನ್: 1 ಲಕ್ಷ ದಿನಗೂಲಿ ಕಾರ್ಮಿಕರಿಗೆ 1 ತಿಂಗಳ ರೇಶನ್ ಕೊಡಲಿದ್ದಾರೆ ಬಿಗ್ ಬಿ
ಬಿ ಅಮಿತಾಬಚ್ಚನ್ ನೆರವಿಗೆ ಧಾವಿಸುತ್ತಾರೆ. ಸಂತ್ರಸ್ತರಿಗೆ ಸಹಾಯ ಮಾಡುತ್ತಾರೆ. ಇದೀಗ ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದು ಸಿನಿಮಾ ಕ್ಷೇತ್ರದಲ್ಲಿ ದಿನಗೂಲಿ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ಸುಮಾರು 1 ಲಕ್ಷ ದಿನಗೂಲಿ ಕಾರ್ಮಿಕರ ಕುಟುಂಬಗಳಿಗೆ 1 ತಿಂಗಳ ರೇಷನ್ ಕೊಡಲು ಮುಂದೆ ಬಂದಿದ್ದಾರೆ.
ವಾಹನ ಸಂಚಾರ ವಿರಳ, ಕಡಿಮೆ ಸಿಬ್ಬಂದಿ: ಪೆಟ್ರೋಲ್ ಬಂಕ್ 24 ಗಂಟೆ ಸೇವೆ ಬಂದ್!
ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿರುವುದರಿಂದ ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಬರುವ ಪೆಟ್ರೋಲ… ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದರೂ 24/7 ಕಾರ್ಯ ನಿರ್ವಹಿಸುವ ಬಂಕ್‌ಗಳು ರಾತ್ರಿ 10.30 ಕ್ಕೆ ಸೇವೆ ಸ್ಥಗಿತಗೊಳಿಸುತ್ತಿವೆ.
ಭಾರತದಲ್ಲಿ ಓಟ ನಿಲ್ಲಿಸಿದ ಟೊಯೋಟಾ ಇಟಿಯೋಸ್, 10 ವರ್ಷಗಳ ಪಯಣಕ್ಕೆ ಬಿತ್ತು ಬ್ರೇಕ್!
ಟೊಯೋಟಾ ಕಂಪನಿಯ ಇಟಿಯೋಸ್ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಆರಾಮದಾಯಕ ಪ್ರಯಾಣಕ್ಕೆ ಹೇಳಿಮಾಡಿಸಿದ ಕಾರು. ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಿದರೆ ಇಟಿಯೋಸ್ ಕಾರು ನಿಮ್ಮ ಮುಂದೆ ಬಂದು ನಿಲ್ಲುತ್ತೆ. ಕಮರ್ಷಿಯಲ್ ವಾಹನವಾಗಿಯೂ ಇಟಿಯೋಸ್ ಹೆಚ್ಚು ಜನಪ್ರಿಯ. ಇದೀಗ ಭಾರತದಲ್ಲಿ ಇಟಿಯೋಸ್ ಕಾರು ಸ್ಥಗಿತಗೊಂಡಿದೆ.
ಹೊತ್ತಿನ ಊಟ ಬಿಡಲು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧಾರ
ಬಿಜೆಪಿ 40 ವರ್ಷದ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಜೆಪಿ ಕಾರ್ಯಕರ್ತರಿಗೆ ಕರೆಯೊಂದನ್ನು ನೀಡಿದ್ದಾರೆ. ಒಂದು ಹೊತ್ತಿನ ಊಟ ಬಿಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕೊರೋನಾ ಭೀತಿ: ನಿಖಿಲ್-ರೇವತಿ ಮದ್ವೆ ಪ್ಲಾನ್ ದಿಢೀರ್ ಚೇಂಜ್..!
ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಏಕೈಕ ಪುತ್ರನ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡ್ಬೇಕು ಅನ್ಕೊಂಡಿದ್ರು. ಆದ್ರೆ, ಕೊರೋನಾ ಭೀತಿ ಎದುರಾಗಿರುವುದರಿಂದ ನಿಖಿಲ್-ರೇವತಿ ಮದ್ವೆ ಪ್ಲಾನ್ ಚೇಂಜ್ ಮಾಡಿದ್ದಾರೆ.
ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ: ಮೂವರ ಬಂಧನ.
ಮಾರಕ ಕೊರೋನಾ ಮಧ್ಯೆ ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡಲು ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. ನಗರದ ಉತ್ತರ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಘಟನೆ ಬಳಿಕ ನಗರದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.