ಪ್ರಿನ್ಸ್ ಗುಣಮುಖರಾಗಿದ್ದು ಬೆಂಗಳೂರು ಚಿಕಿತ್ಸೆಯಿಂದಲ್ಲ!

By Suvarna NewsFirst Published Apr 6, 2020, 2:32 PM IST
Highlights

ಆಯುರ್ವೇದದಿಂದ ಪ್ರಿನ್ಸ್‌ ಚಾರ್ಲ್ಸ್ ಗುಣಮುಖ ಸುಳ್ಳು| ಬೆಂಗಳೂರು ಆಸ್ಪತ್ರೆ ಚಿಕಿತ್ಸೆ ನೀಡಿಲ್ಲ: ರಾಜಕುಮಾರ| ಇಲ್ಲೇ ಚಿಕಿತ್ಸೆ ಪಡೆದಿದ್ದಾರೆ ಎಂದಿದ್ದ ಕೇಂದ್ರ ಸಚಿವ

ಲಂಡನ್‌(ಏ.06):  ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ (71) ಅವರಿಗೆ ಬೆಂಗಳೂರಿನ ಸೌಖ್ಯ ಆಯುರ್ವೇದ ರೆಸಾರ್ಟ್‌ನ ಚಿಕಿತ್ಸೆಯಿಂದ ಕೊರೋನಾ ವೈರಸ್‌ ಸೋಂಕು ಗುಣವಾಯಿತು ಎಂಬ ಮಾಹಿತಿ ಸುಳ್ಳು ಎಂದು ಚಾರ್ಲ್ಸ್ ಅವರ ಕಚೇರಿ ತಿಳಿಸಿದೆ.

ಕೇಂದ್ರ ಆಯುಷ್‌ ಖಾತೆ ರಾಜ್ಯ ಸಚಿವ ಶ್ರೀಪಾದ್‌ ನಾಯಕ್‌ ಇತ್ತೀಚೆಗೆ ‘ನನಗೆ ಬೆಂಗಳೂರಿನ ಡಾ.ಐಸಾಕ್‌ ಮಥಾಯ್‌ ಫೋನ್‌ ಮಾಡಿದ್ದರು. ಅವರು ಬ್ರಿಟನ್ನಿನ ಪ್ರಿನ್ಸ್‌ ಚಾರ್ಲ್ಸ್ಗೆ ನೀಡಿದ ಆಯುರ್ವೇದ ಮತ್ತು ಹೋಮಿಯೋಪಥಿ ಚಿಕಿತ್ಸೆಯಿಂದ ಕೊರೋನಾ ಸೋಂಕು ಗುಣವಾಗಿದೆಯಂತೆ. ಮಥಾಯ್‌ ಬಳಸುವ ಔಷಧ ಪರೀಕ್ಷಿಸಲು ಕಾರ್ಯಪಡೆ ರಚಿಸಲಾಗುವುದು’ ಎಂದು ಹೇಳಿದ್ದರು. ಇದು ಸಾಕಷ್ಟುಸುದ್ದಿಯಾಗಿತ್ತು.

ಬಡವನಾದರೇನು, ಸಿರಿವಂತನಾದರೇನು, ಬ್ರಿಟನ್ ರಾಜಕುಮಾರನನ್ನೂ ಬಿಡಲಿಲ್ಲ ಕೊರೋನಾ

ಈ ಕುರಿತು ಸ್ಪಷ್ಟನೆ ನೀಡಿರುವ ಚಾರ್ಲ್ಸ್ ಕಚೇರಿ, ‘ಚಾರ್ಲ್ಸ್ ಅವರು ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಯೋಜನೆಯ ವೈದ್ಯರ ಸಲಹೆಯನ್ನಷ್ಟೇ ಪಾಲಿಸಿದ್ದಾರೆ. ಬೇರೇನೂ ಮಾಡಿಲ್ಲ’ ಎಂದು ಹೇಳಿದೆ. ಪ್ರಿನ್ಸ್‌ ಚಾರ್ಲ್ಸ್ಗೆ ಕಳೆದ ತಿಂಗಳ ಕೊನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದ್ದರಿಂದ ಏಳು ದಿನ ಅವರು ಸ್ಕಾಟ್ಲೆಂಡ್‌ನಲ್ಲಿ ಐಸೋಲೇಷನ್‌ನಲ್ಲಿದ್ದರು.

click me!