ಆರಕ್ಷಕರಿಗೆ ಬೆಂಗಳೂರು ಜನತೆಯ ಸಲಾಂ, ಹೂವಿನ ಸ್ವಾಗತ!

By Suvarna NewsFirst Published Apr 6, 2020, 3:17 PM IST
Highlights

ಹಗಲಿರುಳೆಂಬಂತೆ ಜನರ ರಕ್ಷಣೆ ಮಾಡುತ್ತಿರುವ ಪೊಲೀಸರು| ಕೊರೋನಾ ಸಮರ ಗೆಲ್ಲಲು ಯೋಧರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಆರಕ್ಷಕರು| ರಕ್ಷಣೆಗೆ ನಿಂತ ಆರಕ್ಷಕರಿಗೆ ಹೀಗೊಂದು ಸ್ವಾಗತ

ಬೆಂಗಳೂರು(ಏ.06): ದೇಶದಾದ್ಯಂತ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಕೊರೋನಾ ತಡೆಯುವ ನಿಟ್ಟಿನಲ್ಲಿ ಜನರನ್ನು ಹೊರ ಬಾರದಂತೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಸಿಬ್ಬಂದಿ ಅವಿರತ ಶ್ರಮ ಪ್ರಶಂಸೆಗೆ ಪಾತ್ರವಾದದ್ದು. ಹೀಗಿರುವಾಗ ತಮ್ಮ ಆರಕ್ಷಕರಗೆ ಬೆಂಗಳೂರಿನ ಜನತೆ ಹೂವಿನ ಸುರಿಮಳೆಗೈದು ಧನ್ಯವಾದ ಸಲ್ಲಿಸಿದ್ದಾರೆ. 

ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ

ಹೌದು ಭಾರತವಿಡೀ ಒಂದಾಗಿ ಕೊರೋನಾ ಸಮರವನ್ನು ಎದುರಿಸುತ್ತಿದೆ. ಹೀಗಿರುವಾಗ ಕೊರೋನಾ ವಿರುದ್ಧದ ಈ ಯುದ್ಧದಲ್ಲಿ ಪೊಲೀಸ್ ಸಿಬ್ಬಂದಿ, ವೈದ್ಯರು, ನರ್ಸ್‌ಗಳು ಹಾಗೂ ಇತರ ಅನೇಕರು ಹಗಲಿರುಳೆಂಬಂತೆ ಯೋಧರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಇಂತಹ ಸಂಕಷ್ಟದ ಸಮಯದಲ್ಲೂ ತಮ್ಮ ರಕ್ಷಣೆಗೆ ನಿಂತ ಸಿಬ್ಬಂದಿಗೆ ಜನರು ವಿಭಿನ್ನವಾಗಿ ಧನ್ಯವಾದ ಹೇಳುತ್ತಿದ್ದಾರೆ.

We serve, We protect. And, will continue rising to our call of duty. Always.

Humbled by your kind gesture. Thank you, Namma Bengaluru! pic.twitter.com/aarnk9jkB6

— BengaluruCityPolice (@BlrCityPolice)

ಸದ್ಯ ಬೆಂಗಳೂರು ನಗರ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ವಿಡಿಯೋ ಒಂದನ್ನು ಶೇರ್ ಮಾಡಲಾಗಿದ್ದು, ನಾವು ಸೇವೆ ಸಲ್ಲಿಸುತ್ತೇವೆ, ನಾವು ಭದ್ರತೆ ಒದಗಿಸುತ್ತೇವೆ. ಈ ಮೂಲಕ ನಮ್ಮ ಕರ್ತವ್ಯ ನಿಭಾಯಿಸುತ್ತೇವೆ. ನಿಮ್ಮ ಇಂತಹ ಆದರತೆಗೆ ಧನ್ಯವಾದಗಳು ಎಂದು ಬರೆದಿದ್ದಾರೆ.. ಈ ವಿಡಿಯೋದಲ್ಲಿ ವಂದೇ ಮಾತರಂ ಗೀತೆಯನ್ನೂ ಸೇರಿಸಲಾಗಿದೆ. 

🙏🙏🙏🙏 Maam, we are humbled, give us the strength to serve you like this and earn your respect 🙏🙏🌺

— Bhaskar Rao IPS (@deepolice12)

ಟ್ವಿಟರ್‌ನಲ್ಲಿ ಮತ್ತೊಂದು ವಿಡಿಯೋ ಕೂಡಾ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಇದರಲ್ಲಿ ಮಹಿಳೆಯರಿಬ್ಬರು ಪೊಲೀಸರಿಗೆ ಆರತಿ ಎತ್ತಿ ತಿಲಕವಿಡುವ ದೃಶ್ಯಗಳಿವೆ. ಖಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದಾರೆ.
 

click me!