ವೈದ್ಯೆ ಕೊಂದಂತೆ ಮಗನ ಸುಟ್ಟಾಕಿ; ಪೇಪರ್‌ನಲ್ಲಿ ಮಾನ ಮುಚ್ಚಿದ ನಟಿ; ಡಿ.1ರ ಟಾಪ್ 10 ಸುದ್ದಿ!

By Web DeskFirst Published Dec 1, 2019, 5:02 PM IST
Highlights

ಶಾದ್‌ನಗರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಪಶುವೈದ್ಯೆಯ ನ್ಯಾಯಕ್ಕಾಗಿ ಹೋರಾಟ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಆರೋಪಿಯೊಬ್ಬನ ತಾಯಿ ಮನದಾಳ ಹಂಚಿಕೊಂಡಿದ್ದಾರೆ. ವೈದ್ಯೆಯನ್ನು ಕೊಂದತೆ ನನ್ನ ಮಗನನ್ನೂ ಸುಟ್ಟಾಕಿ ಎಂದು ನೋವಿನಿಂದ ನುಡಿದಿದ್ದಾರೆ. ಬಟ್ಟೆ ಸಿಗದೆ ಪೇಪರ್‌ನಲ್ಲಿ ನಟಿ ಮಾನ ಮುಚ್ಚಿದ್ದಾರೆ. ಡೇವಿಡ್ ವಾರ್ನರ್ ತ್ರಿಶತಕ ಸೀಕ್ರೆಟ್, ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರ ಸೇರಿದಂತೆ ಡಿಸೆಂಬರ್ 1ರ ಟಾಪ್ 10 ಸುದ್ದಿ ಇಲ್ಲಿವೆ.

1) ವೈದ್ಯೆ ಮೇಲೆ ರೇಪ್: ಸಂತ್ರಸ್ತೆ ತಂದೆಯನ್ನು ಠಾಣೆಯಿಂದ ಠಾಣೆಗೆ ಅಲೆಸಿದ್ದ ಪೊಲೀಸರು!

ಶಾದ್‌ನಗರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಪಶುವೈದ್ಯೆಯ ಕುಟುಂಬಸ್ಥರನ್ನು ಪೊಲೀಸರು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.


2) 'ನನ್ನ ಮಗ ಮಾಡಿದ್ದು ಕ್ಷಮಿಸಲಾರದ ತಪ್ಪು: ವೈದ್ಯೆಯನ್ನು ಕೊಂದಂತೆ ಆತನನ್ನೂ ಸುಟ್ಟಾಕಿ'

ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಎಲ್ಲೆಡೆ ಜೋರಾಗಿದೆ. ಹೀಗಿರುವಾಗ ಈ ಹತ್ಯಾಕಾಂಡ ನಡೆಸಿದ ಆರೋಪಿಗಳ ಕುಟುಂಬಸ್ಥರು ನೀಡಿರುವ ಹೇಳಿಕೆ ಭಾರೀ ವೈರಲ್ ಆಗಿದೆ. 'ನಮ್ಮ ಮಕ್ಕಳಿಗೆ ಗಲ್ಲು ಶಿಕ್ಷೆ ನೀಡಿದರೂ ನಾವೂ ಅದನ್ನು ವಿರೋಧಿಸುವುದಿಲ್ಲ' ಎಂದಿದ್ದಾರೆ.

3) ಹೆಬ್ಬಾಳ್ಕರ್ ಎದೆ ಯಾವಾಗ ಝಲ್ ಅನ್ನುತ್ತೋ, ಯಾವಾಗ ಡನ್ ಅನ್ನುತ್ತೋ ನಮಗೇನ್ ಗೊತ್ತು?

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಗಂಡಸ್ಥನ ಮಾತು ಹೇಳುವುದು ಸರಿಯಲ್ಲ, ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಡ್ಯಾಷ್ ಡ್ಯಾಷ್ ಎನ್ನುವುದು ಸರಿಯಲ್ಲ. ಅದು ಏನು ಡ್ಯಾಷ್ ಡ್ಯಾಷ್ ಅನ್ನೋದನ್ನು ಅವರೇ ಹೇಳಬೇಕು. ಅವರು ಮೊದಲು ಬಿಟ್ಟ ಸ್ಥಳ ತುಂಬಲಿ ಆ ಬಳಿಕ ನಾವು ಡ್ಯಾಷ್ ಡ್ಯಾಷ್ ತುಂಬುತ್ತೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. 

4) ‘ಶಿವಸೇನೆಗೆ ಬೆಂಬಲ ಕಾಂಗ್ರೆಸ್‌ ದುರಂತ

ಕಾಂಗ್ರೆಸ್‌ ಪಕ್ಷ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬೆಂಬಲ ನೀಡಿರುವುದು ತನ್ನ ಜಾತ್ಯತೀತ ನಿಲುವಿನ ಬೂಟಾಟಿಕೆಗೆ ಹೊಡೆದ ಕೊನೆಯ ಮಳೆಯಾಗಿದೆ ಎಂದು ಜಾತ್ಯತೀತ ಜನತಾ ದಳದ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಕಾರಿಯ ಜಕೀರ್‌ ಆರೋಪಿಸಿದ್ದಾರೆ.

5) ರಾಘವೇಂದ್ರನ ಬಳಿ ಹಲವು ಶಾಸಕರ ಹನಿಟ್ರ್ಯಾಪ್‌ ವಿಡಿಯೋ, ದೂರು ನೀಡದಿದ್ದರೂ ಸಂಕಷ್ಟ!

ವಿಐಪಿ ಹನಿಟ್ರ್ಯಾಪ್‌’ ಬಲೆಯಲ್ಲಿ ಪಕ್ಷಾತೀತವಾಗಿ ಶಾಸಕರು ಸಿಲುಕಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. 
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಕರ್ನಾಟಕದ ಭಾಗದ ಆಡಳಿತಾರೂಢ ಪಕ್ಷದ ಶಾಸಕರೊಬ್ಬರ ವಿಡಿಯೋ ವೈರಲ್‌ ಆಗಿದೆ. ಆದರೆ ಸಂತ್ರಸ್ತರ ಪಟ್ಟಿಯಲ್ಲಿ ವಿಪಕ್ಷಗಳ ಶಾಸಕರೂ ಸಹ ಇದ್ದು, ಹನಿಟ್ರ್ಯಾಪ್‌ ಪ್ರಕರಣದ ಪ್ರಮುಖ ಆರೋಪಿ ರಾಘವೇಂದ್ರನಿಂದ ಜಪ್ತಿಯಾದ ಪೆನ್‌ಡ್ರೈವ್‌ನಲ್ಲಿ ಪಕ್ಷಾತೀತವಾಗಿ ಶಾಸಕರ ಖಾಸಗಿ ವಿಡಿಯೋಗಳು ಸಿಕ್ಕಿವೆ ಎನ್ನಲಾಗಿದೆ.

6) ಟೆಸ್ಟ್ ತ್ರಿಶತಕಕ್ಕೆ ವಿರೇಂದ್ರ ಸೆಹ್ವಾಗ್ ಕಾರಣ; ವಾರ್ನರ್ ಬಿಚ್ಚಿಟ್ರು ಸೀಕ್ರೆಟ್!

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್, ಪಾಕಿಸ್ತಾನ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ತ್ರಿಬಲ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಸಾಧನೆ ಹಿಂದೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಾರಣ ಅನ್ನೋ ಸೀಕ್ರೆಟನ್ನು ವಾರ್ನರ್ ಬಹಿರಂಗ ಪಡಿಸಿದ್ದಾರೆ.


7) ಅಯ್ಯಯ್ಯೋ... ಬಟ್ಟೆ ಸಿಗದೇ ಪೇಪರ್‌ನಲ್ಲಿ ಮಾನ ಮುಚ್ಚಿಕೊಂಡ ನಟಿ!

ಮಾರುಕಟ್ಟೆಗೆ ದಿನಕ್ಕೊಂದು ಕಾಸ್ಟ್ಯೂಮ್‌ಗಳು, ಹೊಸ ಹೊಸ ಡಿಸೈನ್‌ಗಳು ಬರ್ತಾನೆ ಇರ್ತವೆ. ನಟಿಯೊಬ್ಬರು ಹೊಸ ಕಾಸ್ಟ್ಯೂಮ್‌ವೊಂದನ್ನು ಪರಿಚಯಿಸಿದ್ದಾರೆ. ಹಿಂದೆಂದೂ ಯಾರೂ ಮಾಡಿರದ ಡಿಸೈನ್ ಇದು. 

8) ಏರ್ಟೆಲ್, ವೊಡಾಫೋನ್ ಕರೆ ದರ ಏರಿಕೆ?

ಡಿ.1ರಿಂದ ಅನ್ವಯವಾಗುವಂತೆ ಮೊಬೈಲ್ ಕರೆದರ ಶೇ.30ರಷ್ಟು ಹೆಚ್ಚಿಸುವುದಾಗಿ ಏರ್‌ಟೆಲ್, ವೊಡಾಪೋನ್- ಐಡಿಯಾ ಘೋಷಿಸಿದ್ದು, ಭಾನುವಾರದಿಂದ ದರ ಏರಿಕೆ ಆಗಲಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

9) ಇಂದಿನಿಂದ ನೈಸ್ ರಸ್ತೆ ಟೋಲ್‌ನಲ್ಲೂ ಫಾಸ್ಟ್ಯಾಗ್; ನಗದು ವ್ಯವಹಾರ್ ಬಂದ್!

ಬೆಂಗಳೂರಿನ ನೈಸ್ ರಸ್ತೆಯಲ್ಲೂ ಇದೀಗ ಫಾಸ್ಟ್ಯಾಗ್ ಕಡ್ಡಾಯಮಾಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಇಲಾಖೆ ಕಡ್ಡಾಯ ನಿಯಮ ಡಿಸೆಂಬರ್ 15 ರಿಂದ ಜಾರಿಯಾಗಲಿದೆ. ಆದರೆ ನೈಸ್ ರಸ್ತೆಯಲ್ಲಿ ಇಂದಿನಿಂದ ಫಾಸ್ಟ್ಯಾಗ್ ಟೋಲ್ ಸಂಗ್ರಹ ಆರಂಭವಾಗಿದೆ.

10) ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬೀದರ್, ಬಳ್ಳಾರಿ, ಮೈಸೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೋಲಾರ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 

click me!