ಹೈದರಾಬಾದ್‌[ಡಿ.01]: ಶಾದ್‌ನಗರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಪಶುವೈದ್ಯೆಯ ಕುಟುಂಬಸ್ಥರನ್ನು ಪೊಲೀಸರು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಬಾಗಲಕೋಟೆ ಮಹಿಳೆ ಮೇಲೆ ಉತ್ತರಾಖಂಡದಲ್ಲಿ ಅತ್ಯಾಚಾರ!

ಈ ಬಗ್ಗೆ ಪ್ರತಿಕ್ರಿಯಿಸಿದ ಪಶು ವೈದ್ಯೆಯ ತಂದೆ, ಬುಧವಾರ ರಾತ್ರಿ 9.15ಕ್ಕೆ ಆಕೆ(ಸಂತ್ರಸ್ತೆ) ಸೋದರಿ ಜೊತೆ ಮಾತನಾಡಿದ್ದಳು. ಮತ್ತೆ ರಾತ್ರಿ 11 ಗಂಟೆಗೆ ಕರೆ ಮಾಡಿದಾಗ, ಸಂತ್ರಸ್ತೆಯ ಮೊಬೈಲ್‌ ಸ್ವಿಚ್‌್ಡ ಆಫ್‌ ಆಗಿತ್ತು. ಈ ವೇಳೆ ಚಾಜ್‌ರ್‍ ಇಲ್ಲದ್ದಕ್ಕೆ ಫೋನ್‌ ಬಂದ್‌ ಆಗಿರಬಹುದೆಂದು ಊಹಿಸಿ, ಆಕೆಯನ್ನು ಹುಡುಕಿಕೊಂಡು ಟೋಲ್‌ ಪ್ಲಾಜಾ ಬಳಿ ಹೋದೆವು. ಆ ನಂತರ, ಮಗಳು ಕಾಣೆಯಾದ ಬಗ್ಗೆ ದೂರು ನೀಡಲು ಠಾಣೆಗೆ ಹೋದೆವು. ಆದರೆ, ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ನೆಪ ಹೇಳಿ, ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ತಮ್ಮನ್ನು ಅಲೆದಾಡಿಸಿದರು.

ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ನಿರ್ಧರಿಸುವ ವಿಚಾರದಲ್ಲೇ ಪೊಲೀಸರು ಕಾಲ ಹರಣ ಮಾಡಿದರು ಎಂದು ದುಃಖ ತೋಡಿಕೊಂಡರು. ಕೊನೆಗೆ ಇಬ್ಬರು ಕಾನ್‌ಸ್ಟೇಬಲ್‌ಗಳ ನೆರವು ಕೋರಿದೆ. ಆದರೆ, ಏನೂ ಪ್ರಯೋಜನವಾಗಲಿಲ್ಲ. ಮಗಳನ್ನು ಹುಡುಕಿಕೊಂಡು ಗುರುವಾರ ಬೆಳಗಿನ ಜಾವ 3 ಗಂಟೆಗೆ ನಾನೇ ಹೋದೆ ಎಂದು ಹೇಳಿದ್ದಾರೆ.

ಹೈದರಾಬಾದ್ ವೈದ್ಯೆ ಮೇಲೆ ರೇಪ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಪಶುವೈದ್ಯೆ ಸೋದರಿ, ‘ಬ್ಯಾಟರಿ ಮುಗಿದು ಹೋದ ಕಾರಣಕ್ಕೆ ಮೊಬೈಲ್‌ ಸ್ವಿಚ್‌್ಡ ಆಫ್‌ ಆಗಿರುತ್ತೆ ಎಂದು ಭಾವಿಸಿ, ನಾನು ಗೊಂದಲಕ್ಕೀಡಾಗಲಿಲ್ಲ. ರಾತ್ರಿ 10 ಗಂಟೆ ನಂತರ ಕರೆ ಮಾಡಿದ ನನ್ನ ಅಮ್ಮ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಹೀಗಾಗಿ, ಕಚೇರಿಯಿಂದ ಸಹೋದರಿಯನ್ನು ಹುಡುಕಿಕೊಂಡು ನೇರವಾಗಿ ಟೋಲ್‌ ಪ್ಲಾಜಾಗೆ ಹೋಗಿದ್ದೆ’ ಎಂದು ಹೇಳಿದ್ದಾರೆ.