ಹೈದರಾಬಾದ್[ಡಿ.01]: ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಎಲ್ಲೆಡೆ ಜೋರಾಗಿದೆ. ಹೀಗಿರುವಾಗ ಈ ಹತ್ಯಾಕಾಂಡ ನಡೆಸಿದ ಆರೋಪಿಗಳ ಕುಟುಂಬಸ್ಥರು ನೀಡಿರುವ ಹೇಳಿಕೆ ಭಾರೀ ವೈರಲ್ ಆಗಿದೆ. 'ನಮ್ಮ ಮಕ್ಕಳಿಗೆ ಗಲ್ಲು ಶಿಕ್ಷೆ ನೀಡಿದರೂ ನಾವೂ ಅದನ್ನು ವಿರೋಧಿಸುವುದಿಲ್ಲ' ಎಂದಿದ್ದಾರೆ.

ವೈದ್ಯೆ ಮೇಲೆ ರೇಪ್: ಸಂತ್ರಸ್ತೆ ತಂದೆಯನ್ನು ಠಾಣೆಯಿಂದ ಠಾಣೆಗೆ ಅಲೆಸಿದ್ದ ಪೊಲೀಸರು!

ಇನ್ನು ಈ ನಾಲ್ವರು ಆರೋಪಿಗಳಲ್ಲಿ ಒಬ್ಬನ ತಾಯಿ ಮಾತನಾಡುತ್ತಾ 'ಸಂತ್ರಸ್ತೆಯನ್ನು ಅವರು ಹೇಗೆ ಬೆಂಕಿ ಇಟ್ಟು ಸುಟ್ಟರೋ ಹಾಗೇ ಅವರನ್ನೂ ಸುಟ್ಟು ಹಾಕಿ' ಎಂದಿದ್ದಾರೆ. ಈ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದ ಮೂಲೆದ ಮೂಲೆಯಲ್ಲೂ ಸದ್ದು ಮಾಡುತ್ತಿದ್ದು ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗಲ್ಲುಶಿಕ್ಷೆ ಅಥವಾ ಸುಟ್ಟು ಹಾಕಿ

ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಕೇಶವುಲ್ ಎಂಬಾತ, ನಾರಾಯಣಪೇಟೆ ಜಿಲ್ಲೆಯ ಮಕಟಲ್ ಮಂಡಲ್ ನಿವಾಸಿ. ಆತನ ತಾಯಿ ಶಾಮಲಾ ಮಾತನಾಡುತ್ತಾ 'ಆತನಿಗೆ ಗಲ್ಲುಶಿಕ್ಷೆ ನೀಡಿ ಇಲ್ಲವೇ ಸುಟ್ಟು ಹಾಕಿ. ಅವರೆಲ್ಲಾ ಆ ವೈದ್ಯೆಯನ್ನು ಅತ್ಯಾಚಾರ ಮಾಡಿದ ಬಳಿಕ ಏನು ಮಾಡಿದ್ರೋ ಹಾಗೇ ಅವರಿಗೂ ಶಿಕ್ಷೆ ನೀಡಿ' ಎಂದಿದ್ದಾರೆ.

ಬಿಡಿ ಒಳಗೆ: ಅತ್ಯಾಚಾರ ಆರೋಪಿಗಳಿರುವ ಜೈಲಿನ ಮುಂಭಾಗದಲ್ಲಿ ಜನಾಕ್ರೋಶ!

ಅಲ್ಲದೇ 'ಹೆಣ್ಣು ಹೆತ್ತ ಆ ವೈದ್ಯೆಯ ಕುಟುಂಬದ ನೋವು ಏನೆಂಬುವುದು ನನಗೆ ತಿಳಿದಿದೆ. ನನಗೂ ಒಬ್ಬ ಮಗಳಿದ್ದಾಳೆ. ಮಗಳಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದಾಗ ಆಗುವ ನೋವು ಏನೆಂಬುವುದನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ನನ್ನ ಮಗ ಮಾಡಿದ ಘೋರ ಪಾಪ ತಿಳಿದ ಬಳಿಕವೂ ನಾನು ಆತನನ್ನು ರಕ್ಷಿಸಲು ನಿಂತರೆ, ಜನರು ನನ್ನನ್ನು ಜೀವಮಾನವಿಡೀ ದ್ವೇಷಿಸುತ್ತಾರೆ' ಎಂದಿದ್ದಾರೆ.

ವೈದ್ಯೆ ಮೇಲೆ ಅತ್ಯಾಚಾರ, ಕೊಲೆ: ಈವರೆಗೆ ಏನೇನಾಯ್ತು? ಇಲ್ಲಿದೆ ಎಲ್ಲಾ ಸುದ್ದಿಗಳು

ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: