ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ಭರ್ಜರಿ ಮೇಲುಗೈ ಸಾಧಿಸಿದೆ. ಬಾಂಗ್ಲಾದೇಶ ಬ್ಯಾಟಿಂಗ್‌ನಲ್ಲಿ ಎಡವಿದ್ದು, ಇದೀಗ ಬೌಲಿಂಗ್‌ನಲ್ಲಿ ಕಮ್‌ಬ್ಯಾಕ್ ಮಾಡೋ ಯತ್ನದಲ್ಲಿದೆ. ಭಾರತೀಯ ಟೆಕ್ಕಿಗಳಿಬ್ಬರಿಗೆ ಪಾಕಿಸ್ತಾನ ಉಗ್ರಪಟ್ಟ ಕಟ್ಟಲು ಮುಂದಾಗಿದೆ. ಸಿಎಂ ಯಡಿಯೂರಪ್ಪಗೆ ಸಂಕಷ್ಟ, ತನ್ವೀರ್ ಹಲ್ಲೆ ಪ್ರಕರಣದ ಸ್ಫೋಟಕ ಮಾಹಿತಿ ಬಯಲು ಸೇರಿದಂತೆ ನವೆಂಬರ್ 22ರ ಟಾಪ್ 10 ಸುದ್ದಿ ಇಲ್ಲಿವೆ.
1) ತನ್ವೀರ್ ಧ್ವನಿಪೆಟ್ಟಿಗೆಗೆ ಹಾನಿ, ತುಂಡಾಗಿರುವ ಕಿವಿ ಕುಟುಂಬಸ್ಥರಿಗೆ ಹಸ್ತಾಂತರ!
undefined
ಮಚ್ಚಿನೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಇದೇ ವೇಳೆ ಮಚ್ಚಿನೇಟಿಗೆ ತುಂಡಾಗಿದ್ದ ಅವರ ಎಡಗಿವಿಯನ್ನು ಜೋಡಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಆ ಭಾಗ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಶಸ್ತ್ರಕ್ರಿಯೆ ಮಾಡಿ ತೆಗೆದು ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2) MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!
ತನ್ನನ್ನು ತಾನು ಶಾಸಕನ ಮಗ ಎಂದು ಪರಿಚಯಿಸಿಕೊಂಡು ಹೆದರಿಸಿ ಯುವತಿಯರ ಮೇಲೆ ಅತ್ಯಾಚಾರ ಮಾಡುತ್ತಿದ್ದು ಎಂಬಿಎ ಪದವೀಧರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜಹಂಗೀರ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಯುವತಿಯರನ್ನು ವಂಚಿಸಿ ಅತ್ಯಾಚಾರ ಮಾಡುತ್ತಿದ್ದ.
3) ಇಬ್ಬರು ಭಾರತೀಯರಿಗೆ ಉಗ್ರ ಪಟ್ಟ ಕಟ್ಟಲು ಪಾಕಿಸ್ತಾನ ಯತ್ನ!
ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯಿಂದ ಘೋಷಣೆ ಮಾಡಿಸುವಲ್ಲಿ ಸಫಲವಾಗಿರುವ ಭಾರತದ ವಿರುದ್ಧ ಪಾಕಿಸ್ತಾನದ ಹಗೆತನ ಮುಂದುವರಿದಿದೆ. ಭಾರತದ ಇಬ್ಬರನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ದೂರು ನೀಡುವ ಮೂಲಕ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನ ದುಷ್ಟಪ್ರಯತ್ನ ಮುಂದುವರಿಸಿರುವ ಸಂಗತಿ ಬೆಳಕಿಗೆ ಬಂದಿದೆ.
4) 'ಡಿ.9ರ ನಂತರ ಯಡಿಯೂರಪ್ಪ ಕುರ್ಚಿಗೆ ಕಂಟಕ ಶತಸಿದ್ಧ
5 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಡಿಸೆಂಬರ್ 9 ರಂದು ಪ್ರಕಟವಾದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿಗೆ ಕಂಟಕ ಬರಲಿದೆ ಅನ್ನೋ ಭವಿಷ್ಯ ಹೊರಬಿದ್ದಿದೆ.
5) ಪಿಂಕ್ ಬಾಲ್ ಟೆಸ್ಟ್; ಅಲ್ಪ ಮೊತ್ತಕ್ಕೆ ಬಾಂಗ್ಲಾ ಆಲೌಟ್; ಭಾರತಕ್ಕೆ ಭರ್ಜರಿ ಮೇಲುಗೈ!
ಬಾಂಗ್ಲಾದೇಶ ವಿರುದ್ದದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಮಿಂಚಿನ ದಾಳಿಗೆ ಬಾಂಗ್ಲಾ ತತ್ತರಿಸಿದೆ. ಈ ಮೂಲಕ ಬಾಂಗ್ಲಾ ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ.
6) ಸಮಂತಾಗೆ 'ಬೇಬಿ' ಹುಟ್ಟುತ್ತಿದೆ, ಡೇಟ್ ಕೂಡ ಫಿಕ್ಸ್!
'ರಂಗಮ್ಮ ಮಂಗಮ್ಮ' ಖ್ಯಾತಿಯ ಟಾಲಿವುಡ್ ಬ್ಯೂಟಿ ಸಮಂತಾ ಪ್ರೆಗ್ನೆನ್ಸಿ ಗುಟ್ಟನ್ನು ರಟ್ಟು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ Q&A ಮಾಡಲಾಗಿತ್ತು ಅಗ ಅಭಿಮಾನಿಯೊಬ್ಬ 'ಮಗು ಯಾವಾಗ?' ಅಂತ ಕೇಳಿದ್ದಕ್ಕೆ ಕಾಲಿವುಡ್ ಬ್ಯೂಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ ಮಗುವನ್ನು ಬರ ಮಾಡಿಕೊಳ್ಳುವ ಡೇಟನ್ನೂ ರಿವೀಲ್ ಮಾಡಿದ್ದಾರೆ!
7) 40 ಬಗೆಯ ಹಣ್ಣು ಕೊಡುತ್ತೆ ಈ ಮರ: ಅದ್ಭುತ ಗಿಡದ ಬೆಲೆ ಎಷ್ಟಿರಬಹುದು?
ವಿಜ್ಞಾನವೆಂಬ ಲೋಕ ಅತ್ಯಂತ ಕುತೂಹಲಕಾರಿ. ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿಯಿಂದಾಗಿ, ಒಂದು ಕಾಲದಲ್ಲಿ ಅಸಾಧ್ಯವೆಂದು ಬಿಂಬಿತವಾಗಿದ್ದ ಸಂಗತಿಗಳು ಇಂದು ಸಾಧ್ಯವಾಗುತ್ತಿವೆ. ಇಂತಹ ಆವಿಷ್ಕಾರಕ್ಕೆ ಸಾಕ್ಷಿ ಎಂಬಂತಿದೆ 40 ಬಗೆಯ ಹಣ್ಣುಗಳನ್ನು ನೀಡುವ 'ಟ್ರೀ ಆಫ್ 40'.
8) ಮಲ್ಯ ಸೇರಿ ಟಾಪ್ 30 ದೊಡ್ಡ ಸುಸ್ತಿದಾರರ ಹೆಸರು ಬಹಿರಂಗ!
ದೇಶದ ಬೃಹತ್ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಬಹಿರಂಗಪಡಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು 4 ವರ್ಷಗಳ ಬಳಿಕ ಆರ್‌ಬಿಐ ಪಾಲನೆ ಮಾಡಿದೆ. ಆರ್‌ಟಿಐ ಕಾಯ್ದೆಯಡಿ ಉದ್ದೇಶಪೂರ್ವಕ ಸುಸ್ತಿದಾರರ ಮಾಹಿತಿ ನೀಡಲು ಕೋರಿದ್ದ ಅರ್ಜಿಗೆ ಉತ್ತರಿಸಿರುವ ಆರ್‌ಬಿಐ, ಕರ್ನಾಟಕ ಮೂಲದ ಉದ್ಯಮಿ ವಿಜಯ್ ಮಲ್ಯ ನೇತೃತ್ವದ ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆ, ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಕಂಪನಿ ಸೇರಿದಂತೆ 30 ಕಂಪನಿಗಳು/ ವ್ಯಕ್ತಿಗಳ ಹೆಸರನ್ನು ಪ್ರಕಟಿಸಿದೆ.
9) ರೀ ನೀವೇನ್ ಮಿನಿಸ್ಟರಾ?: ತಾಳ್ಮೆ ಕಳೆದುಕೊಂಡ ನಾಯ್ಡು!
ಸಾಮಾನ್ಯವಾಗಿ ಶಾಂತ ಸ್ವಭಾವದ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಕಲಾಪದ ವೇಳೆ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ. ನಾಯ್ಡು ಗರಂ ಆದ ಘಟನೆ ಇದೀಗ ವೈರಲ್ ಆಗಿದೆ.
10) Game of Thronesನಲ್ಲಿ ಬೆತ್ತಲಾದವಳ ನೋವಿದು
ಡೇನೆರಿಸ್ ಟಾರ್ಗರಿಯನ್ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಎಮಿಲಾ ಕ್ಲಾರ್ಕ್ ಹಾಲಿವುಡ್ ಲೋಕದ ಬಹು ಬೇಡಿಕೆಯ ನಟಿ, ಗೇಮ್ ಆಫ್ ಥ್ರೋನ್ಸ್ ಸೀರಿಸ್‌ನಲ್ಲಿ ಕೆಲವೊಂದು ದೃಶ್ಯಗಳಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದರು. ಮತ್ತೆ ಅಂಥದ್ದೇ ಪಾತ್ರಗಳು ಬರುತ್ತಿರುವುದರ ಬಗ್ಗೆ ಎಮಿಲಾ ಮಾತನಾಡಿದ್ದರು. ಈ ಬೋಲ್ಡ್ ನಟಿ ಸಾಮಾಜಿಕ ಜಾಲತಾಣದಲ್ಲಿ ಹಲವು ಫೋಟೋ ಶೇರ್ ಮಾಡಿಕೊಂಡಿದ್ದಾರೆ.