ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್: ಹೌಹಾರಿದ ಪೊಲೀಸರು!

By Web Desk  |  First Published Nov 8, 2019, 6:16 PM IST

ಭಿಕ್ಷುಕಿ ಕೈಯಲ್ಲಿ 12 ಸಾವಿರ ನಗದು, ಅಕೌಂಟ್’ನಲ್ಲಿ 2 ಲಕ್ಷ ಕ್ಯಾಶ್/ ಶ್ರೀಮಂತ ಭಿಕ್ಷುಕಿ ಕಂಡು ಹೌಹಾರಿದ ಪುದುಚೇರಿ ಪೊಲೀಸರು/  ದೇವಸ್ಥಾನವೊಂದರ ಎದುರು ಪ್ರಜ್ಞೆತಪ್ಪಿ ಬಿದ್ದಿದ್ದ ವೃದ್ಧೆ ಪಾರ್ವತಮ್ಮ/ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆಧಾರ್ ಗುರುತಿನ ಚೀಟಿ ಹೊಂದಿರುವ ಪಾರ್ವತಮ್ಮ/ ಭಿಕ್ಷೆ ಬೇಡಿಯೇ ಇಷ್ಟೊಂದು ಹಣ ಸಂಪಾದಿಸಿರುವ ಪಾರ್ವತಮ್ಮ/ ವೃದ್ಧೆಯನ್ನು ಸಹೋದರನ ಸುಪರ್ದಿಗೆ ಒಪ್ಪಿಸಿದ ಪುದುಚೇರಿ ಪೊಲೀಸರು/


ಪುದುಚೇರಿ(ನ.08): ವೃದ್ಧ ಭಿಕ್ಷುಕಿಯೋರ್ವವಳ ಬಳಿ 12 ಸಾವಿರ ರೂ. ನಗದು ಹಾಗೂ ಬ್ಯಾಂಕ್ ಅಕೌಂಟ್’ನಲ್ಲಿ 2 ಲಕ್ಷ ರೂ. ಇರುವದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದ ಘಟನೆ ಪುದುಚೇರಿಯಲ್ಲಿ ನಡೆದಿದೆ.

ಇಲ್ಲಿನ ದೇವಸ್ಥಾನವೊಂದರ ಎದುರು ಪ್ರಜ್ಞೆತಪ್ಪಿ ಬಿದ್ದಿದ್ದ ಪಾರ್ವತಮ್ಮ ಎಂಬ ವೃದ್ಧೆಯನ್ನು ತಪಾಸಣೆ ನಡೆಸಿದಾಗ ಆಕೆಯ ಬಳಿ 12 ಸಾವಿರ ರೂ. ನಗದು ದೊರೆತಿದೆ.  ಅಲ್ಲದೇ ಆಕೆಯ ಅಕೌಂಟ್’ನಲ್ಲಿ 2 ಲಕ್ಷ ರೂ. ಜಮಾ ಇದ್ದು, ಇಷ್ಟೊಂದು ಹಣವನ್ನು ಭಿಕ್ಷೆ ಬೇಡಿಯೇ ಗಳಿಸಿದ್ದಾಗಿ ಪಾರ್ವತಮ್ಮ ತಿಳಿಸಿದ್ದಾಳೆ.

Tap to resize

Latest Videos

ಲಕ್ಷಾಧಿಪತಿ ಭಿಕ್ಷುಕ ಆಯ್ತು, ಈಗ ಕೋಟ್ಯಾಧಿಪತಿ ಭಿಕ್ಷುಕಿ ಸರದಿ!

ಇಷ್ಟೇ ಅಲ್ಲದೇ ಪಾರ್ವತಮ್ಮ ಬಳಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಆಧಾರ್ ಗುರುತಿನ ಚೀಟಿ ಸಹ ಇದ್ದು, ಈಕೆ ತಮಿಳುನಾಡಿನ ಕುರುಚಿ ಮೂಲದವಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಯುಸಿರೆಳೆದ ಲಕ್ಷಾಧಿಪತಿ ಭಿಕ್ಷುಕ: ಗುಡಿಸಲಿಗೆ ತೆರಳಿದ ಪೊಲೀಸರಿಗೆ ಭಾರೀ ಅಚ್ಚರಿ!

40 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿರುವ ಪಾರ್ವತಮ್ಮ, ಪುದುಚೇರಿಯಲ್ಲಿ ಸುತ್ತಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದಳು ಎನ್ನಲಾಗಿದೆ. 

ಮೃತ ಭಿಕ್ಷುಕನ ಬಳಿ ಸಿಕ್ತು ಭಾರೀ ಪ್ರಮಾಣದ ಹಣ

ಕಳೆದ ಎಂಟು ವರ್ಷಗಳಿಂದ ಈ ದೇವಸ್ಥಾನದ ಎದುರು ಪಾರ್ವತಮ್ಮ ಭಿಕ್ಷೆ ಬೇಡುತ್ತಿದ್ದರು. ಸದ್ಯ ಕುಲ್ಲಿಕುರುಚಿಯಲ್ಲಿ ಪಾರ್ವತಮ್ಮ ಸಂಬಂಧಿಕರನ್ನು ಪತ್ತೆ ಚಚ್ಚಿರುವ ಪೊಲೀಸರು, ಆಕೆಯನ್ನು ಸಹೋದರನ ಸುಪರ್ದಿಗೆ ಒಪ್ಪಿಸಿದ್ದಾರೆ.

ಬೆಂಗಳೂರು: ಸಾವಿಗೀಡಾದ ಭಿಕ್ಷುಕನ ಬಳಿ ಕಂತೆ ಕಂತೆ ನೋಟು! ಅಬ್ಬಬ್ಬಾ

click me!