ಗಾಂಧಿ ಕುಟಂಬದ ವಿಶೇಷ ಭದ್ರತೆ ವಾಪಸ್: ಇದೀಗ ಉಳಿದಿದ್ದು ಕೇವಲ z ಪ್ಲಸ್!

By Web DeskFirst Published Nov 8, 2019, 5:07 PM IST
Highlights

ಗಾಂಧಿ ಕುಟಂಬದ ವಿಶೇಷ ಭದ್ರತೆ ವಾಪಸ್ ಪಡೆದ ಕೇಂದ್ರ ಸರ್ಕಾರ| ಗಾಂಧಿ ಕುಟುಂಬಕ್ಕೆ ಝಡ್ ಪ್ಲಸ್ ಭದ್ರತೆಯನ್ನಷ್ಟೇ ಒದಗಿಸಿದ ಗೃಹ ಸಚಿವಾಲಯ| CRPF ಝಡ್ ಪ್ಲಸ್ ಭದ್ರತೆಯಲ್ಲಿ ಗಾಂಧಿ ಕುಟುಂಬ|

ನವದೆಹಲಿ(ನ.08): ಮಹತ್ವದ ಬೆಳವಣಿಗೆಯೊಂದರಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ , ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ  ವಿಶೇಷ ಭದ್ರತಾ ವ್ಯವಸ್ಥೆ (ಎಸ್‌ಪಿಜಿ) ಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. 

ಗಾಂಧಿ ಕುಟುಂಬಕ್ಕೆ ಇದೀಗ CRPF ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದ್ದು, ಎಸ್‌ಪಿಜಿ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

2017 ರಲ್ಲಿ 3360 ಗಣ್ಯರಿಗೆ ಭದ್ರತಾ ವ್ಯವಸ್ಥೆ ಕಡಿತ; ಕೇಂದ್ರ

Govt Sources: Govt has decided to withdraw SPG protection from the Gandhi family(Sonia Gandhi,Rahul Gandhi and Priyanka Gandhi Vadra), they will now be accorded Z+ security pic.twitter.com/Auina87oQ8

— ANI (@ANI)

1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಅಂಗರಕ್ಷಕರಿಂದಲೇ ಹತ್ಯೆಯಾದ ಬಳಿಕ ಹಾಲಿ ಪ್ರಧಾನಿಗೆ ಹಾಗೂ ಮಾಜಿ ಪ್ರಧಾನಿಗಳಿಗೆ ಮತ್ತು ಅವರ ನಿಕಟ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಕೊಡುವ ವ್ಯವಸ್ಥೆ ಜಾರಿ ಮಾಡಲಾಯಿತು.

ಇದೊಳ್ಳೆ ತಲೆನೋವು! ವಿದೇಶಕ್ಕೆ ಹೋದ್ರೂ ರಾಹುಲ್ ಎಸ್‌ಪಿಜಿ ಸಿಬ್ಬಂದಿ ಕರೆದೊಯ್ಯಲ್ಲ!

ಬಳಿಕ ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ಹತ್ಯೆಗೈದ ನಂತರ, ಎಸ್‌ಪಿಜಿ ಭದ್ರತೆಯಲ್ಲಿ ಮತ್ತಷ್ಟು ಬದಲಾವಣೆ ಮಾಡಲಾಗಿತ್ತು.

Govt Sources: Gandhi family (Sonia Gandhi, Rahul Gandhi and Priyanka Gandhi Vadra) will be given Z+ secuirty cover by Central Reserve Police Force all over India. https://t.co/vgBQggdCqc

— ANI (@ANI)

ಇತ್ತೀಚಿಗೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಜಿ ಪ್ರಧಾನಿ ಡಾ. ಸಿಂಗ್‌ ಎಸ್‌ಪಿಜಿ ಭದ್ರತೆ ವಾಪಸ್‌!

click me!