
'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!
ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್(34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಇಂದು ಬೆಳಗ್ಗೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸುಶಾಂತ್ ಪತ್ತೆಯಾಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು ಎಂಬುವುದು ಉಲ್ಲೇಖನೀಯ.
ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ಟ್ರಂಪ್ ಸಜ್ಜು
ಕೊರೋನಾ ವೈರಸ್ ಹಾವಳಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶದ ಉದ್ಯೋಗಿಗಳ ಮೇಲೆ ಗದಾಪ್ರಹಾರ ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಭಾರತೀಯ ಐಟಿ ಉದ್ಯೋಗಿಗಳ ಬಹುಬೇಡಿಕೆಯ ಎಚ್-1ಬಿ ಸೇರಿದಂತೆ ವಿವಿಧ ಔದ್ಯೋಗಿಕ ವೀಸಾಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವನ್ನು ಟ್ರಂಪ್ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಾಸ್ಕ್ ಧರಿಸದಿದ್ದರೆ 6 ತಿಂಗಳು ಜೈಲೂಟ, 5000 ರೂ. ದಂಡ!
ಬಹಳ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುತ್ತಿರುವ ಕೊರೋನಾ ನಿಗ್ರಹಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ 6 ತಿಂಗಳು ಜೈಲೂಟ, 5000 ರೂಪಾಯಿ ದಂಡ ವಿದಿಸಲು ಆದೇಶ ನೀಡಲಾಗಿದೆ.
ಪಿಒಕೆಗೆ ರೋಗಿಗಳ ಶಿಫ್ಟ್ ಮಾಡುತ್ತಿದೆ ಪಾಕ್!
ಕೊರೋನಾ ವೈರಸ್ ನಿಯಂತ್ರಿಸಲು ಹೆಣಗಾಡುತ್ತಿರುವ ಪಾಕಿಸ್ತಾನ, ‘ಪಾಕ್ ಆಕ್ರಮಿತ ಕಾಶ್ಮೀರ’ (ಪಿಒಕೆ)ವನ್ನು ಕೊರೋನಾ ರೋಗಿಗಳ ಡಂಪಿಂಗ್ ಯಾರ್ಡ್ ಮಾಡಿಕೊಂಡಿರುವ ಸಂಗತಿ ಬಯಲಾಗಿದೆ. ಪಾಕಿಸ್ತಾನದ ಈ ನಡೆ ವಿರುದ್ಧ ಪಿಒಕೆಯಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
ಮತ್ತೆ ಲಾಕ್‌ಡೌನ್ ಮಾಡಲು ಪ್ರಧಾನಿ ಮೋದಿ ಚಿಂತಿಸಿದ್ದಾರಾ?
ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆ ನಡೆಸಿರುವುದು, ಇನ್ನೆರಡು ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವುದು ನೋಡಿದ್ರೆ, ಮತ್ತೊಮ್ಮೆ ದಿಢೀರ್ ಲಾಕ್‌ಡೌನ್ ಘೋಷಣೆ ಮಾಡಲು ತಯಾರಿ ನಡೆಸಿದ್ದಾರಾ? ಎನ್ನುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದುಬಾರಿ ಕಾಫಿಯಿಂದ ಬದಲಾಯ್ತು ಕ್ರಿಕೆಟ್: ಕೆಎಲ್ ರಾಹುಲ್!
ಕಾಫಿ ವಿಥ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ದುಬಾರಿ ಕಾಫಿ ಕುಡಿದಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್, ಕಳೆದ ವರ್ಷ ಅಮಾನತು ಶಿಕ್ಷೆ ಅನುಭವಿಸಿದ್ದಾರೆ. ನಿಷೇಧದ ಬಳಿಕ ರಾಹುಲ್ ಕ್ರಿಕೆಟ್ ಹೇಗೆ ಬದಲಾಯ್ತು ಅನ್ನೋದನ್ನು ಸ್ವತಃ ಕೆಎಲ್ ವಿವರಿಸಿದ್ದಾರೆ.
ನಟಿ ರಮ್ಯಕೃಷ್ಣ ಕಾರಲ್ಲಿ 100 ಮದ್ಯದ ಬಾಟಲ್ ಪತ್ತೆ; ಅಕ್ರಮ ಸಾಗಾಟದ ಶಂಕೆ ?
ಬಹುಭಾಷಾ ನಟಿ ರಮ್ಯಕೃಷ್ಣ ತನ್ನದೇ ವಿಭಿನ್ನ ಶೈಲಿಯಲ್ಲಿ ಅಭಿನಯಿಸುತ್ತಾ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿ ರಮ್ಯಕೃಷ್ಣ ವಿರುದ್ಧ ದೂರೊಂದು ಕೇಳಿ ಬರುತ್ತಿರುವುದು...
8 ವಾರಗಳಲ್ಲಿ 10 ಹೂಡಿಕೆ! ರಿಲಯನ್ಸ್ ಜೊತೆ ಕೈಜೋಡಿಸಿದ ಎಲ್‌ಕ್ಯಾಟರ್‌ಟನ್...
ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 1,894.50 ಕೋಟಿ ರೂ. ಹೂಡಿಕೆ ಮಾಡಲಿರುವ ಎಲ್ ಕ್ಯಾಟರ್‌ಟನ್ ; ಕಳೆದ 8 ವಾರಗಳಲ್ಲಿ ಜಾಗತಿಕ ಹೂಡಿಕೆದಾರರಿಂದ 1,04,326.95 ಕೋಟಿ ರೂ. ಹೂಡಿಕೆ ಪಡೆದಿರುವ ಜಿಯೋ ಪ್ಲಾಟ್‌ಫಾರ್ಮ್ಸ್! ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿಯಿಂದ ಹೂಡಿಕೆ.
ಟಾಟಾ ಅಲ್ಟ್ರೋಜ್ ಕಾರಿಗೆ ಬಂಪರ್ ಆಫರ್, EMI ಕೇವಲ 5,555 ರೂಪಾಯಿ!...
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಆಟೋಮೊಬೈಲ್ ಕಂಪನಿಗಳು ಸುಲಭ ಸಾಲ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಟಾಟಾ ಮೋಟಾರ್ಸ್ ವಿಶೇಷ ಆಫರ್ ಘೋಷಿಸಿದೆ. ಇದೀಗ ಟಾಟಾ ಅಲ್ಟ್ರೋಜ್ ಕಾರಿಗೆ EMI ನೀಡಲಾಗಿದೆ.
ಡಿಕೆಶಿಗೆ ನಾಣ್ಯ ನೀಡಿ ಹರಸಿದ ಮಂಗಳಮುಖಿಯರು
ವಿಘ್ನ ನಿವಾರಣೆಗಾಗಿ ಡಿಕೆ ಶಿವಕುಮಾರ್ ಕೆಪಿಸಿಸಿ ಕಟ್ಟಡದಲ್ಲಿ ವಿಶೇಷ ಹೋಮ, ಹವನಾದಿಗಳನ್ನು ಮಾಡಿಸಿ ದೇವರ ಮೊರೆ ಹೋದರು. ಅಲ್ಲಿಗೆ ಬಂದಿದ್ದ ಮಂಗಳಮುಖಿಯರಿಂದ ನಾಣ್ಯ ಪಡೆದು ಆಶೀರ್ವಾದ ಪಡೆದರು. ಮಂಗಳಮುಖಿಯರಿಂದ ನಾಣ್ಯ ಪಡೆಯುವುದು ಶುಭ ಸಂಕೇತ ಎಂಬ ನಂಬಿಕೆಯಿದ್ದು ಅದರಂತೆ ಮಂಗಳಮುಖಿಯರು ಡಿಕೆಶಿಗೆ ನಾಣ್ಯ ನೀಡಿ ಹರಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.