
ನವದೆಹಲಿ(ಅ.18): ಮಹತ್ವದ ಬೆಳವಣಿಗೆಯೊಂದರಲ್ಲಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ(NRC)ಮುಖ್ಯಸ್ಥರನ್ನು ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!
ಅಸ್ಸಾಂನಲ್ಲಿ NRC ಪ್ರಕ್ರಿಯೆ ಬಹುತೇಕ ಅಂತ್ಯಗೊಂಡಿದ್ದು, ಇಡೀ ಪ್ರಕ್ರಿಯೆ ಜವಾಬ್ದಾರಿ ಹೊತ್ತಿದ್ದ ಪ್ರತೀಕ್ ಹಜೆಲಾ ಅವರನ್ನು ಸುಪ್ರೀಂಕೋರ್ಟ್ ಮಧ್ಯಪ್ರದೇಶಕ್ಕೆ ದಿಢೀರ್ ವರ್ಗಾವಣೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಹಜೆಲಾ ವರ್ಗಾವಣೆಯ ಆದೇಶ ಹೊರಡಿಸಿದ್ದು, ದಿಢೀರ್ ಆದೇಶಕ್ಕೆ ಕಾರಣವನ್ನೂ ನೀಡದಿರುವುದು ತೀವ್ರ ಕುತೂಹಲ ಮೂಡಿಸಿದೆ.
19 ಲಕ್ಷ ನಾಗರಿಕರು ಔಟ್: NRC ಮೇಲೆ ಅಸ್ಸಾಂ ಮಿನಿಸ್ಟರ್ ಡೌಟ್!
ಹಜೆಲಾ ವರ್ಗಾವಣೆಗೆ ಕಾರಣ ಏನೆಂದು ಕೇಳಿದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ, ನ್ಯಾಯಪೀಠದಿಂದ ವರ್ಗಾವಣೆಗೆ ನಿರ್ದಿಷ್ಟ ಕಾರಣದ ಅವಶ್ಯಕತೆ ಇಲ್ಲ ಎಂಬ ಉತ್ತರ ದೊರೆತಿದೆ.
NRC ಲಿಸ್ಟ್‌ನಲ್ಲಿ ಗಡಿಕಾಯುವ ಯೋಧರ ಹೆಸರೇ ಇಲ್ಲ..!
ಅಸ್ಸಾಂ NRC ಅಂದ್ರೇನು? ಪಟ್ಟಿಯಲ್ಲಿ ಹೆಸರಿಲ್ಲದವರ ಗತಿ ಏನು? ಸಿಂಪಲ್ ಆಗಿ ತಿಳ್ಕೊಳ್ಳಿ
1995ರ ಅಸ್ಸಾಂ-ಮೇಘಾಲಯ ಕೆಡರ್'ನ ಐಎಎಸ್ ಅಧಿಕಾರಿಯಾಗಿರುವ ಹಜೆಲಾ, ಸುಮಾರು 50 ಸಾವಿರ ಸಿಬ್ಬಂದಿ ಸಹಾಯದೊಂದಿಗೆ ಅಸ್ಸಾಂನಲ್ಲಿ NRC ಪ್ರಕ್ರಿಯೆ ಆರಂಭಿಸಿದ್ದರು.
ಕೇಂದ್ರ ಸರ್ಕಾರದ NRC ಪ್ರಕ್ರಿಯೆಯನ್ನು ವಿಪಕ್ಷಗಳು ಟೀಕಿಸಿದ್ದು, 19 ಲಕ್ಷ ಜನರನ್ನು NRC ಪಟ್ಟಿಯಿಂದ ಹೊರಗಿಟ್ಟ ಹಜೆಲಾ ನೇತೃತ್ವದ NRC ತಂಡ ಹಲವು ಆರೋಪಗಳನ್ನು ಎದುರಿಸಬೇಕಾಗಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಕ್ರಮ ವಲಸಿಗರನ್ನು ಹೊರ ದಬ್ಬುತ್ತೇವೆ: ಅಸ್ಸಾಂನಲ್ಲಿ ಶಾ ಗುಡುಗು!
ಗುಡುಗಿದ ಶಾ: ದೇಶದಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ ಆರಂಭ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.