ತಲೈವಾ ಆರೋಪಕ್ಕೆ BJP ಗಡ ಗಡ, ಪೊಲೀಸ್ರಿಗೆ ಶರಣಾದ ಅಶ್ವಿನಿ ಗೌಡ; ನ.8ರ ಟಾಪ್ 10 ಸುದ್ದಿ!

By Web DeskFirst Published Nov 8, 2019, 4:37 PM IST
Highlights

ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿದ್ದ, ಸೂಪರ್ ಸ್ಟಾರ್ ರಜನಿ ಕಾಂತ್ ಇದೀಗ ತಿರುಗಿ ಬಿದ್ದಿದ್ದಾರೆ. ತಲೈವಾ ಆರೋಪಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ವೈದ್ಯರ ಮುಷ್ಕರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ  ನಟಿ ಹಾಗೂ ರಕ್ಷಣಾ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿದಂತೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗಿದ್ದಾರೆ. ಆಯೋಧ್ಯೆ ತೀರ್ಪಿಗೆ ಮೂಹೂರ್ತ ಫಿಕ್ಸ್, ಸ್ಟಾರ್ ಕ್ರಿಕೆಟಿಗನ ಕಪಾಳಕ್ಕೆ ಭಾರಿಸಿ ಫಿಕ್ಸಿಂಗ್ ಮಾಹಿತಿ ಕಕ್ಕಿಸಿದ ಪೊಲೀಸ್ ಸೇರಿದಂತೆ ನವೆಂಬರ್ 8ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

1) ಬಿಜೆಪಿಯಿಂದ ನನಗೆ ಕೇಸರಿ ಬಣ್ಣ ಬಳಿಯುವ ಹುನ್ನಾರ: ತಲೈವಾ ಆರೋಪಕ್ಕೆ ಕಮಲ ತತ್ತರ!

ಬಿಜೆಪಿ ಉದ್ದೇಶಪೂರ್ವಕವಾಗಿ ತಮಗೆ ಕೇಸರಿ ಬಣ್ಣ ಬಳಿಯುವ ಹುನ್ನಾರ ನಡೆಸಿದ್ದು, ಅವರ ಉದ್ದೇಶ ಎಂದೂ ಈಡೇರುವುದಿಲ್ಲ ಎಂದು ಖ್ಯಾತ ನಟ, ಸೂಪರ್ ಸ್ಟಾರ್ ರಜನೀಕಾಂತ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುವಂತೆ ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2) ಕೊನೆಗೂ ಅಯೋಧ್ಯೆ ವಿವಾದ ತೀರ್ಪಿಗೆ ಸುಪ್ರೀಂ ಡೇಟ್ ಫಿಕ್ಸ್?

ಇಡೀ ದೇಶವೇ ಎದುರು ನೋಡುತ್ತಿರುವ ಬಾಬ್ರಿ ಮಸೀದಿ- ರಾಮ ಮಂದಿರ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆ ವಿವಾದದ ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್  ತೀರ್ಪು ಪ್ರಕಟಿಸಲು ಡೇಟ್ ಫಿಕ್ಸ್ ಮಾಡಿದೆ.

3) ರಾಜ್ಯದಲ್ಲಿ ಮದ್ಯ ನಿಷೇಧ : ಡಿಸಿಎಂ ಭರವಸೆ.

ಆಗ್ರಹಿಸಿ ‘ಮದ್ಯ ನಿಷೇಧ ಆಂದೋಲನ’ ಸಂಘಟನೆಯ ಕಾರ್ಯಕರ್ತರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ರೈಲು ನಿಲ್ದಾಣದಲ್ಲೇ ಬೆಳಗ್ಗೆಯಿಂದ ರಾತ್ರಿವರೆಗೆ ಪ್ರತಿಭಟನೆ ನಡೆಸಿದರು. ಇದೀಗ ಉಪ ಮುಖ್ಯಮಂತ್ರಿ ಭರವಸೆ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಮದ್ಯ ನಿಷೇದಕ್ಕೆ ಸರ್ಕಾರ ಸಜ್ಜಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.

4) KPCC ಅಧ್ಯಕ್ಷನಾಗಲು ನಾನೀಗ ರೆಡಿ: ಡಿ.ಕೆ.ಶಿವಕುಮಾರ್

 ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಹೈಕಮಾಂಡ್ ಹಿಂದೆಯೇ ಅವಕಾಶ ನೀಡಿತ್ತು. ಆದರೆ ನಾನು ಬೇರೆಯವರ ಸಲಹೆಯನ್ನೂ ಪಡೆಯುವಂತೆ ಹೇಳಿದ್ದರಿಂದ ಅವಕಾಶ ವಂಚಿತನಾದೆ. ಈ ಬಾರಿ ಹೈಕಮಾಂಡ್ ಅವಕಾಶ ನೀಡಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

5) ವೈದ್ಯರ ಮುಷ್ಕರ: ಅಶ್ವಿನಿ ಗೌಡ ಸೇರಿ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು

ನಗರದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ರಾಜ್ಯದೆಲ್ಲೆಡೆ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಟಿ ಹಾಗೂ ವೇದಿಕೆ ಕಾರ್ಯಕರ್ತೆ ಅಶ್ವಿನಿ ಗೌಡ ಸೇರಿ ಹಲವರು ಪೊಲೀಸರಿಗೆ ಶರಣಾಗಿದ್ದಾರೆ. ಆದರೆ, ಮುಷ್ಕರವಿನ್ನೂ ಮುಂದುವರಿದಿದೆ. ಅಲ್ಲದೇ ತಮ್ಮ ಹೋರಾಟವನ್ನು ಇನ್ನಷ್ಟೂ ಮುಂದುವರಿಸುವುದಾಗಿ ಕರವೇ ಎಚ್ಚರಿಸಿದೆ. 

6) ಉಗ್ರರೊಂದಿಗೆ ಹೋರಾಡಿ 24 ವರ್ಷದ ಬೆಳಗಾವಿಯ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಮೂಲದ ಯೋಧರೊಬ್ಬರ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ. ಹುತಾತ್ಮ ಯೋಧನನ್ನು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ರಾಹುಲ್  ಸುಳಗೇಕರ (24) ಎಂದು ಗುರುತಿಸಲಾಗಿದೆ.

7) KPL ಫಿಕ್ಸಿಂಗ್: ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ ಗೌತಮ್ ಅವರಿಗೆ ಕಪಾಳಕ್ಕೆ ಬಾರಿಸಿ ಸತ್ಯ ಬಾಯ್ಬಿಡಿಸಿದ್ದಾರೆ.

8) ದೀಪಿಕಾ ಬಳಸೋ ಬ್ಯಾಗಲ್ಲಿ ಬಡವರಿಗೆ ಒಂದು ಮನೆಯನ್ನೇ ಕಟ್ಟಿಸ್ಕೊಡ್ಬೋದು!

ಯಾವಾಗಲೂ ಮದುವೆ, ಸಿನಿಮಾ, ಸೋಷಿಯಲ್ ಸರ್ವೀಸ್ ಮೂಲಕ ಸುದ್ದಿಯಲ್ಲಿರುವ ದೀಪಿಕಾ ಪಡುಕೋಣೆ ಈಗ ಬ್ಯಾಗ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ದೀಪಿಕಾ ಇತ್ತೀಚಿಗೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಕೈಯಲ್ಲಿದ್ದ ಬ್ಯಾಗ್ ಗಮನ ಸೆಳೆದಿದೆ. 

9) ಅಂತರಿಕ್ಷದಲ್ಲಿ ಈ ಸಿಂಪಲ್ ಕೆಲಸಗಳು ಕೂಡಾ ಕಷ್ಟ ಕಷ್ಟ!

ಗಗನಯಾತ್ರಿಯಾಗೋದು ಸುಲಭದ ವಿಷಯವಿಲ್ಲ. ಅವರು ಗಗನನೌಕೆಯನ್ನು ನಿಭಾಯಿಸಬೇಕಷ್ಟೇ ಅಲ್ಲ, ಪ್ರತಿದಿನ ಮಾಡುವ ಕೆಲಸಗಳನ್ನೂ ದೊಡ್ಡದೊಂದು ಸವಾಲನ್ನು ನಿರ್ವಹಿಸುವ ರೀತಿ ಮಾಡಬೇಕಾಗುತ್ತದೆ. ಇವೆರಡರಲ್ಲಿ ಹೋಲಿಸಿದರೆ ಗಗನನೌಕೆ ನಿಭಾಯಿಸುವುದೇ ಸುಲಭ ಎಂಬ ಉತ್ತರ ಅವರಿಂದ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಭೂಮಿಯಲ್ಲಿ ಸುಲಭವಾದ ಕೆಲಸಗಳೆಲ್ಲ ಆಗಸದಲ್ಲಿ ಅಸಾಧ್ಯವಾಗಿ ನಿಲ್ಲುತ್ತವೆ.

10) ಡಿಮಾನಿಟೈಸೇಶನ್ ಗೆ 3 ವರ್ಷ: ಅಪನಗದೀಕರಣ ಮತ್ತೆ ಆದರೂ ಆಗಬಹುದು!

‘2016 ರಲ್ಲಿ ಕೇಂದ್ರ ಸರ್ಕಾರ 500 ರು. ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿ, ಅದರ ಬೆನ್ನಲ್ಲೇ ಚಲಾವಣೆಗೆ ತಂದಿದ್ದ 2000 ರು. ಮುಖಬೆಲೆಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಕಾಳಧನಿಕರು ಗುಪ್ತವಾಗಿ ಕೂಡಿಟ್ಟಿರುವ ಶಂಕೆ ಇದೆ. ಹೀಗಾಗಿ ಈ ನೋಟುಗಳ ಅಪನಗದೀಕರಣ ಆಗಲೂಬಹುದು’ ಎಂದು ಕೇಂದ್ರ ಹಣಕಾಸು ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಸುಭಾಷ್ ಚಂದ್ರಗರ್ಗ್ ಸುಳಿವು ನೀಡಿದ್ದಾರೆ.
 

click me!