
ಚೆನ್ನೈ(ನ.08): ಬಿಜೆಪಿ ಉದ್ದೇಶಪೂರ್ವಕವಾಗಿ ತಮಗೆ ಕೇಸರಿ ಬಣ್ಣ ಬಳಿಯುವ ಹುನ್ನಾರ ನಡೆಸಿದ್ದು, ಅವರ ಉದ್ದೇಶ ಎಂದೂ ಈಡೇರುವುದಿಲ್ಲ ಎಂದು ಖ್ಯಾತ ನಟ, ಸೂಪರ್ ಸ್ಟಾರ್ ರಜನೀಕಾಂತ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾಗುವಂತೆ ತಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಿಡಿಸಿರುವ ರಜನಿಕಾಂತ್, ಆ ಪಕ್ಷದ ಸೈದ್ದಾಂತಿಕ ನಿಲುವುಗಳಿಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ಬನ್ನಿ, ರಜನಿಗೆ ಅಮಿತ್ ಶಾ ಆಹ್ವಾನ
ತಮಿಳುನಾಡಿನ ಪ್ರಸಿದ್ಧ ಸಂತ ಕವಿ ತಿರುವಳ್ಳುವರ್ ಪ್ರತಿಮೆಯನ್ನು ಕೇಸರಿಕರಣಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್, ತಿರುವಳ್ಳುವರ್ ಜೊತೆಗೆ ತಮ್ಮನ್ನು ಕೇಸರಿಕರಣಗೊಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ರಾಧಾಕೃಷ್ಣನ್ ಜೊತೆಗಿನ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್, ಭೇಟಿ ವೇಳೆ ರಾಧಾಕೃಷ್ಣನ್ ಬಿಜೆಪಿ ಸೇರುವಂತೆ ತಮಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೇಳಿದರು.
ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ತಲೈವಾ ರಜನಿಕಾಂತ್!
ತತ್ವಜ್ಞಾನಿ ಹಾಗೂ ಖ್ಯಾತ ತಮಿಳು ಕವಿ ತಿರುವಳ್ಳುವರ್ ಕೇಸರಿ ಶಾಲು ಧರಿಸಿದ ಚಿತ್ರವನ್ನು ತಮಿಳುನಾಡು ಬಿಜೆಪಿ ಘಟಕ ಟ್ವೀಟ್ ಮಾಡಿತ್ತು. ಬಿಜೆಪಿಯ ಈ ಟ್ವಿಟ್ ದ್ರಾವಿಡ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದು, ತಿರುವಳ್ಳುವರ್ ಬಿಳಿ ಬಣ್ಣದ ಶಾಲನ್ನು ಧರಿಸುತ್ತಿದ್ದರು ಎಂದು ಸ್ಪಷ್ಟಪಡಿಸಿವೆ.
ಬಿಜೆಪಿ ಕವಿ ತಿರುವಳ್ಳುವರ್ ಅವರನ್ನು ಕೇಸರಿಕರಣಗೊಳಿಸಲು ಪ್ರಯತ್ನಿಸುತ್ತಿದ್ದು, ಈ ಹುನ್ನಾರ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ದ್ರಾವಡಿ ಸಂಘಟನೆಗಳು ಹರಿಹಾಯ್ದಿವೆ. ಈ ಮಧ್ಯೆ ರಜನಿಕಾಂತ್ ಕೂಡ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಜೀನಾಮೆ ಬೇಡ! ರಾಹುಲ್ ಬೆನ್ನಿಗೆ ನಿಂತ ರಜನಿಕಾಂತ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.