ರೈಲು ಕಂಬಿ ಅಡ್ಡಾದಿಡ್ಡಿ ದಾಟಿದ್ರೆ ಯಮ ಪ್ರತ್ಯಕ್ಷನಾಗ್ತಾನೆ ನೋಡಿ!

By Kannadaprabha NewsFirst Published Nov 8, 2019, 12:35 PM IST
Highlights

ರೈಲು ನಿಲ್ದಾಣಗಳಲ್ಲಿ ನೀವು ರೈಲು ಹಳಿ ಅಡ್ಡಾದಿಡ್ಡಿ ದಾಟುವಿರಾದರೇ ಅಲ್ಲಿಗೆ ‘ಯಮರಾಜ’ಬರುವುದು ಖಾತ್ರಿ! ಹಳಿಯನ್ನು ನೀವು ದಾಟುವುದು ಬೇಡ, ಯಮರಾಜನೇ ಬಂದು ದಾಟಿಸುತ್ತಾನೆ. 

ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮುಂಬೈ ರೈಲು ನಿಲ್ದಾಣಗಳಲ್ಲಿ ನೀವು ರೈಲು ಹಳಿ ಅಡ್ಡಾದಿಡ್ಡಿ ದಾಟುವಿರಾದರೇ ಅಲ್ಲಿಗೆ ‘ಯಮರಾಜ’ಬರುವುದು ಖಾತ್ರಿ!. 

ಪ್ರಯಾಣಿಕರು ಹಳಿ ದಾಟುವಾಗ ನಿಯಮ ಪಾಲಿಸಲೆಂದು ಮುಂಬೈ ಪಶ್ಚಿಮ ರೈಲ್ವೆ ವಿಭಾಗ ಯಮರಾಜ ನನ್ನೇ ಕೆಲಸಕ್ಕೆ ನಿಯೋಜಿಸಿದೆ. ಅಂದರೆ, ರೈಲ್ವೆ ವಿಭಾಗದ ಪೊಲೀಸ್ ಯಮರಾಜನ ವೇಶ ಧರಿಸಿ ಕಂಬಿ ದಾಟು ವಾಗ ನಿಯಮ ಪಾಲಿಸದ ಪ್ರಯಾಣಿಕರನ್ನು ತನ್ನ ಭುಜದ ಮೇಲೆ ಹೊತ್ತೊಯ್ದು ಕಂಬಿ ದಾಟಿಸುತ್ತಾನೆ. 

ರೈಲ್ವೇ ಇಲಾಖೆ ಎಷ್ಟೇ ಹೇಳಿದ್ರೂ ಜನ ಮಾತ್ರ ಕೇಳುತ್ತಲೇ ಇರಲಿಲ್ಲ. ಒಂದು ಪ್ಲಾಟ್ ಫಾರ್ಮ್ ನಿಂದ ಇನ್ನೊಂದು ಪ್ಲಾಟ್ ಫಾರ್ಮ್ ಗೆ ರೈಲ್ವೇ ಹಳಿಯನ್ನೇ ದಾಟಿಕೊಂಡು ಹೋಗುತ್ತಾರೆ. ಇದರಿಂದ ಬೇಸತ್ತ ರೈಲ್ವೇ ಇಲಾಖೆ ಹೊಸ ಐಡಿಯಾ ಮಾಡಿದೆ. ಜೀವ ತೆಗೆದುಕೊಂಡು ಹೋಗಲು ಬರುವ ಯಮರಾಜ ಇಲ್ಲಿ ಮಾತ್ರ ಜೀವ ಉಳಿಸುತ್ತಾನೆ. ಈ ಐಡಿಯಾಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ವರದಿ ಪ್ರಕಾರ ರೈಲ್ವೇ ಹಳಿ ದಾಟುವಾಗ ಕಳೆದ ವರ್ಷ 1476 ಜನ ಸಾವನ್ನಪ್ಪಿದ್ದರು. ರೈಲಿನಿಂದ ಬಿದ್ದು 650 ಜನ ಸಾವನ್ನಪ್ಪಿದ್ದರು. 

 

click me!