ರಾಜ್ಯದಲ್ಲಿ ಒಂದೆಡೆ ಕೊರೋನಾ ಅಟ್ಟಹಾಸ ಜನರನ್ನು ಕಂಗಾಲು ಮಾಡಿದ್ದರೆ, ಮತ್ತೊಂದೆಡೆ ವರುಣನ ಅಬ್ಬರಕ್ಕೆ ಅನೇಕ ಜಿಲ್ಲೆಗಳಲ್ಲು ಭೂಕುಸಿತ ಉಂಟಾಗಿದೆ. ಇನ್ನು ಕೆಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳ ನಡುವೆಯೇ ಅತ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಮೊದಲ ಸ್ಥಾನ ಪಡೆದಿದೆ. ಇನ್ನು ಗಣ್ಯರನ್ನೂ ಮಹಾಮಾರಿ ಕೊರೋನಾ ಕಾಡಲಾರಂಭಿಸಿದ್ದು, ಮಾಜಿ ಪ್ರಧಾನಿ ಪ್ರಣಬ್ ಮುಖರ್ಜಿ ತಮಗೆ ಸೋಂಕು ತಗುಲಿರುವುದಾಗಿ ಟ್ವೀಟ್ ಮಾಡಿದ್ದಾರೆ. ಈ ಮಹಾಮಾರಿ ನಡುವೆಯೂ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಉತ್ತರ ಪ್ರದೇಶದಲ್ಲಿ ಆರು ವರ್ಷದ ಪುಟ್ಟ ಕಂದ ಅತ್ಯಾಚಾಋಕ್ಕೊಳಪಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದಾಳೆ. ಇಷ್ಟೇ ಅಲ್ಲದೇ ಇಂದಿನ ಆಗಸ್ಟ್ 10ರ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ
ಎಸ್‌ಎಸ್‌ಎಲ್‌ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್
2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇಖಡವಾರು 71.80 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 73.70 ಫಲಿತಾಂಶ ಬಂದಿತ್ತು. ಕೊರೋನಾ ಆತಂಕದ ನಡುವೆಯೂ ಪರೀಕ್ಷೆಗೆ ಹಾಜರಾಗಿದ್ದ 8,11,050 ವಿದ್ಯಾರ್ಥಿಗಳ ಪೈಕಿ 5,82, 360 ಮಂದಿ ಉತ್ತೀರ್ಣರಾಗಿದ್ದಾರೆ. 2,28,734 ವಿದ್ಯಾರ್ಥಿಗಳು ಅನುತ್ತೀಣರಾಗಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ತಗುಲಿದ ಕೊರೋನಾ!
ಕೊರೋನಾ ಅಟ್ಟಹಾಸ ಭಾರತದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಗಣ್ಯರಿಗೂ ಈ ಮಹಾಮಾರಿ ಕಾಡಲಾರಂಭಿಸಿದ್ದು, ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೂ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಸ್ವತಃ ಪ್ರನಭ್ ಮುಖರ್ಜಿಯೆ ಟ್ವಿಟ್ ಮಾಡಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.
SSLC ಫಲಿತಾಂಶ: ಚಿಕ್ಕಬಳ್ಳಾಪುರ ಫಸ್ಟ್, ಯಾದಗಿರಿ ಲಾಸ್ಟ್
ಕರ್ನಾಟಕ ಎಸ್‌ಎಸ್‌ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
BSY ಮತ್ತು ಸಿದ್ದು ನಡುವೆ ಆಸ್ಪತ್ರೆಯಲ್ಲೇ ಮಾತುಕತೆ, ಏನ್ ಚರ್ಚೆ ನಡೀತು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಸಿಎಂ ಯಡಿಯೂರಪ್ಪ ಮಾತಮಾಡಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿರುವ ಉಭಯ ನಾಯಕರು ಪರಸ್ಪರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ನಿನ್ನೆ ಸಂಜೆ ದೂರವಾಣಿ ಮೂಲಕ ಸುಮಾರು ಅರ್ಧಗಂಟೆ ಚರ್ಚೆ ನಡೆಸಿದ್ದಾರೆ. ರಾಜಕಾರಣ, ಮಳೆ, ಕೋರೋನಾ ಸೇರಿದಂತೆ ಲೋಕಾಭಿರಾಮ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯದ ಬಗ್ಗೆ ವಿಶೇಷ ಕಳಕಳಿ ವ್ಯಕ್ತಪಡಿಸಿದ ಯಡಿಯೂರಪ್ಪ ಶೀಘ್ರ ಗುಣಮುಖರಾಗಲು ಹಾರೈಸಿದರು.
ಧರಿಸಿದ್ದ ಸೀರೆ ಬಿಚ್ಚಿ ನದಿಗೆಸೆದು ಮುಳುಗುತ್ತಿದ್ದ ಯುವಕರ ಕಾಪಾಡಿದ ಮಹಿಳೆಯರು!
ಸೋಶಿಯಲ್ ಮೀಡಿಯಾದಲ್ಲಿ ಮೂರು ಗಟ್ಟಿಗಿತ್ತಿಯರಾದ ಸೆಂಥಮೀಜ್ ಸೆಲ್ವಿ(38), ಮುಥಮಲ್(34) ಹಾಗೂ ಅನಂತವಲ್ಲೀ(34) ಭಾರೀ ಸೌಂಡ್ ಮಾಡುತ್ತಿದ್ದಾರೆ. ಇವರ ಸಾಹಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ತಮಿಳುನಾಡಿನ ಕೊಟ್ಟಾರೈ ಅಣೆಕಟ್ಟಿನ ಬಳಿ ನಾಲ್ವರು ಯುವಕರು ಮುಳುಗುತ್ತಿರುವುದನ್ನು ಕಂಡ ಈ ಮಹಿಳೆಯರು ತಾವು ಧರಿಸಿದ್ದ ಸೀರೆಯನ್ನೇ ಬಿಚ್ಚಿ ಇಬ್ಬರು ಯುವಕರನ್ನು ಕಾಪಾಡಿದ್ದಾರೆ.
ಬೆಂಗಳೂರು: ಎಟಿಎಂ ಒಡೆಯಲು ಈ ಕಳ್ಳರು ಮಾಡಿದ್ದ ಮಾಸ್ಟರ್ ಪ್ಲಾನ್!
ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ಕಳ್ಳರು ಎಟಿಎಂ ದೋಚಿದ್ದಾರೆ. ಜಾಲಹಳ್ಳಿಯ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲಾಗಿದೆ. ಗ್ಯಾಸ್ ಕಟರ್ ಬಳಸಿ ಎಟಿಎಂ ಒಡೆದು ಹಣ ಕದ್ದು ಪರಾರಿಯಾಗಿದ್ದಾರೆ. ಎಟಿಎಂ ಒಳಗಿದ್ದ 27 ಲಕ್ಷ ರೂ. ಕಳ್ಳತನವಾಗಿದೆ. ಸೋಮವಾರ ಬೆಳಿಗ್ಗೆ ಹತ್ತಿರದ ಮನೆ ಮಾಲೀಕರು ಗಮನಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
6 ವರ್ಷದ ಬಾಲಕಿಯ ರೇಪ್, ಗುಪ್ತಾಂಗಕ್ಕೆ ಗಂಭೀರ ಗಾಯ: ಜೀವನ್ಮರಣ ಸ್ಥಿತಿಯಲ್ಲಿ ಕಂದ!
ಆರು ವರ್ಷದ ಬಾಲಕಿನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯೊಬ್ಬ ಆಖೆಯನ್ನು ಅತ್ಯಾಚಾರಗೈದು, ಹೊಲವೊಂದರಲ್ಲಿ ಸಾಯಲು ಬಿಟ್ಟ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಗ್ರಾಮಸ್ಥರು ಪತ್ತೆ ಹಚ್ಚಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾಳೆ.
IPL 2020: ಈ ಸಲ ಪಕ್ಕಾ RCB ಕಪ್ ಗೆಲ್ಲುತ್ತೆ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಐಪಿಎಲ್ ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದರೂ ಚಾಂಪಿಯನ್ ಪಟ್ಟ ಅಲಂಕರಿಸಲು ಇದುವರೆಗೂ ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿತ್ತಾದರೂ ಕೊನೆಯ ಕ್ಷಣದಲ್ಲಿ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಸಾಕಷ್ಟು ಅಳೆದು ತೂಗಿ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವ ನೆಚ್ಚಿನ ತಂಡ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಮೂರು ಕಾರಣಗಳಿಂದಾಗಿ RCB ಈ ಬಾರಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಎನಿಸಿದೆ.
'ಫ್ಯಾಂಟಮ್' ಹೊಸ ಪೋಸ್ಟರ್ ರಿಲೀಸ್; ಹೇಗಿದೆ ವಿಕ್ರಾಂತ್ ರೋಣ ಲುಕ್?
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹು ನಿರೀಕ್ಷಿತ 'ಫ್ಯಾಂಟಮ್' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ವಿಕ್ರಾಂತ್ ರೋಣ ಪಾತ್ರದಲ್ಲಿ ಸುದೀಪ್ ಹೇಗಿದ್ದಾರೆ, ನೀವೇ ನೋಡಿ...
ಜಗತ್ತಿನ ನಾಲ್ಕನೇ ಕುಬೇರನ ವಿಚಿತ್ರ ಖಯಾಲಿ ನೋಡಿದ್ರಾ?
ಮುಕೇಶ್ ಅಂಬಾನಿ ಈಗ ಜಗತ್ತಿನ ನಾಲ್ಕನೇ ಅತಿ ದೊಡ್ಡ ಶ್ರೀಮಂತ. ಬಿಲ್ ಗೇಟ್ಸ್, ಎಲಾನ್ ಮಸ್ಕ್, ಝುಕರ್‌ಬರ್ಗ್ ಮುಂತಾದವರೆಲ್ಲ ಈ ಲಿಸ್ಟಿನಲ್ಲಿ ಅಂಬಾನಿಯ ಆಸುಪಾಸಿನಲ್ಲಿದ್ದಾರೆ. ಮುಂಬಯಿಯಲ್ಲಿರುವ ಅಂಟಿಲ್ಲಾ ಹೋಪ್, ಈ ಕುಬೇರನ ಅರಮನೆ, ಇದರಲ್ಲಿ ಎಷ್ಟು ಫ್ಲೋರುಗಳಿವೆ, ಎಷ್ಟು ರೂಮುಗಳಿವೆ ಎಂಬುದು ಸ್ವತಃ ಅಂಬಾನಿಗೇ ಗೊತ್ತಿದೆಯೋ ಇಲ್ಲವೋ. ಇಂಥ ಶ್ರೀಮಂತನಿಗೆ ಇರುವ ಒಂದು ವಿಚಿತ್ರ ಖಯಾಲಿ ಇದೆ.